ಉಡುಪಿಯ ಮೀನುಗಾರರಿಗೂ ತಟ್ಟಿದ ಗ್ಯಾಸ್ ಟ್ರಬಲ್ : ಆಳಸಮುದ್ರ ಮೀನುಗಾರಿಕೆಗೆ ಸಂಕಷ್ಟ
ಮತ್ಸ್ಯಕ್ಷಾಮದಿಂದಾಗಿ ನಷ್ಟದಲ್ಲಿದ್ದ ಮೀನುಗಾರರು ಇದೀಗ ಗ್ಯಾಸ್ ಸಿಲಿಂಡರ್ ಅಲಭ್ಯತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆಯಿಂದಲೂ ವಾಪಸ್ಸಾಗಿದ್ದಾರೆ. ಹೀಗೆ ಆಗಿ ನಮ್ಮ ವ್ಯಾಪಾರ ನಿಂತರೆ ಹೊಟ್ಟೆಪಾಡು ಹೇಗೆ ಸರಿದೂಗಿಸುವುದು ಎಂಬ ಚಿಂತೆ ಮೀನುಗಾರರಲ್ಲಿ ಎದುರಾಗಿದೆ.

ಉಡುಪಿ : ಕರಾವಳಿ ಭಾಗದಲ್ಲಿ ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗಿದ್ದ ಗ್ಯಾಸ್ ಟ್ರಬಲ್ ಇದೀಗ ಮತ್ಸ್ಯೋದಮಕ್ಕೂ ತಟ್ಟಿದೆ. ವಾಣಿಜ್ಯ ಸಿಲಿಂಡರ್ಗಳನ್ನು ಆದ್ಯತೆಯ ಮೇರೆಗೆ ವಿತರಿಸುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ಗಳು ಮಾರುಕಟ್ಟೆಗಳಲ್ಲಿ ಲಭ್ಯವಾಗದೇ ಆಳಸಮುದ್ರ ಮೀನುಗಾರಿಕೆಯನ್ನು ಉಡುಪಿ ಮೀನುಗಾರರು ಬಹುತೇಕ ಸ್ಥಗಿತಗೊಳಿಸಿದ್ದಾರೆ.
ಆಳ ಸಮುದ್ರ ಮೀನುಗಾರಿಕೆಗೆ ಬೋಟ್ಗಳಲ್ಲಿ ತೆರಳುವ ಕಡಲ ಮಕ್ಕಳು ಅಡುಗೆಗೆ ವಾಣಿಜ್ಯ ಸಿಲಿಂಡರ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಇದೀಗ ವಾಣಿಜ್ಯ ಸಿಲಿಂಡರ್ಗಳನ್ನು ಶಾಲೆಯ ಬಿಸಿಯೂಟ, ಆಸ್ಪತ್ರೆ ಹಾಗೂ ಕಾರಾಗೃಹ ಸೇರಿದಂತೆ ಸರ್ಕಾರಿ ಸಂಸ್ಥೆಗಳಿಗೆ ಆದ್ಯತೆಯ ಆಧಾರದಲ್ಲಿ ವಿತರಣೆ ಮಾಡುತ್ತಿರುವುದರಿಂದ ಮೊದಲಿನಷ್ಟು ಸುಲಭದಲ್ಲಿ ವಾಣಿಜ್ಯ ಸಿಲಿಂಡರ್ ಕೈಗೆಟುಕುತ್ತಿಲ್ಲ.
ಮೊದಲೇ ಮತ್ಸ್ಯಕ್ಷಾಮದಿಂದಾಗಿ ನಷ್ಟದಲ್ಲಿದ್ದ ಮೀನುಗಾರರು ಇದೀಗ ಗ್ಯಾಸ್ ಸಿಲಿಂಡರ್ ಅಲಭ್ಯತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆಯಿಂದಲೂ ವಾಪಸ್ಸಾಗಿದ್ದಾರೆ. ಹೀಗೆ ಆಗಿ ನಮ್ಮ ವ್ಯಾಪಾರ ನಿಂತರೆ ಹೊಟ್ಟೆಪಾಡು ಹೇಗೆ ಸರಿದೂಗಿಸುವುದು ಎಂಬ ಚಿಂತೆ ಮೀನುಗಾರರಲ್ಲಿ ಎದುರಾಗಿದೆ. ಹೀಗಾಗಿ ನಮ್ಮನ್ನೂ ಆದ್ಯತೆಯ ಪಟ್ಟಿಗೆ ಸೇರಿಸಿಕೊಳ್ಳುವಂತೆ ಸರ್ಕಾರಕ್ಕೆ ಮೀನುಗಾರರು ಮನವಿ ಮಾಡಿದ್ದಾರೆ.
Also Read : ಅಡುಗೆ ಅನಿಲ ಪೂರೈಕೆಯಲ್ಲಿ ವಿಳಂಬವಾಗುತ್ತಿದೆಯೇ ? ಈ ಸಹಾಯವಾಣಿಗೆ ದೂರು ಸಲ್ಲಿಸಿ
ಈಗಾಗಲೇ ಕದ್ರಿ ಮಂಜುನಾಥ ದೇವಸ್ಥಾನ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಅನ್ನಪ್ರಸಾದಕ್ಕೆ ಸಿಲಿಂಡರ್ ಅಭಾವ ಅಡ್ಡಿಯಾಗಿದೆ. ಆದರೂ ದೇವಸ್ಥಾನಗಳ ಮೆನು ಬದಲಾಯಿಸಿ, ಕಟ್ಟಿಗೆ ಒಲೆಗಳನ್ನು ಉರಿಸಿ ಅಡುಗೆ ಸಿಬ್ಬಂದಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮುಂದುವರಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಈ ಎಲ್ಲಾ ಸಂಕಷ್ಟ ಎದುರಾಗುತ್ತಿದ್ದು ಯುದ್ಧ ಆದಷ್ಟು ಬೇಗ ಕೊನೆಗಾಣಲಿ ಎಂದು ಕರಾವಳಿ ಜನತೆ ಪ್ರಾರ್ಥಿಸುತ್ತಿದ್ದಾರೆ.
Also Read : ಕದ್ರಿ ಶ್ರೀ ಮಂಜುನಾಥ ಸನ್ನಿಧಿಗೂ ತಟ್ಟಿದ ಗ್ಯಾಸ್ ಟ್ರಬಲ್ : ಅಡುಗೆ ಒಲೆಯಲ್ಲಿ ಭೋಜನ ವ್ಯವಸ್ಥೆ
Udupi fishermen deep sea fishing lpg gas shortage issue



