Horoscope Today : ದಿನಭವಿಷ್ಯ ಜನವರಿ 20 2025 ಸೋಮವಾರ. ಜ್ಯೋತಿಷ್ಯದ ಪ್ರಕಾರ ಚಿತ್ರಾ ನಕ್ಷತ್ರವು ಇಂದು ದ್ವಾದಶರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ರವಿಯೋಗದಿಂದ ತುಲಾ, ಧನಸ್ಸು ಸೇರಿದಂತೆ ಐದು ರಾಶಿಯವರು ವಿಶೇಷ ಲಾಭವನ್ನು ಪಡೆಯುತ್ತಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು ಹನ್ನೆರಡು ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ ತಿಳಿಯೋಣ.
ಮೇಷರಾಶಿ ದಿನಭವಿಷ್ಯ
ಪೂರ್ವಿಕರ ಆಸ್ತಿಯಿಂದ ಪಾಲು ದೊರೆಯಲಿದೆ. ಕೋಪಗೊಂಡ ಕುಟುಂಬ ಸದಸ್ಯರನ್ನು ಸಮಾಧಾನ ಪಡಿಸುವಿರಿ. ಸೋಮಾತರಿತನವನ್ನು ನೀವು ಬಿಟ್ಟು ಬಿಡಿ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಯಶಸ್ಸು ದೊರೆಯಲಿದೆ. ಇತರರಿಗೆ ಕೈಲಾದಷ್ಟು ಸಹಾಯವನ್ನು ಮಾಡಿ.ʼ
ವೃಷಭರಾಶಿ ದಿನಭವಿಷ್ಯ
ಯಾವುದೇ ಕೆಲಸ ಕಾರ್ಯಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಮನೆಯಲ್ಲಿ ಉಂಟಾಗುವ ಜಗಳದಿಂದ ನಿಮಗೆ ಸಮಸ್ಯೆ ಉಂಟಾಗಬಹುದು. ಕುಟುಂಬ ಸದಸ್ಯರು ನಿಮಗೆ ಸಹಕಾರವನ್ನು ಮಾಡಲಿದ್ದಾರೆ. ಸಹೋದರಿಯ ಮದುವೆಗೆ ಸಂಬಂಧಿಸಿದಂತೆ ಶುಭ ವಾರ್ತೆ ಕೇಳುವಿರಿ.
ಮಿಥುನರಾಶಿ ದಿನಭವಿಷ್ಯ
ಸಾಮಾಜಿಕ ಕಾರ್ಯಗಳ ಕಡೆಗೆ ಗಮನ ಹರಿಸುವಿರಿ. ಸಾರ್ವಜನಿಕವಾಗಿ ಇತರರ ಸಹಕಾರವನ್ನು ಪಡೆಯುತ್ತೀರಿ. ಸಂಬಂಧಿಕರ ಜೊತೆಗೆ ಹಣಕಾಸಿನ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆ ಇರಲಿ. ಸಂಬಂಧಗಳಲ್ಲಿ ಇಂದು ಬಿರುಕು ಮೂಡುವ ಸಾಧ್ಯತೆಯಿದೆ. ತಾಯಿಯೊಂದಿಗೆ ಜಗಳವಾಡುವಿರಿ.
ಕರ್ಕಾಟಕರಾಶಿ ದಿನಭವಿಷ್ಯ
ಸಂಗಾತಿಯೊಂದಿಗೆ ವಿವಾದಗಳಿದ್ದರೆ ಅದು ಇಂದು ಸಂಪೂರ್ಣವಾಗಿ ಬಗೆ ಹರಿಯಲಿದೆ. ಯಾವುದೇ ಕಾರ್ಯವನ್ನು ಮಾಡುವ ಮುನ್ನ ಅನುಭವಿಗಳ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಿ. ಅಲಂಕಾರಿಕ ವಸ್ತುಗಳ ಖರೀದಿಗೆ ಹಣವನ್ನು ವ್ಯಯಿಸುತ್ತೀರಿ. ಕೆಲಸ ಕಾರ್ಯಗಳಲ್ಲಿ ಎಚ್ಚರಿಕ ಅತೀ ಮುಖ್ಯ.
ಇದನ್ನೂ ಓದಿ : New Mobile Sim Scam : ಮೊಬೈಲ್‌ಗೆ ಹೊಸ ಸಿಮ್ ಹಾಕಿದ ಟೆಕ್ಕಿ : ಖಾತೆಯಲ್ಲಿದ್ದ 2.80 ಕೋಟಿ ಮಂಗಮಾಯ
ಸಿಂಹರಾಶಿ ದಿನಭವಿಷ್ಯ
ಹಲವು ಸಮಯಗಳಿಂದ ಕಾಯುತ್ತಿದ್ದ ಸ್ನೇಹಿತನನ್ನು ಇಂದು ಭೇಟಿಯಾಗುತ್ತೀರಿ. ವ್ಯಾಪಾರಸ್ಥರು ಇಂದು ಅಧಿಕ ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿಯು ಸುಧಾರಣೆ ಕಾಣುವುದರಿಂದ ಮನಸಿಗೆ ನೆಮ್ಮದಿ ಉಂಟಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ.
ಕನ್ಯಾರಾಶಿ ದಿನಭವಿಷ್ಯ
ನಿಮಗೆ ಬೇಕಾಗಿರುವ ಸಾಲ ಇಂದು ಸುಲಭವಾಗಿ ದೊರೆಯುತ್ತದೆ. ಇಂದು ಯಾರ ಮಾತಿನಿಂದಲೂ ನೀವು ಪ್ರಭಾವಿತರಾಗಬಾರದು. ಸಣ್ಣ ವ್ಯಾಪಾರಸ್ಥರು ಇಂದು ಚಿಂತೆಗೆ ಒಳಗಾಗಲಿದ್ದಾರೆ. ವಿದೇಶದಲ್ಲಿ ವ್ಯಾಪಾರ ಮಾಡುವವರು ದೊಡ್ಡಮಟ್ಟದ ಲಾಭವನ್ನು ಪಡೆಯುತ್ತಾರೆ. ಇಂದು ಮನೆಗೆ ಅತಿಥಿಗಳು ಆಗಮಿಸುವ ಸಾಧ್ಯತೆಯಿದೆ.
ತುಲಾರಾಶಿ ದಿನಭವಿಷ್ಯ
ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ದೊರೆಯಲಿದೆ. ಅಲ್ಲದೇ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಇಂದು ನೀವು ಯಶಸ್ವಿ ಆಗುತ್ತೀರಿ. ಹೂಡಿಕೆ ಮಡುವ ವೇಳೆಯಲ್ಲಿ ಎಚ್ಚರಿಕೆ ತೀರಾ ಅಗತ್ಯ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ಭವಿಷ್ಯದ ವಿಚಾರದಲ್ಲಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಿ.
ವೃಶ್ಚಿಕರಾಶಿ ದಿನಭವಿಷ್ಯ
ಸಹೋದರರ ಜೊತೆಗೆ ಚರ್ಚಿಸಿ ಉತ್ತಮ ನಿರ್ಧಾರವನ್ನು ಕೈಗೊಳ್ಳುತ್ತೀರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಹಿರಿಯ ಸದಸ್ಯರ ಸಲಹೆಯನ್ನು ಪಾಲಿಸಿ. ಕೆಲವೊಂದು ರೋಗಗಳು ನಿಮ್ಮನ್ನು ಕಾಡುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.
ಧನಸ್ಸುರಾಶಿ ದಿನಭವಿಷ್ಯ
ಕುಟುಂಬದ ಸದಸ್ಯರಿಂದ ಸಹಾಯವನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರ ಜೊತೆಗೆ ದೇವರ ದರ್ಶನಕ್ಕಾಗಿ ತೀರ್ಥಯಾತ್ರೆಗೆ ತೆರಳುವ ಸಾಧ್ಯತೆಯಿದೆ. ಕೆಲಸ ಕಾರ್ಯಗಳಲ್ಲಿ ಬಹಳ ಎಚ್ಚರಿಕೆ ಅತೀ ಅಗತ್ಯ. ಯಾವುದೇ ಕಾರ್ಯವನ್ನು ಮಾಡುವ ಮುನ್ನ ಹಲವು ಬಾರಿ ಯೋಚಿಸಿ.
ಮಕರರಾಶಿ ದಿನಭವಿಷ್ಯ Horoscope Today
ದೈನಂದಿನ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಶಸ್ವಿ ಆಗುತ್ತೀರಿ. ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರೆ ಅದರಲ್ಲಿ ಯಶಸ್ವಿ ಆಗುತ್ತೀರಿ. ಪ್ರಮುಖ ಕೆಲಸ ಕಾರ್ಯಗಳನ್ನು ಆದಷ್ಟು ಮುಂದೂಡುವುದು ಉತ್ತಮ. ಸರಕಾರಿ ಕೆಲಸ ಮಾಡುವವರಿಗೆ ಶುಭ ಸುದ್ದಿ ದೊರೆಯಲಿದೆ.
ಇದನ್ನೂ ಓದಿ : PUC Marks Card: ದ್ವಿತೀಯ ಪಿಯುಸಿ ಅಂಕಪಟ್ಟಿ : ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಪರೀಕ್ಷಾ ಮಂಡಳಿ
ಕುಂಭರಾಶಿ ದಿನಭವಿಷ್ಯ
ಅಪರಿಚಿತ ವ್ಯಕ್ತಿಯ ಜೊತೆಗೆ ಯಾವುದೇ ವ್ಯವಹಾರವನ್ನು ಮಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಿ. ಶತ್ರುಗಳು ನಿಮ್ಮೊಂದಿಗೆ ಜಗಳವಾಡುವ ಸಾಧ್ಯತೆಯಿದೆ. ಮನಸ್ಸಿನಲ್ಲಿ ಯಾವುದೇ ನಕಾರಾತ್ಮಕ ಚಿಂತನೆ ಬಾರದಂತೆ ಎಚ್ಚರಿಕೆಯನ್ನು ವಹಿಸಿ. ಪುಣ್ಯಕ್ಷೇತ್ರಗಳ ದರ್ಶನದಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.
ಮೀನರಾಶಿ ದಿನಭವಿಷ್ಯ
ಸಹೋದ್ಯೋಗಿಗಳಿಂದಾಗಿ ಭಾವನಾತ್ಮಕ ವಿಚಾರದಲ್ಲಿ ತೊಂದರೆ ಎದುರಿಸಲಿದ್ದೀರಿ. ಸಂಗಾತಿಯ ಆರೋಗ್ಯ ನಿಮ್ಮನ್ನು ತೊಂದರೆಗೆ ಈಡು ಮಾಡಲಿದೆ. ಕಚೇರಿ ಕಾರ್ಯಗಳಲ್ಲಿ ಬದಲಾವಣೆಯನ್ನು ಮಾಡುತ್ತೀರಿ. ಇತರರಿಗೆ ಸಹಾಯ ಮಾಡುವ ಸಲುವಾಗಿ ಒಂದಿಷ್ಟು ಹಣ ವ್ಯಯವಾಗುವ ಸಾಧ್ಯತೆಯಿದೆ. ದೂರದ ಬಂದುಗಳ ಆಗಮನ ಸಂತಸವನ್ನು ತರಲಿದೆ.
Horoscope Today 20 January 2025