ಪ್ರಮೋದ್ ಮಧ್ವರಾಜ್ ಕಡೆಗಣನೆ ವಿವಾದ : ಬಿಜೆಪಿಯಿಂದ ಡ್ಯಾಮೇಜ್‌ ಕಂಟ್ರೋಲ್‌

ಉಡುಪಿ: ಶ್ರೀಕೃಷ್ಣಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಪ್ರಮೋದ್‌ ಮಧ್ವರಾಜ್‌ (Udupi Pramod Madhwaraj) ಅವರಿಗೆ ಅವಕಾಶ ನಿರಾಕರಿಸಿದ ಆರೋಪದ ಬೆನ್ನಲ್ಲೇ ಉಡುಪಿ ಜಿಲ್ಲಾ ಬಿಜೆಪಿ ಡ್ಯಾಮೆಜ್‌ ಕಂಟ್ರೋಲ್‌ಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನಾಯಕರು ಪ್ರಮೋದ್ ಮಧ್ವರಾಜ್ ಅವರೊಡನೆ ಜಂಟಿ ಸುದ್ದಿಗೋಷ್ಠಿ ನಡೆಸಿ ತನ್ನ ನಿಲುವನ್ನು ಸ್ಪಷ್ಟಪಡಿಸಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು, ತಮ್ಮ ಯಾವುದೇ ಹಿಂದಿನ ಹೇಳಿಕೆಗಳಲ್ಲಿ ಅಸಮಾಧಾನದ ಭಾವನೆ ಇರಲಿಲ್ಲ. ಮಠವಾಗಲಿ, ಜಿಲ್ಲಾ ಬಿಜೆಪಿಯಾಗಲಿ ನನ್ನ ಪ್ರವೇಶಕ್ಕೆ ತೊಂದರೆ ನೀಡಿಲ್ಲ. ಯಾರನ್ನೂ ನಾನು ದೂರವುದಿಲ್ಲ. ನನ್ನ ಸೇವೆಯನ್ನು ಪ್ರಧಾನಿ ಉದ್ಘಾಟಿಸಿರುವುದು ನನಗೆ ಅಪಾರ ಸಂತೋಷ ಎಂದು ಅವರು ಪುನರುಚ್ಚರಿಸಿದ್ದಾರೆ.

ಮಠದವರೂ ಅಲ್ಲ, ಜಿಲ್ಲಾ ಬಿಜೆಪಿ ನಾಯಕರಾಗಲಿ ಯಾರು ಕೂಡ ನನ್ನ ಕಡೆಗಣಿಸಿದ್ದಾರೆ ಎನಿಸುತ್ತಿಲ್ಲ. ನನ್ನನ್ನು ಕಡೆಗಣಿಸಿದವರಾರು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ, ಅದನ್ನು ಹುಡುಕುವ ಪ್ರಯತ್ನ ನಾನು ಮಾಡಿಲ್ಲ. ಎಂಬುದು ಸ್ಪಷ್ಟಎಂದು ಮಧ್ವರಾಜ್ ತಿಳಿಸಿದರು.

ಕನಕನ ಕಿಂಡಿಗೆ ಸ್ವರ್ಣ ಕವಚ ದಾನ ಮಾಡಿದ ವ್ಯಕ್ತಿಯಾಗಿ ಪ್ರಧಾನಿಯ ಉದ್ಘಾಟನಾ ಕ್ಷಣವನ್ನು ಸ್ಥಳದಲ್ಲೇ ನಿಂತು ವೀಕ್ಷಿಸುವ ಆಸೆ ಇದ್ದರೂ ಅದು ಸಾಧ್ಯವಾಗಿಲ್ಲವೆಂದ ತನ್ನ ಪರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪರವಾಗಿ ಅಭಿಪ್ರಾಯ ಹಂಚಿದವರಿಗೆ ಪತ್ರಿಕಾಗೋಷ್ಟಿಯಲ್ಲಿ ಧನ್ಯವಾದ ತಿಳಿಸಿದ್ದಾರೆ.

ಇನ್ನು ಈ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷರಿಂದ ಸ್ಪಷ್ಟನೆ ಮುಂದಾಗಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಠ ಮತ್ತು ನಮ್ಮಿಂದ ಕಳುಹಿಸಿದ ಅತಿಥಿಗಳ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಅವರ ಹೆಸರು ಸ್ಪಷ್ಟವಾಗಿ ಸೇರಿಸಲಾಗಿತ್ತು.

]ಆದರೆ ಪ್ರಧಾನಿಯ ಕಚೇರಿಯಿಂದ ಪರಿಷ್ಕೃತ ಪಟ್ಟಿಯನ್ನು ಹಿಂತಿರುಗಿಸಿದಾಗ ಅವರು ಸೇರಿದಂತೆ ಹಲವು ಹೆಸರುಗಳು ಇರಲಿಲ್ಲ. ಇದರಲ್ಲಿ ಜಿಲ್ಲಾ ಬಿಜೆಪಿ ಯಾವುದೇ ರೀತಿಯಲ್ಲೂ ಪಾತ್ರವಹಿಸಿಲ್ಲ. ಪ್ರಮೋಧ್ ಮಧ್ವರಾಜ್ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹಾಲು–ಸಕ್ಕರೆ ಬೆರೆತಂತೆ ಬಿಜೆಪಿ ಮತ್ತು ಪ್ರಮೋದ್ ಮಧ್ವರಾಜ್ ಒಟ್ಟಿದ್ದೇವೆ ಎಂದ ಅವರು, ರೋಡ್‌ಶೋ ಮತ್ತು ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದನ್ನು ಉಲ್ಲೇಖಿಸಿದರು.

ಇನ್ನು ಈ ಪತ್ರಿಕಾಗೋಷ್ಟಿಯಲ್ಲಿ ಶಾಸಕ ಯಶಪಾಲ್ ಸುವರ್ಣ ಅನುಪಸ್ಥಿತಿ ಎದ್ದು ಕಾಣುತ್ತಿತ್ತು, ಶಾಸಕರ ಆಪ್ತ ಸಹಾಯಕ ಮಾತ್ರ ಪತ್ರಿಕಾಗೋಷ್ಟಿಯಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದಿಷ್ಟು ಪಶ್ನೆಗೂ ಕಾರಣವಾಗಿದೆ.

Udupi Pramod Madhwaraj Sidelining BJP Controversy

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories