Delhi Viral News: 40 ಲಕ್ಷ ರೂಪಾಯಿ ಮೌಲ್ಯದ ದೇಗುಲದ ಕಳಶ ಕದ್ದ ಕಿರಾತಕ : ಕಳ್ಳತನದ ವಿಡಿಯೋ ವೈರಲ್​


Delhi Viral News: ಜೈನ ದೇವಾಲಯದಲ್ಲಿ ಅಳವಡಿಸಲಾಗಿದ್ದು ಬರೋಬ್ಬರಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಲೇಪಿತ ಕಳಶ ಕಳುವು ಮಾಡಿದ ಆಘಾತಕಾರಿ ಘಟನೆಯು ಈಶಾನ್ಯ ದೆಹಲಿ(Delhi)ಯ ಜ್ಯೋತಿ ನಗರದಲ್ಲಿ ಸಂಭವಿಸಿದೆ.

ಕಳಶ ಕಳುವು ಮಾಡುತ್ತಿರುವ ದೃಶ್ಯಾವಳಿಗಳು ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕಳ್ಳತನದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

Also Read: ಪಾದ ತೊಳೆದು ನೀರು ಕುಡಿಯುವಂತೆ ಯುವಕನಿಗೆ ಚಿತ್ರಹಿಂಸೆ : ವೈರಲ್​ ಆಯ್ತು ಅಮಾನವೀಯ ವಿಡಿಯೋ

ರಲ್ ಆಗಿರುವ ವಿಡಿಯೋದಲ್ಲಿ ಚಿನ್ನ ಲೇಪಿತ ಕಳಶವನ್ನು ಕದ್ದ ಬಳಿಕ ಆರೋಪಿಯು ದೇವಾಲಯದ ಆವರಣದಲ್ಲಿ ಕಂಬದಿಂದ ಕೆಳಗಿಳಿಯುತ್ತಿರುವ ದೃಶ್ಯ ಕಾಣಬಹುದಾಗಿದೆ. ಹಾಗೂ ಮತ್ತೊಂದು ವಿಡಿಯೋ ಆರೋಪಿ ಕಳಶ ಕದ್ದೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ.

ಸ್ಥಳೀಯ ಠಾಣೆ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಈ ಕಳಶವನ್ನು ಎಂಟು ಲೋಹಗಳನ್ನು ಬಳಸಿ ಮಾಡಲಾಗಿದೆ. ಇದನ್ನು ಆಸ್ತ ಧಾತು ಎಂದು ಕರೆಯಲಾಗುತ್ತದೆ. ಈ ಶುಭ ಮಿಶ್ರಲೋಹಗಳ ಕಳಶವನ್ನು ಬಹಳ ವರ್ಷಗಳ ಹಿಂದೆಯೇ ದೇವಸ್ಥಾನದ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಲಾಗಿತ್ತು.

ಇದರಲ್ಲಿ 200 ಗ್ರಾಂ ಮೌಲ್ಯದ ಚಿನ್ನ ಬಳಕೆ ಮಾಡಲಾಗಿದ್ದು ಪ್ರಸ್ತುತ ಇದರ ಮೌಲ್ಯ 35-40 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.

Also Read: ವಿಶ್ವದ ಅತಿ ಶ್ರೀಮಂತ ಈ ರಾಜಕುಮಾರಿಯ ಆದಾಯ ಕೇಳಿದ್ರೆ ತಲೆ ತಿರುಗುತ್ತೆ

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories