ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿಗೆ ಭರ್ಜರಿ ಜಯ : ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಗೆಲುವು ದಾಖಲಿಸಿದೆ.ಆರ್ಸಿಬಿ ಬೌಲರ್ಗಳ ಪರಾಕ್ರಮ ದಾಳಿಯಿಂದ ಲಕ್ನೋ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ RCB, 15.1 ಓವರ್‌ಗಳಲ್ಲಿ ಗುರಿ ತಲುಪಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆಮಾಡಿಕೊಂಡ ಆರ್ಸಿಬಿ ಲಕ್ನೋ ತಂಡವನ್ನು ಅಲ್ಪಮೊತ್ತದಲ್ಲಿ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯ್ತು. ರಸಿಕ್ ದರ್,ಭುವನೇಶ್ವರ ಕುಮಾರ್, ಹೇಜಲ್ವುಡ್ರ ಆರ್ಭಟದ ಬೌಲಿಂಗ್ಗೆ ಲಕ್ನೋ ತತ್ತರಿಸಿ ಹೋಗಿತ್ತು.ಅಂತಿಮವಾಗಿ ಲಕ್ನೋ 20 ಓವರ್‌ಗಳಲ್ಲಿ ಕೇವಲ 146 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಲಷ್ಟೇ ಯಶಸ್ವಿಯಾಯಿತು.
ಇದನ್ನೂ ಓದಿ: ಐಪಿಎಲ್ನಿಂದ ಕೊಹ್ಲಿ ಔಟ್..!? ಆರ್ಸಿಬಿಗೆ ತಲೆನೋವು ತಂದ ಕೊಹ್ಲಿ ಫಿಟ್ನೆಸ್ ಸಮಸ್ಯೆ
147 ರನ್‌ಗಳ ಅಲ್ಪಮೊತ್ತ ಬೆನ್ನಟ್ಟಿದ ಆರ್ಸಿಬಿ ಬ್ಯಾಟರ್ಗಳು ಭರ್ಜರಿ ಪ್ರದರ್ಶನ ತೋರಿದರು. ವಿರಾಟ್ ಕೊಹ್ಲಿ ಅವರು ಕೇವಲ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 49 ರನ್ ಸಿಡಿಸಿ ಕೇವಲ 1 ರನ್ಗಳಿಂದ ಅರ್ಧಶತಕದಿಂದ ವಂಚಿತರಾದರು. ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ನಡುವಿನ ಜೊತೆಯಾಟವು ತಂಡಕ್ಕೆ ಆಸರೆಯಾಯಿತು.ಅಂತಿಮವಾಗಿ RCB 15.1 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 149 ರನ್ ಬಾರಿಸಿ ದಿಗ್ವಿಜಯ ಸಾಧಿಸಿತು.



