ಉಡುಪಿ: ಅಪಘಾತದ ನೆಪದಲ್ಲಿ ಯುವಕರ ಮೇಲೆ ಹಲ್ಲೆ, 40 ಗ್ರಾಂ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
Udupi assault robbery : ಉಡುಪಿ ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಾಸ್ಥಾನದ ಬಳಿ ಸಾಗುತ್ತಿದ್ದಾಗ, ಅನಿರೀಕ್ಷಿತವಾಗಿ ನಾಯಿಯೊಂದು ಬೈಕ್‌ಗೆ ಅಡ್ಡಬಂದಿದೆ. ಇದರಿಂದಾಗಿ ಬೈಕ್‌ನ ನಿಯಂತ್ರಣ ತಪ್ಪಿ ಅಭಯ್ ಮತ್ತು ಶಾಶ್ವತ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.

Udupi assault robbery : ಉಡುಪಿ: ಅಪಘಾತದ ವೇಳೆಯಲ್ಲಿ ಬೈಕ್ ಅಪಘಾತಕ್ಕೆ ಒಳಗಾಗದ ಯುವಕರ ನೆರವಿಗೆ ಧಾವಿಸಿದವರ ಮೇಲೆಯೇ ಸ್ಥಳೀಯರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಉಡುಪಿ ನಗರದ ಬಡಗಬೆಟ್ಟು ಪ್ರದೇಶದಲ್ಲಿ ನಡೆದಿದೆ. ದುಷ್ಕರ್ಮಿಗಳು ಯುವಕರ ಕೊರಳಲ್ಲಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ.
ಬಡಗಬೆಟ್ಟುವಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಸ್. ವೈಭವ್ ಬಿ. ನಾಯಕ್ (21 ವರ್ಷ) ಎಂಬವರು ಉಡುಪಿ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಮೇ 2 ರಂದು ತಮ್ಮ ಮನೆಗೆ ಗೆಳೆಯರಾದ ಶಾಶ್ವತ ಶೆಟ್ಟಿ, ಅಭಯ್ ಸ್ಯಾಮುವೆಲ್, ಯಶಸ್ ಮತ್ತು ಆದಿತ್ಯ ಭಟ್ ಆಗಮಿಸಿದ್ದರು. ರಾತ್ರಿ ಊಟ ಮುಗಿಸಿದ ನಂತರ ಮೇ 3 ನಡು ರಾತ್ರಿ 12:00 ಗಂಟೆಗೆ ಅಭಯ್ ಸ್ಯಾಮುವೆಲ್ ಅವರು ಶಾಶ್ವತ ಶೆಟ್ಟಿಯನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಹೊರಟಿದ್ದರು.
ಉಡುಪಿ ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಾಸ್ಥಾನದ ಬಳಿ ಸಾಗುತ್ತಿದ್ದಾಗ, ಅನಿರೀಕ್ಷಿತವಾಗಿ ನಾಯಿಯೊಂದು ಬೈಕ್‌ಗೆ ಅಡ್ಡಬಂದಿದೆ. ಇದರಿಂದಾಗಿ ಬೈಕ್‌ನ ನಿಯಂತ್ರಣ ತಪ್ಪಿ ಅಭಯ್ ಮತ್ತು ಶಾಶ್ವತ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
Also Read : ಬ್ರಹ್ಮಾವರ: ತಾಯಿಯ ಅಂತ್ಯಸಂಸ್ಕಾರದ ವೇಳೆ ಮನೆಯಲ್ಲಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು
ಸಹಾಯಕ್ಕೆ ಕರೆ ಮಾಡಿ ಹಲ್ಲೆ
ಅಪಘಾತದ ನಂತರ ಅಭಯ್ ವೈಭವ್‌ಗೆ ಮೊಬೈಲ್ ಕರೆ ಮಾಡಿ, ನಮ್ಮ ಸುತ್ತ ಜನರು ಸೇರಿಕೊಂಡು ನಮ್ಮೆ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾನೆ. ಕೂಡಲೇ ವೈಭವ್, ತಮ್ಮ ಗೆಳೆಯರಾದ ಯಶಸ್ ಮತ್ತು ಆದಿತ್ಯ ಅವರೊಂದಿಗೆ ಕಾರಿನಲ್ಲಿ ಅಪಘಾತ ಸ್ಥಳಕ್ಕೆ ಧಾವಿಸಿದರು.
ಅಲ್ಲಿಗೆ ತೆರಳಿದಾಗ ಅಲ್ಲಿದ್ದ ಗುಂಪು ವೈಭವ್ ಹಾಗೂ ಆತನ ಗೆಳೆಯರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಶೇಖರ್ ಎಂಬಾತ ಈ ವೇಳೆ ವೈಭವ್ ಕೆನ್ನೆಗೆ ಹೊಡೆದಿದ್ದಾನೆ ಎಂದು ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಸ್ಥಳೀಯರು ವೈಭವ್, ಶಾಶ್ವತ, ಅಭಯ್ ಹಾಗೂ ಆದಿತ್ಯ ಅವರ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದಾರೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ವೈಭವ್ ಅವರ ತಲೆಗೆ ಹಿಂಬದಿಯಿಂದ ಮರದ ರೀಪಿನಿಂದ ಜೋರಾಗಿ ಹಲ್ಲೆ ನಡೆಸಿದ್ದಾನೆ.
Also Read : ಕುಂದಾಪುರ: ಶುಕ್ರವಾರದ ನಮಾಜ್ ಮುಗಿಸಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, ಪ್ರಕರಣ ದಾಖಲು
ಘಟನೆಯಿಂದ ವೈಭವ್ ಅವರ ತಲೆಗೆ ತೀವ್ರ ಪೆಟ್ಟುಬಿದ್ದು ರಕ್ತಸ್ರಾವವಾಗಿದೆ. ಇದೇ ಗೊಂದಲಮಯ ವಾತಾವರಣದ ಲಾಭ ಪಡೆದ ದುಷ್ಕರ್ಮಿಗಳು, ವೈಭವ್ ಅವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಗಾಯಗೊಂಡ ವೈಭವ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿಯ ಸಮಯದಲ್ಲಿ ಅಪಘಾತಕ್ಕೀಡಾದವರ ಸಹಾಯಕ್ಕೆ ಬಂದ ಯುವಕರ ಮೇಲೆಯೇ ಹಲ್ಲೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
Udupi assault robbery youths 40 gram gold Kannada News



