ಯುಪಿಐ ವಹಿವಾಟುಗಳಲ್ಲಿ ಆರ್ಬಿಐನಿಂದ ಮಹತ್ವದ ಬದಲಾವಣೆ : 10 ಸಾವಿರಕ್ಕಿಂತ ಹೆಚ್ಚಿನ ಹಣ ವರ್ಗಾವಣೆಗೆ ಹೊಸ ನಿಯಮ
ಇತ್ತೀಚಿನ ದಿನಗಳಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ನಡೆಸುವವರ ಸಂಖ್ಯೆ ವಿಪರೀತ. ನಗದುರಹಿತ ವ್ಯವಹಾರಗಳೇ ಹೆಚ್ಚಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಸೈಬರ್ ಕಳ್ಳತನಗಳೂ ಹೆಚ್ಚಾಗುತ್ತಿದೆ. ಹೀಗಾಗಿ ಯುಪಿಐ ವ್ಯವಹಾರಗಳಲ್ಲಿ ಸಂಭವಿಸುವ ಸೈಬರ್ ವಂಚನೆಗಳನ್ನು ತಡೆಯುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದ ಅಡಿಯಲ್ಲಿ, 10 ಸಾವಿರ ರೂಪಾಯಿಗಳಿಂತ ಹೆಚ್ಚಿನ ನಗದು ವ್ಯವಹಾರಗಳಿಗೆ 1 ಗಂಟೆಗಳ ಕೂಲಿಂಗ್ ಪಿರಿಯಡ್ ಇರಲಿದೆ. ಅಂದರೆ ಮೊದಲ ಬಾರಿಗೆ ನೀವು ಯಾರಿಗೇ 10 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣ ನೀಡುತ್ತಿದ್ದರೆ, ಒಂದು ಗಂಟೆಗಳ ಬಳಿಕ ಆ ಹಣ ಖಾತೆಗೆ ವರ್ಗಾವಣೆಗೊಳ್ಳಲಿದೆ.
ಸೈಬರ್ ವಂಚನೆಗಳನ್ನು ತಡೆಯುವ ಉದ್ದೇಶದಿಂದಾಗಿಯೇ ಈ ನಿಯಮ ಜಾರಿಗೆ ಬಂದಿದೆ. ಆದರೆ ನೀವು ಈಗಾಗಲೇ ಯುಪಿಐ ಮೂಲಕ ನಗದು ವ್ಯವಹಾರ ನಡೆಸಿದ ವ್ಯಕ್ತಿಗೆ ಈ ನಿಯಮ ಜಾರಿಗೆ ಬರುವುದಿಲ್ಲ. ಹೊಸ ವ್ಯವಹಾರಗಳಲ್ಲಿ ಮಾತ್ರ ಈ ಕೂಲಿಂಗ್ ಪಿರಿಯಡ್ ಇರಲಿದೆ. ಒಂದು ವೇಳೆ ಸೈಬರ್ ವಂಚನೆ ಸಂಭವಿಸಿದ್ದಲ್ಲಿ ಒಂದು ಗಂಟೆಯ ಒಳಗಾಗಿ ನೀವು ಸಂಬಂಧಪಟ್ಟ ಬ್ಯಾಂಕ್ ಸಂಪರ್ಕಿಸುವ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ.
ಇದನ್ನೂ ಓದಿ: ಆರ್ಬಿಐನಲ್ಲಿ ಕೊಳೆಯುತ್ತಿದೆ ವಾರಸುದಾರರಿಲ್ಲದ ಹಣ..!
ಇನ್ನು ಕೂಲಿಂಗ್ ಪೀರಿಯಡ್ ಜೊತೆಯಲ್ಲಿ ವೇಟ್ಲಿಸ್ಟ್ ಎಂಬ ಆಯ್ಕೆಯನ್ನೂ ನೀಡಲಾಗಿದ್ದು ,ಇದರಲ್ಲಿ ನೀವು ನಿಮ್ಮ ಕುಟುಂಬಸ್ಥರು, ಸ್ನೇಹಿತರನ್ನು ಸೇರ್ಪಡೆ ಮಾಡಿಕೊಳ್ಳಬಹುದು. ವೇಟ್ಲಿಸ್ಟ್ನಲ್ಲಿರುವ ವ್ಯಕ್ತಿಗಳಿಗೆ ಹಣವರ್ಗಾವಣೆ ಮಾಡುವ ಸಂದರ್ಭದಲ್ಲಿ ಈ ಕೂಲಿಂಗ್ ಪಿರಿಯಡ್ ನಿಯಮ ಅನ್ವಯಿಸುವುದಿಲ್ಲ.ಇಂತವರಿಗೆ ಹಣ ಕಳುಹಿಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಆರ್ಬಿಐ ತಿಳಿಸಿದೆ.



