Padubidri Fraud: 2 ಲಕ್ಷ ಹಣ ಪಡೆದು ವಂಚಿಸಿದ ದಂಪತಿ: ದೂರು ದಾಖಲು

Padubidri Fraud: ವ್ಯಕ್ತಿಯೋರ್ವರಿಂದ 2 ಲಕ್ಷ ರೂಪಾಯಿ ಹಣ ಪಡೆದು ದಂಪತಿ ವಂಚಿಸಿದ್ದಾರೆ. ನಂತರ ಹಣ ಕೇಳಿದ್ದಕ್ಕೆ ಬೆದರಿಕೆಯೊಡ್ಡಿದ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಲ್ಕಿಯ ಸದಾಶಿವ ನಗರದ ಜಮೀಲ್‌ (59 ವರ್ಷ) ಎಂಬವರೇ ವಂಚನೆಗೆ ಒಳಗಾದವರು. ಹಣ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ರಝಾಕ್ (45) ಮತ್ತು ಆತನ ಪತ್ನಿ ಶಾಹಿದ್ (35) ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

Also Read: ಉಡುಪಿ : ಸಾರ್ವಜನಿಕ ಸ್ಥಳದಲ್ಲಿ ಜಗಳ, ಪ್ರಕರಣ ದಾಖಲು

ಮಂಗಳೂರು ತಾಲೂಕಿನ ಕೊಲ್ನಾಡ್‌ ಸೆಂಟ್ರಲ್‌ ಮಾರ್ಕೆಟ್‌ ನಲ್ಲಿ ಹಣ್ಣು ಮಕ್ಕಳು ತರಕಾರಿ ವ್ಯಾಪಾರ ನಡೆಸುತ್ತಿದ್ದ ರಝಾಕ್‌ ತನ್ನ ಸಂಬಂಧಿ ಜಮೀಲ್‌ ಎಂಬವರಿಂದ 2 ಲಕ್ಷ ರೂಪಾಯಿ ಹಣ ಪಡೆದಿದ್ದರು.

ಹಣ ಪಡೆಯುವಾಗ ಒಂದು ತಿಂಗಳ ಒಳಗಾಗಿ ವಾಪಾಸ್‌ ಮಾಡುವುದಾಗಿ ತಿಳಿಸಿದ್ದ ರಝಾಕ್‌ ವರ್ಷ ಕಳೆದರೂ ಹಣ ನೀಡಿರಲಿಲ್ಲ. ಹಣ ಕೇಳಿದಾಗ ರಝಾಕ್‌ ಹಾಗೂ ಆತನ ಪತ್ನಿ ಸತಾಯಿಸಿದ್ದಾರೆ.

Also Read: Manipal News: ಮಣಿಪಾಲ: ಯುವಕ ನಾಪತ್ತೆ, ಸೇತುವೆ ಬಳಿ ಬೈಕ್‌ ಪತ್ತೆ

ರಝಾಕ್‌ ಹಾಗೂ ಶಾಹಿದ್‌ ಹಣ ಕೇಳಿದ್ದಕ್ಕೆ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಬೆದರಿಕೆ ಒಡ್ಡಿದ್ದಾರೆ ಎಂದು ಜಮೀಲ್‌ ಇದೀಗ ಪಡುಬಿದ್ರಿ(Padubidri) ಪೊಲೀಸ್‌ ಠಾಣೆಗೆ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories