ಉಡುಪಿ : ಅಂಬಲಪಾಡಿ ದೇವಸ್ಥಾನದಲ್ಲಿ ಸರಗಳ್ಳತನ ಯತ್ನ: ಇಬ್ಬರು ಮಹಿಳೆಯರ ಬಂಧನ

Udupi ambalapadi temple : (ಉಡುಪಿ): ಅಂಬಲಪಾಡಿಯ ಜನಾರ್ಧನ ಮತ್ತು ಮಹಾಕಾಳಿ ದೇವಾಸ್ಥಾನಕ್ಕೆ ದೇವರ ದರ್ಶನಕ್ಕೆ ಬರುತ್ತಿದ್ದ ಮಹಿಳೆಯರ ಚಿನ್ನದ ಸರವನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ.

ನೀಲಾದೇವಿ ಮತ್ತು ಗಂಗಾದೇವಿ ಎಂಬವರೇ ಬಂಧಿತ ಆರೋಪಿಗಳು. ಸ್ಮಿತಾ ಸಾಲ್ಯಾನ್‌ ಮತ್ತು ಅವರ ತಾಯಿ ಪುಷ್ಪಾ ಸಾಲ್ಯಾನ್‌ ಅವರು ಅಕ್ಟೋಬರ್‌ 1 ರಂದು ಅಂಬಲಪಾಡಿ ದೇವಾಲಯಕ್ಕೆ ಆಗಮಿಸಿದ್ದರು.

ಪೂಜೆ ಮುಗಿಸಿ, ಮಧ್ಯಾಹ್ನ 2:00 ಗಂಟೆ ಸುಮಾರಿಗೆ ದೇವಸ್ಥಾನದ ( Udupi ambalapadi temple) ಎಡಬದಿಯಿರುವ ನಾಗಬನದಲ್ಲಿ ಪುಷ್ಪಾ ಸಾಲ್ಯಾನ್‌ರವರು ಕೈಮುಗಿಯುತ್ತಿದ್ದಾಗ, ಅವರ ಎರಡು ಪವನ್ ತೂಕದ ಬಂಗಾರದ ಸರ (ಅಂದಾಜು ಮೌಲ್ಯ ₹ 1,49,000) ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ: ಕಾರ್ಕಳ : ಹಾಡುಹಗಲೇ ಬೀಗ ಒಡೆದು ಮನೆ ದರೋಡೆ, 6.5 ಲಕ್ಷ ರೂ. ಮೌಲ್ಯದ ಚಿನ್ನ, ಸೊತ್ತು ಕಳವು

ಮಹಿಳೆ ಕಿರುಚಿಕೊಳ್ಳುತ್ತಿದ್ದಂತೆಯೇ ಅಲ್ಲಿದ್ದ ಸಾರ್ವಜನಿಕರು ಇಬ್ಬರು ಮಹಿಳೆಯರು ಓಡಿ ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಹಿಂಬಾಲಿಸಿ ಇಬ್ಬರು ಮಹಿಳೆಯರನ್ನು ಬೆನ್ನಟ್ಟಿದ್ದಾರೆ.

ನಂತರ ದೇವಾಲಯದ ವಾಚ್‌ಮೆನ್‌ಗಳ ಸಹಕಾರದಿಂದ ಇಬ್ಬರು ಮಹಿಳೆಯರನ್ನು ತಡೆದು ನಿಲ್ಲಿಸಿದ್ದು, ಬ್ಯಾಗ್‌ ಪರಿಶೀಲನೆ ನಡೆಸಿದಾಗ ಅವರ ಬ್ಯಾಗ್‌ನಲ್ಲಿ ಪುಷ್ಪಾ ಸಾಲ್ಯಾನ್‌ ಅವರ ಕಳುವಾಗಿದ್ದ ಬಂಗಾರದ ಸರ ಪತ್ತೆಯಾಗಿದೆ.

ಇದನ್ನೂ ಓದಿ: ಅಜೆಕಾರು: ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ವಿರುದ್ದ ಅವಹೇಳನಕಾರಿ ಪೋಸ್ಟ್‌, ಪ್ರಕರಣ ದಾಖಲು

ಈ ಕುರಿತು ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಮಹಿಳೆಯರು ಈ ಹಿಂದೆ ಯಾವುದಾದ್ರೂ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದಾರೆಯೇ ಅನ್ನೋ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories