ಧ್ವಂಸವಾಗಲಿದೆಯಾ ಪ್ಯಾರಿಸ್​ನ ಐಕಾನಿಕ್​ ಐಫೆಲ್​ ಟವರ್​ : ಇಲ್ಲಿದೆ ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು

Viral News: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪ್ಯಾರಿಸ್​ನಲ್ಲಿರುವ ಐಫೆಲ್​ ಟವರ್​​ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಎಂಬ ಬಯಕೆ ಹಲವರದ್ದು. ಆದರೆ ಈ ನಡುವೆಯೇ ಫ್ರಾನ್ಸ್(France) ಸರ್ಕಾರವು 2026ರಲ್ಲಿ ಈ ಐಕಾನಿಕ್​ ಟವರ್​ರನ್ನು ಧ್ವಂಸಗೊಳಿಸಲು ನಿರ್ಧರಿಸಿದೆ ಎಂಬ ವದಂತಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

ಈ ವದಂತಿ ಎಲ್ಲಿಂದ ಆರಂಭಗೊಂಡಿತು ಎಂಬುದಕ್ಕೆ ನಿಖರವಾದ ಮಾಹಿತಿ ಇಲ್ಲವಾದರೂ ಸಹ ವಿಡಂಬನಾತ್ಮಕ ಪೋಸ್ಟ್​ಗಳಿಗೆ ಹೆಸರುವಾಸಿಯಾಗಿರುವ ‘ಟ್ಯಾಪಿಯೋಕಾ ಟೈಮ್ಸ್’ ಎಂಬ ವೆಬ್​ಸೈಟ್​ನಲ್ಲಿ ಸೆಪ್ಟೆಂಬರ್​ 18ರಂದು ಈ ಕುರಿತಾದ ಲೇಖನ ಪ್ರಕಟವಾಗಿದೆ ಎನ್ನಲಾಗಿದೆ. ಈ ಲೇಖನದಿಂದ ಐಫೆಲ್​ ಟವರ್​​ ಬಂದ್​ ಆಗಲಿದ್ದು ಇನ್ಮೇಲೆ ಯಾರಿಗೂ ಈ ಐಕಾನಿಕ್​ ಟವರ್​ ನೋಡಲು ಸಾಧ್ಯವಿಲ್ಲ ಎಂದು ಬರೆಯಲಾಗಿತ್ತು ಎನ್ನಲಾಗಿದೆ.

ಈ ಲೇಖಕನದಲ್ಲಿ ವಕ್ತಾರರೊಬ್ಬರು ನೀಡಿದ ಹೇಳಿಕೆಯಂತೆ ಬಿಂಬಿಸಲಾಗಿದ್ದು ‘ ಚಿಕ್ಕಮಕ್ಕಳು ಕೂಡ ಅಲ್ಲಿಗೆ ಹೋಗಲು ಬಯಸುವುದಿಲ್ಲ. ಟವರ್​ನ ಸುತ್ತಲೂ ಡ್ರೋನ್​ಗಳ ಹಾರಾಟದ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಬಹುಶಃ ಇದೆ ಕಾರಣಕ್ಕೆ ಸಂದರ್ಶಕರ ಸಂಖ್ಯೆ ಕೂಡ ಕಡಿಮೆಯಾಗಿದ್ದರಬಹುದು ಎಂದು ಹೇಳಲಾಗಿದೆ.

Also Read: Viral News: ಸಮೋಸಾ ತರಲಿಲ್ಲವೆಂದು ಪತಿ ಹಾಗೂ ಮಾವನಿಗೆ ಹೊಡೆದ ಮಹಿಳೆ

ಇದು ಮಾತ್ರವಲ್ಲದೇ ಐಫೆಲ್​ ಟವರ್​ನಲ್ಲಿ ಅಳಿಲುಗಳು ಹಾಗೂ ಪಾರಿವಾಳಗಳ ಸಂಖ್ಯೆ ಮಿತಿಮೀರಿ ಹೋಗಿರುವ ಹಿನ್ನೆಲೆಯಲ್ಲಿ ಅದನ್ನು ಕೆಡವಲಾಗುವುದು ಎಂದು ಹೇಳಲಾಗಿದೆ. ಹಾಗೂ ಈ ಜಾಗದಲ್ಲಿ ಲಾಸ್​ ವೇಗಾಸ್​ ಶೈಲಿಯ ಸಂಗೀತ ಸ್ಥಳ ಅಥವಾ ವಾಟರ್​ ಸ್ಲೈಡ್​ಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.

2026ರಿಂದ ಟವರ್​ ಧ್ವಂಸ ಕಾರ್ಯ ಆರಂಭಗೊಳ್ಳಲಿದ್ದು ಯಾರಿಗಾದರೂ ಐಫೆಲ್​ ಟವರ್​ ನೋಡುವೆ ಆಸೆಯಿದ್ದರೆ ಈಗಲೇ ಫ್ರಾನ್ಸ್​ಗೆ ಪ್ರಯಾಣ ಬೆಳೆಸಿ ಎಂದು ಹೇಳಲಾಗಿತ್ತು.ಈ ಲೇಖನವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.

ಆದರೆ ಅಸಲಿಗೆ ಇದು ಸಂಪೂರ್ಣ ಕಾಲ್ಪನಿಕ ಲೇಖನವಾಗಿದೆ. ಐಫಲ್​ ಟವರ್​ ನಿರ್ವಹಣೆ ನೋಡುತ್ತಿರುವ ಡಿ’ಎಕ್ಸ್‌ಪ್ಲೋಯಿಟೇಶನ್ ಡಿ ಲಾ ಟೂರ್ ಐಫೆಲ್ ಅಥವಾ ಫ್ರಾನ್ಸ್​ ಸರ್ಕಾರವು ಈ ಐಕಾನಿಕ್​ ಟವರ್​ ಧ್ವಂಸ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಹೀಗಾಗಿ ಐಫೆಲ್​ ಟವರ್​ ಪ್ರಿಯರು ಭಯಪಡುವ ಅವಶ್ಯಕತೆಯಿಲ್ಲ.

Also Read: Viral Video: ಅಮ್ಮನ ಸೀರೆಯನ್ನೇ ಧೋತಿ ಮಾಡಿಕೊಂಡ ಮಗ; ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ!

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories