ಶನಿವಾರ, ಜೂನ್ 7, 2025
HomeSportsCricketಈ ಸಲ ಕಪ್ ನಮ್ದು: ವಿರಾಟ್ ಕೊಹ್ಲಿಯ 18 ವರ್ಷಗಳ ವನವಾಸ ಅಂತ್ಯ, RCB ಐಪಿಎಲ್...

ಈ ಸಲ ಕಪ್ ನಮ್ದು: ವಿರಾಟ್ ಕೊಹ್ಲಿಯ 18 ವರ್ಷಗಳ ವನವಾಸ ಅಂತ್ಯ, RCB ಐಪಿಎಲ್ 2025 ಚಾಂಪಿಯನ್

2010 ರ ದಶಕದಲ್ಲಿ ವಿರಾಟ್‌ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ತಂಡದಲ್ಲಿದ್ದರೂ ಕೂಡ ಆರ್‌ಸಿಬಿಗೆ ಪ್ರಶಸ್ತಿ ಗೆಲ್ಲೋದಕ್ಕೆ ಸಾಧ್ಯವಾಗಿರಲಿಲ್ಲ. ಆರಂಭದಿಂದಲೂ ತಂಡದಲ್ಲಿದ್ದ ವಿರಾಟ್‌ ಕೊಹ್ಲಿ 18ನೇ ಋತುವಿನಲ್ಲಿ ಐಪಿಎಲ್‌ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ.

- Advertisement -

RCB IPL 2025 Champions : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB)ತಂಡ ಐಪಿಎಲ್‌ ಟ್ರೋಫಿಗಾಗಿ 17 ವರ್ಷಗಳ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (RCB vs PBKS) ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ಐಪಿಎಲ್‌ 2025 (IPL 2025) ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ರಜತ್‌ ಪಾಟೀದಾರ್‌ ನೇತೃತ್ವದ ಆರ್‌ಸಿಬಿ ತಂಡ ಈ ಋತುವಿನ ಆರಂಭದಿಂದಲೂ ಉತ್ತಮ ಆಟದ ಪ್ರದರ್ಶನ ನೀಡಿದೆ. ಅದರಲ್ಲೂ ಕಿಂಗ್‌ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನಲ್ಲಿ ರನ್‌ ಹೊಳೆಯನ್ನೇ ಹರಿಸಿದ್ದಾರೆ. ಫೈನಲ್‌ ಪಂದ್ಯದಲ್ಲಿಯೂ ಕೊಹ್ಲಿ ಅತ್ಯಮೂಲ್ಯ ಆಟದ ಪ್ರದರ್ಶನ ನೀಡಿದ್ದಾರೆ. ಆರ್‌ಸಿಬಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 6 ವಿಕೆಟ್‌ ಅಂತರದಿಂದ ಸೋಲಿಸಿದೆ.

ಚೊಚ್ಚಲ ಐಪಿಎಲ್‌ ಟ್ರೋಫಿ ಗೆಲ್ಲುವ ಕನಸಿನಲ್ಲಿದ್ದ ಆರ್‌ಸಿಬಿ ತಂಡಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅವಕಾಶವನ್ನೇ ನೀಡಲಿಲ್ಲ. ಪಂಜಾಬ್‌ ತಂಡವನ್ನು ಸೋಲಿಸುವ ಮೂಲಕ ಬೆಂಗಳೂರು ತಂಡ ಕೊನೆಗೂ ತನ್ನ ವನವಾಸವನ್ನು ಅಂತ್ಯಗೊಳಿಸಿದೆ.

RCB IPL 2025 Champions : ಆರ್‌ಸಿಬಿ ಐಪಿಎಲ್ 2025 ಚಾಂಪಿಯನ್ಸ್:

ಐಪಿಎಲ್ 2025 ಹರಾಜಿಗೂ ಮೊದಲು ಆರ್‌ಸಿಬಿ ತಂಡ ರಜತ್‌ ಪಾಟೀದಾರ್‌, ವಿರಾಟ್‌ ಕೊಹ್ಲಿ ಹಾಗೂ ಯಶ್‌ ದಯಾಳ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಆದರೆ ಮಾಜಿ ಕ್ರಿಕೆಟಿಗ ದಿನೇಶ್‌ ಕಾರ್ತೀಕ್‌ ಅವರ ಬ್ಯಾಟಿಂಗ್‌ ಕೋಚ್‌ ತಂಡಕ್ಕೆ ಸಹಕಾರಿಯಾಗಿತ್ತು. ಅಷ್ಟೇ ಅಲ್ಲಾ ಕೋಚ್‌ ಆಂಡಿ ಪ್ಲವರ್‌, ನಿರ್ದೇಶಕ ಬೊಬಾಟ್‌ ತಂಡದಲ್ಲಿದ್ದ ಸಮಸ್ಯೆಗಳನ್ನು ಪರಿಹರಿಸಿದ್ದರು.

ನಾಯಕನಾಗಿ ಪಾಟಿದಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ರನ್ ಗಳಿಸುವ ಸಾಧನೆಯನ್ನು ಮುಂದುವರಿಸಿದ್ದರು. ಫಿಲ್ ಸಾಲ್ಟ್ ಕೆಕೆಆರ್‌ನಲ್ಲಿ ನೀಡಿದ್ದ ಪ್ರದರ್ಶನವನ್ನೇ ಮುಂದುವರಿಸಿದ್ದರು. ಕೊಹ್ಲಿ ಜೊತೆಗೆ ಸಾಲ್ಟ್‌ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭವನ್ನೇ ನೀಡಿದ್ದರು. ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಬೌಲಿಂಗ್‌ಗೆ ಹೆಗಲು ನೀಡಿದರು, ಕೃನಾಲ್ ಪಾಂಡ್ಯ ಆರ್‌ಸಿಬಿ ತಂಡದಲ್ಲಿ ಭರವಸೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ.

Also Read : KL Rahul : ಐಪಿಎಲ್‌ನಲ್ಲಿ ಶತಕ : 2026 ಟಿ20 ವಿಶ್ವಕಪ್‌ ಆಡ್ತಾರೆ ಕೆಎಲ್‌ ರಾಹುಲ್‌

ಆರ್‌ಸಿಬಿ 2008ರ ಬಳಿಕ ಇದೇ ಮೊದಲ ಬಾರಿಗೆ ಚೆಪಾಕ್‌ ಮೈದಾನದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. 2015 ರ ನಂತರ ವಾಂಖೆಡೆಯಲ್ಲಿ ಮೊದಲ ಪಂದ್ಯವನ್ನು ಜಯಿಸಿತ್ತು.ಆರ್‌ಸಿಬಿ ಲೀಗ್ ಹಂತದಲ್ಲಿ ತವರಿನಿಂದ ಹೊರಗೆ ಆಡಿದ ಎಲ್ಲಾ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ಮತ್ತೊಂದೆಡೆಯಲ್ಲಿ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಲ್ಲನ್‌ಪುರದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ದವೂ ಗೆಲುವಿನ ನಗೆ ಬೀರಿತ್ತು.

ಹೊಸ ದಾಖಲೆ ಸೃಷ್ಠಿಸಿದ ಆರ್‌ಸಿಬಿ ಆಟಗಾರರು

ಇದೇ ಮೊದಲ ಬಾರಿ ಐಪಿಎಲ್‌ ಟ್ರೋಫಿ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ತಂಡ ಹಲವು ದಾಖಲೆಗಳನ್ನು ಬರೆದಿದೆ. ಐಪಿಎಲ್ ಇತಿಹಾಸದಲ್ಲಿ ರೊಮಾರಿಯೊ ಶೆಫರ್ಡ್ ಎರಡನೇ ಅತಿ ವೇಗದ ಅರ್ಧಶತಕ ಬಾರಿಸಿದರು, ಆದರೆ ಫಿಲ್ ಸಾಲ್ಟ್ ಬದಲಿಗೆ ಜಾಕೋಬ್ ಬೆಥೆಲ್ ಅರ್ಧಶತಕ ಬಾರಿಸಿದರು. ಜಿತೇಶ್ ಶರ್ಮಾ 85 ರನ್ ಗಳಿಸಿದರು, ಇದು ಅವರ ಮೊದಲ ಐಪಿಎಲ್ ಅರ್ಧಶತಕ, ಆರ್‌ಸಿಬಿಗೆ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಖಚಿತಪಡಿಸಿತು.

Also Read : IPL 2025 : ಐಪಿಎಲ್‌ ನಿಂದ ಬಿಸಿಸಿಐ ಎಷ್ಟು ಆದಾಯ ತೆರಿಗೆ ಪಾವತಿಸುತ್ತೆ ಗೊತ್ತಾ ?

ಈ ಸಲ ಕಪ್‌ ನಮ್ದು : ಕೊನೆಗೂ ಫಲಿಸಿದ ಅಭಿಮಾನಿಗಳ ಹಾರೈಕೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪ್ರತೀ ವರ್ಷವೂ ಆರ್‌ಸಿಬಿ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುತ್ತೆ ಅಂತಾ ಅಭಿಮಾನಿಗಳು ಕಾದು ಕುಳಿತಿದ್ದರು. ಐಪಿಎಲ್‌ ಆರಂಭವಾಗುತ್ತಲೇ ಈ ಸಲ ಕಪ್‌ ನಮ್ದೆ ಅನ್ನುತ್ತಿದ್ದಾರೆ. ಸತತ ಸೋಲುಗಳ ನಡುವಲ್ಲೇ ಪ್ರಶಸ್ತಿಗಾಗಿ 17 ವರ್ಷ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಆರ್‌ಸಿಬಿ ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟಿದ್ದು, ಅಭಿಮಾನಿಗಳು ಇದೀಗ ಈ ಸಲ ಕಪ್‌ ನಮ್ದು ಎನ್ನುತ್ತಿದ್ದಾರೆ.

EE sala cup Namde RCB IPL 2025 Champions Virat Kohli 18 years wait ends
Image Credit : RCB

2010 ರ ದಶಕದಲ್ಲಿ ವಿರಾಟ್‌ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ತಂಡದಲ್ಲಿದ್ದರೂ ಕೂಡ ಆರ್‌ಸಿಬಿಗೆ ಪ್ರಶಸ್ತಿ ಗೆಲ್ಲೋದಕ್ಕೆ ಸಾಧ್ಯವಾಗಿರಲಿಲ್ಲ. ಆರಂಭದಿಂದಲೂ ತಂಡದಲ್ಲಿದ್ದ ವಿರಾಟ್‌ ಕೊಹ್ಲಿ 18ನೇ ಋತುವಿನಲ್ಲಿ ಐಪಿಎಲ್‌ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ. ವಿರಾಟ್‌ ಕೊಹ್ಲಿ ಅವರ ಟೀ ಶರ್ಟ್‌ ಮೇಲಿರುವ 18 ಸಂಖ್ಯೆ, 18ನೇ ಋತುವಿನಲ್ಲಿ ಪ್ರಶಸ್ತಿ ಗಳಿಸಿರುವುದು ವಿಶೇಷ ಎಂದೆನಿಸುತ್ತದೆ.

ಐಪಿಎಲ್ 2025ರಲ್ಲಿ ಹೇಗಿತ್ತು ಆರ್‌ಸಿಬಿ ಪ್ರದರ್ಶನ

1 ಕೆಕೆಆರ್ ಕೋಲ್ಕತ್ತಾ 7 ವಿಕೆಟ್‌ಗಳಿಂದ ಜಯ
2 ಸಿಎಸ್‌ಕೆ ಚೆನ್ನೈ 50 ರನ್‌ಗಳಿಂದ ಜಯ
3 ಜಿಟಿ ಬೆಂಗಳೂರು 8 ವಿಕೆಟ್‌ಗಳಿಂದ ಸೋಲು
4 ಎಂಐ ಮುಂಬೈ 12 ರನ್‌ಗಳಿಂದ ಜಯ
5 ಡಿಸಿ ಬೆಂಗಳೂರು 6 ವಿಕೆಟ್‌ಗಳಿಂದ ಸೋಲು
6 ಆರ್‌ಆರ್ ಜೈಪುರ 9 ವಿಕೆಟ್‌ಗಳಿಂದ ಜಯ
7 ಪಿಬಿಕೆಎಸ್ ಬೆಂಗಳೂರು 5 ವಿಕೆಟ್‌ಗಳಿಂದ ಸೋಲು
8 ಪಿಬಿಕೆಎಸ್ ಚಂಡೀಗಢ 7 ವಿಕೆಟ್‌ಗಳಿಂದ ಜಯ
9 ಆರ್‌ಆರ್ ಬೆಂಗಳೂರು 11 ರನ್‌ಗಳಿಂದ ಜಯ
10 ಡಿಸಿ ದೆಹಲಿ 6 ವಿಕೆಟ್‌ಗಳಿಂದ ಜಯ
11 ಸಿಎಸ್‌ಕೆ ಬೆಂಗಳೂರು 2 ರನ್‌ಗಳಿಂದ ಜಯ
12 ಕೆಕೆಆರ್ ಬೆಂಗಳೂರು ಫಲಿತಾಂಶ ಇಲ್ಲ
13 ಎಸ್‌ಆರ್‌ಎಚ್ ಲಕ್ನೋ 42 ರನ್‌ಗಳಿಂದ ಸೋಲು
14 ಎಲ್‌ಎಸ್‌ಜಿ ಲಕ್ನೋ 6 ವಿಕೆಟ್‌ಗಳಿಂದ ಜಯ
ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ದ 8 ವಿಕೆಟ್‌ಗಳಿಂದ ಜಯ
ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಅಹಮದಾಬಾದ್‌ ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ದ 6 ರನ್‌ ಗೆಲುವು

EE sala cup Namde RCB IPL 2025 Champions Virat Kohli 18 years wait ends

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular