ಉಡುಪಿ ಸಮಾಧಾನ ಮಹೋತ್ಸವ : 38 ಮಂದಿ ವಿರುದ್ದ ಪ್ರಕರಣ
ಉಡುಪಿ ಜಿಲ್ಲಾ ಚರ್ಚುಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮಕ್ಕೆ, ಮೋಹನ್ ಸಿ. ಲಾಜರಸ್ ಅವರಿಗೆ ಆಹ್ವಾನ ನೀಡಿದ್ದಕ್ಕೆ. ಹಿಂದೂ ಜಾಗರಣಾ ವೇದಿಕೆಯು ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಉಡುಪಿ : ಸಮಾಧಾನ ಮಹೋತ್ಸವ ಕಾರ್ಯಕ್ರವನ್ನು ವಿರೋಧಿಸಿ ಪ್ರತಿಭಟಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ವಿರುದ್ದ ಇದೀಗ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಚರ್ಚುಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮಕ್ಕೆ, ಮೋಹನ್ ಸಿ. ಲಾಜರಸ್ ಅವರಿಗೆ ಆಹ್ವಾನ ನೀಡಿದ್ದಕ್ಕೆ. ಹಿಂದೂ ಜಾಗರಣಾ ವೇದಿಕೆಯು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಆಯೋಜಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಆದೇಶದಂತೆ ಪೊಲೀಸರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಿಗಿ ಭದ್ರತೆಯನ್ನು ಒದಗಿಸಿದ್ದರು.
ಹಿಂದೂ ಮುಖಂಡರಾದ ಶ್ರೀಕಾಂತ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಉಡುಪಿ ನಗರ ಗೋವಿಂದ ಕಲ್ಯಾಣ ಮಂಟಪದಿಂದ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ತೆರಳುತ್ತಿದ್ದ ಕಾರ್ಯಕರ್ತರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅನುಮತಿಯನ್ನೇ ಪಡೆಯದೇ ಪ್ರತಿಭಟನೆ ನಡೆಸಿದ ಆರೋಪದ ಅಡಿಯಲ್ಲಿ ಒಟ್ಟು 38 ಮಂದಿಯ ವಿರುದ್ದ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಸೇರಿದಂತೆ ಸಂತೋಷ್ (27), ಉಮೇಶ್ ನಾಯ್ಕ್ (51), ಉಮೇಶ್ (35), ರಮೇಶ್ ಶೆಟ್ಟಿ (43), ರಾಜೇಶ್ ಉಚ್ಚಿಲ (41), ದರ್ಶನ್ (23), ಉದಯ ಕುಮಾರ್ (44), ಪ್ರಶಾಂತ್ (40), ಗುರುರಾಜ್ (37), ಅಜೀತ್ ಗೋಳಿಕಟ್ಟೆ (39), ರಾಧಾಕೃಷ್ಣ (55), ರೀತೇಶ್ ಪೂಜಾರಿ (25), ಜಗದೀಶ ಪೂಜಾರಿ (31).
Also Read: ಶಂಕರನಾರಾಯಣ : ಬೆಳ್ವೆಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ; ಐವರ ಬಂಧನ
ಅಲ್ಲದೇ ಮಹೇಶ್ ಪೂಜಾರಿ (33), ಸುನೀಲ್ ಪೂಜಾರಿ (26), ಚಿರಾಗ್ ಎಚ್.ಎಸ್. (22), ವಿಕೇಶ್ ಎಸ್. (29), ನಿತೇಶ್ (32), ಸರೋಜಾ ಶೆಣೈ (52) ಸುದೀಪ್ ಕಡಿಯಾಳಿ (23), ನಿಖಿಲ್ (28), ಸುಜೀತ್ (28), ಸಾಜನ್ ಎಂ. ಶೆಟ್ಟಿ (34), ರಾಜೇಶ್ ಪೈಯಾರ್ (43), ಲಕ್ಷ್ಮಣ್ ಕರ್ಕೇರ (49), ಸಾತ್ವೀಕ್ (20), ಮನೀಷ್ (21), ಅಶ್ವತ್ ಆಚಾರ್ಯ (37), ದಿನೇಶ್ ಸಾವಂತ್ (47) ಶರತ್ ಕುಮಾರ್ ಬೈಲಕೆರೆ (42), ಶೈಲೇಂದ್ರ ಶೆಟ್ಟಿ (50), , ತಾರಾ ಎಸ್., ತಾರಾ ಆಚಾರ್ಯ (55), ಸಿಂಚನ್ (21), ಧನುಷ್ ಶೆಟ್ಟಿ (21), ವಿಶೇಕ್ ಶೆಟ್ಟಿ (20), ಸೇರಿದಂತೆ ಒಟ್ಟು 38 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
Udupi Peace Festival Case against 38 people



