ಜಪಾನಿ ಪ್ರವಾಸಿಗರಿಂದ ಲಂಚ ಪಡೆದ ಪೊಲೀಸ್ ಸಿಬ್ಬಂದಿ; ಕೊನೆಗೆ ಆಗಿದ್ದೇ ಬೇರೆ ! ವಿಡಿಯೊ ಇದೆ ನೋಡಿ

Viral Vedio : ಗುರುಗ್ರಾಮ: ಭಾರತವನ್ನು ‘ಭ್ರಷ್ಟಾಚಾರ ಮುಕ್ತ’ ಎಂದು ಹೇಳಿಕೊಳ್ಳುತ್ತಿದ್ದರೂ, ಕೂಡ ಇಲ್ಲಿ ಪ್ರತಿದಿನ ಲಂಚದ ಪ್ರಕರಣಗಳು ವರದಿಯಾಗುತ್ತಿರುತ್ತದೆ. ಇದು ಭಾರತದಲ್ಲಿ ಈಗ ಸಾಮಾನ್ಯವಾಗಿಬಿಟ್ಟಿದೆ.

ಇತ್ತೀಚೆಗೆ ಅಂತಹದೊಂದು ಲಂಚದ ಪ್ರಕರಣ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸ್ಕೂಟರ್ನಲ್ಲಿ ಹಿಂಬದಿಯಲ್ಲಿ ಕುಳಿತ ವ್ಯಕ್ತಿ ಹೆಲ್ಮೆಟ್ ಧರಿಸದ ಕಾರಣ ಸಂಚಾರ ಪೊಲೀಸರು ಆ ಇಬ್ಬರು ಜಪಾನಿನ ಪ್ರವಾಸಿಗರಿಂದ ₹1,000 ಲಂಚ ಕೇಳಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೈರಲ್ ವಿಡಿಯೊದಲ್ಲಿ ಸ್ಕೂಟರ್ ಅನ್ನು ಹೆಲ್ಮೆಟ್ ಧರಿಸಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದಳು. ಆದರೆ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ವಿಡಿಯೊದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಪ್ರವಾಸಿಗರಿಗೆ ದಂಡವಾಗಿ ₹1,000 ಪಾವತಿಸಬೇಕಾಗುತ್ತದೆ ಎಂದು ಹೇಳುವುದು ರೆಕಾರ್ಡ್ ಆಗಿದೆ. ಕೊನೆಗೆ ಪ್ರವಾಸಿಗ ಅಧಿಕಾರಿಗೆ ಎರಡು ₹500 ನೋಟುಗಳನ್ನು ಅಧಿಕಾರಿಗಳಿಗೆ ನೀಡಿದ್ದಾನೆ.

ಸಂಚಾರ ನಿಯಮಗಳ ಪ್ರಕಾರ, ಹೆಲ್ಮೆಟ್ ಧರಿಸದ ಹಿಂಬದಿ ಸವಾರನಿಗೆ ₹1,000 ದಂಡ ವಿಧಿಸಲಾಗುತ್ತದೆ. ಆದರೆ, ದಂಡವನ್ನು ಪರಿವಾಹನ್ ಅಪ್ಲಿಕೇಶನ್ ಅಥವಾ ಪೋರ್ಟಲ್ ಮೂಲಕ ಡಿಜಿಟಲ್ ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಅಪರಾಧಿ ಸ್ಥಳದಲ್ಲೇ ದಂಡವನ್ನು ಪಾವತಿಸಲು ಬಯಸಿದರೆ, ಪೊಲೀಸರು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಥವಾ UPI ಪಾವತಿಗಾಗಿ ಪಾಯಿಂಟ್ ಆಫ್ ಸೇಲ್ (POS) ಯಂತ್ರವನ್ನು ಒದಗಿಸುವುದು ಅಥವಾ ಇ-ಚಲನ್ ಯಂತ್ರವನ್ನು ಬಳಸಿಕೊಂಡು ರಶೀದಿಯನ್ನು ನೀಡುಬೇಕಾಗುತ್ತದೆ. ಆದರೆ ಇಲ್ಲಿ ಯಾವುದೇ ವಿಧಾನವನ್ನು ಅನುಸರಿಸಲಾಗಿಲ್ಲ.

ಹಾಗಾಗಿ ಜಪಾನಿ ಪ್ರವಾಸಿಗರು ಇದನ್ನು ವಿಡಿಯೊ ಮಾಡಿ “ಲಂಚ ಪಡೆದಿದ್ದಾರೆ” ಎಂದು ಆರೋಪ ಮಾಡಿ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲು ಗುರುಗ್ರಾಮ್ ಪೊಲೀಸರನ್ನು ಟ್ಯಾಗ್ ಮಾಡಿದ ಇತರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಸ್ಕೂಟರ್ ನಲ್ಲಿದ್ದ ಹಿಂಬದಿ ಸವಾರನೊಬ್ಬ ಈ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಹಾಗೂ ವಿಡಿಯೊದಲ್ಲಿರುವ ಪೊಲೀಸರು ಹಣವನ್ನು ಸ್ವೀಕರಿಸಿ, ರಶೀದಿಯೂ ನೀಡದೆ ಹೋಗುವಂತೆ ಹೇಳಿದ್ದಾರೆ.

ಪ್ರವಾಸಿಗರು ಸ್ಥಳದಲ್ಲಿದ್ದ ಹಲವರನ್ನು ತೋರಿಸಿ ಅವರು ಹೆಲ್ಮೆಟ್ ಧರಿಸಿಲ್ಲ ಆದರೆ ಅವರನ್ನು ತಡೆಯಲಿಲ್ಲ ಎಂದು ಆರೋಪಿಸಿದ್ದಾರೆ. ಪೊಲೀಸರು ಯಾವುದೇ ಔಪಚಾರಿಕ ರಶೀದಿ ನೀಡದೆ ಹಣವನ್ನು ಸ್ವೀಕರಿಸಿದ್ದು, ವಹಿವಾಟಿನ ಪಾರದರ್ಶಕತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ

ಈ ವೈರಲ್ ವಿಡಿಯೊ (Viral Vedio) ಕೆಲವೇ ಗಂಟೆಗಳಲ್ಲಿ 386,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.

ಸಾರ್ವಜನಿಕರ ಪ್ರತಿಕ್ರಿಯೆಯ ನಂತರ, ಗುರುಗ್ರಾಮ್ ಸಂಚಾರ ಪೊಲೀಸ್ ಇಲಾಖೆ ಘಟನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಹಾಗೂ ಸಂಚಾರ ಸಿಬ್ಬಂದಿಗೆ ಸಂಬಂಧಿಸಿದ ಲಂಚ ಅಥವಾ ದುಷ್ಕೃತ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯೊಂದಿಗೆ ನಾಗರಿಕರು ಮುಂದೆ ಬರಬೇಕೆಂದು ಇಲಾಖೆ ಒತ್ತಾಯಿಸಿದೆ.ಅವರ ಗುರುತು ಗೌಪ್ಯವಾಗಿ ಉಳಿಯುತ್ತದೆ ಎಂದು ಖಚಿತಪಡಿಸಿದೆ.

Police personnel who took bribe from Japanese tourists; Finally, something different happened Viral Vedio

Related Stories