Udupi news (ಉಡುಪಿ): ಬಿಟ್‌ಕಾಯಿನ್ ಹೂಡಿಕೆ ₹1 ಲಕ್ಷ ರೂ. ಆನ್‌ಲೈನ್ ವಂಚನೆ
Udupi news ( ಉಡುಪಿ ): ಬಿಟ್‌ಕಾಯಿನ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿ, ವ್ಯಕ್ತಿಯೊಬ್ಬರಿಂದ 1 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಸ್ವಿಗ್ಗಿ ಸಂಸ್ಥೆಯಲ್ಲಿ ಪುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ ದಾಮೋದರ ಮಂಜುನಾಥ ಸಿಂಗನಕುಳಿ (26 ವರ್ಷ) ಎಂಬವರೇ ವಂಚನೆಗೆ ಒಳಗಾದವರು. ಸೆಪ್ಟೆಂಬರ್ 9 ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ. ಟೆಲಿಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೋರ್ವ ಬಿಟ್‌ಕಾಯಿನ್ ಹಣ ಹೂಡಿಕೆ ಬಗ್ಗೆ ತಿಳಿಸಿದ್ದಾನೆ.
ದಾಮೋದರ ಮಂಜುನಾಥ್ ಅವರು ಆರಂಭದಲ್ಲಿ 1010 ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಇದರಿಂದ ಮಂಜುನಾಥ್‌ಗೆ 453 ರೂಪಾಯಿ ಲಾಭ ದೊರೆತಿದೆ. ಇದರಿಂದಾಗಿ ಹೆಚ್ಚಿನ ಲಾಭದ ಆಸೆಯಿಂದ ಹಂತ ಹಂತವಾಗಿ ಒಟ್ಟು ₹1,04,510 ಗಳನ್ನು ಆರೋಪಿಯು ನೀಡಿದ ಯುಪಿಐ ಐಡಿ ಮತ್ತು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ.
ಆದರೆ ದಾಮೋದರ್ ಮಂಜುನಾಥ್ ಅವರು ಹೆಚ್ಚಿನ ಲಾಭಗಳಿಸಿದ ನಂತರದಲ್ಲಿ ಹಣವನ್ನು ಆರೋಪಿ ವಾಪಾಸ್ ನೀಡಿಲ್ಲ. ಹಣ ಪಡೆಯಲು ಇನ್ನೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕು ಎಂದು ತಿಳಿಸಿದ್ದಾನೆ. ಇದರಿಂದ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.
ಇದನ್ನೂ ಓದಿ: Kundapura news(ಕುಂದಾಪುರ): ಜುಗಾರಿ ಆಡುತ್ತಿದ್ದವರ ನಾಲ್ವರ ಬಂಧನ
ತನಗೆ ₹1,05,520 ವಂಚಿಸಿದ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 173/2025, ಕಲಂ: 318(4) ಬಿಎನ್‌ಎಸ್ ಮತ್ತು 66(ಡಿ) ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಕೋಟ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ, ರಿಕ್ಷಾ ವಶ
ಸಾರ್ವಜನಿಕರು ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗುವ ಮೊದಲು ಎಚ್ಚರಿಕೆ ವಹಿಸುವುದು ಸೂಕ್ತ. ವಂಚನೆಗೆ ಒಳಗಾಗಿರುವ ಕುರಿತು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
udupi news bitcoin investment 1 lakh rs online fraud



