ಬೆಂಗಳೂರು – ಮಂಗಳೂರು ನಡುವೆ 6 ಗಂಟೆ ಪ್ರಯಾಣ..! ವಂದೇ ಭಾರತ್ ರೈಲು ಸಂಚಾರ

Vande Bharat Express : ಮಂಗಳೂರು : ಕರಾವಳಿಗರ ಬಹು ವರ್ಷದ ಕನಸು ನನಸಾಗುವ ದಿನಗಳು ಸಮೀಪಿಸುತ್ತಿದೆ. ಬೆಂಗಳೂರು – ಮಂಗಳೂರು ಇನ್ಮುಂದೆ ಇನ್ನಷ್ಟು ಸನಿಹವಾಗಲಿದೆ. ವಂದೇ ಭಾರತ್ ರೈಲು (Vande Bharat)ಸಂಚಾರ ಬಹುತೇಕ ಫಿಕ್ಸ್.
ಕರಾವಳಿಗರಿಗೆ ಸಿಲಿಕಾನ್ ಸಿಟಿಗೆ ಪ್ರಯಾಣ ಮಾಡುವುದು ದುಸ್ಸಾಹಸ. ಶಿರಾಡಿಘಾಟ್, ಚಾರ್ಮಾಡಿ ಘಾಟ್ ರಸ್ತೆಗಳ ಹೊಂಡಾಗುಂಡಿ ರಸ್ತೆಯಿಂದಾಗಿ ವಾಹನ ಪ್ರಯಾಣ ದುಸ್ತರ ಎನಿಸಿದೆ. ಸದ್ಯದ ರೈಲು ಪ್ರಯಾಣ ಬಾರೀ ವಿಳಂಭವಾಗುತ್ತಿದೆ.
ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ಹೊಸ ಹೆದ್ದಾರಿಯ ಮೂಲಕ ವಾಹನ ಸಂಚಾರಕ್ಕೆ ಯೋಗ್ಯವಾಗುವುದು ಸದ್ಯಕ್ಕೆ ಸಾಧ್ಯವಿಲ್ಲ. ಆದ್ರೀಗ ವಂದೇ ಭಾರತ್ ರೈಲು ಸಂಚಾರ ಎರಡೂ ನಗರಗಳ ನಡುವಿನ ಅಂತರ ಕಡಿಮೆ ಮಾಡಲಿದೆ.
ಮಂಗಳೂರು ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಗೊಂಡರೆ ಪ್ರಯಾಣದ ಸಮಯ ಸುಮಾರು 6 ಗಂಟೆಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಇದು ಪ್ರಯಾಣಿಕರಿಗೆ ಬಹಳ ದೊಡ್ಡ ಅನುಕೂಲವಾಗಲಿದೆ.
ವಂದೇ ಭಾರತ್ ರೈಲು ಸಂಚಾರಕ್ಕೆ ಅಗತ್ಯ ಇರುವ ವಿದ್ಯುದೀಕರಣ ಕಾಮಗಾರಿ ಪ್ರಗತಿಯಲ್ಲಿದೆ. 55 ಕಿ.ಮೀ. ವಿದ್ಯುದೀಕರಣದ ಪೈಕಿ ಈಗಾಗಲೇ 22 ಕಿ.ಮೀ. ಪೂರ್ಣಗೊಂಡಿದ್ದು, ಉಳಿದ 33 ಕಿ.ಮೀ. ಕಾಮಗಾರಿ ನಡೆಯುತ್ತಿದೆ.
ಕೇಂದ್ರ ಸಚಿವ ಸಚಿವ ವಿ. ಸೋಮಣ್ಣ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈ ಕುರಿತು ಮಾಹಿತಿ ನೀಡಿದ್ದರು. ಕಾಮಗಾರಿ ಪೂರ್ಣಗೊಂಡ ನಂತರ ಶೀಘ್ರದಲ್ಲೇ ವಂದೇ ಭಾರತ್ ರೈಲು ಸೇವೆ ಆರಂಭವಾಗುವ ನಿರೀಕ್ಷೆಯಿದೆ.
Vande Bharat Express : ವಂದೇ ಭಾರತ್ ರೈಲು ಸಂಚಾರದಿಂದ ಲಾಭವೇನು ?
- ಪ್ರಯಾಣದ ಅವಧಿ: ಮಂಗಳೂರು-ಬೆಂಗಳೂರು ರೈಲ್ವೆ ಪ್ರಯಾಣದ ಅವಧಿ ಸದ್ಯ 8-9 ಗಂಟೆ, ಆದರೆ ವಂದೇ ಭಾರತ್ ರೈಲು ಸಂಚಾರದಿಂದ 6 ಗಂಟೆಗಳಿಗೆ ಇಳಿಯಲಿದೆ.
- ಪ್ರಯೋಜನಗಳು: ಈ ರೈಲು ಬೆಂಗಳೂರು, ತುಮಕೂರು, ಹಾಸನ ಮತ್ತು ಮಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಇದು ಕರಾವಳಿ ಮತ್ತು ರಾಜ್ಯ ರಾಜಧಾನಿ ನಡುವೆ ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.
- ಮಾರ್ಗ: ಈ ರೈಲು ಬೆಂಗಳೂರು, ತುಮಕೂರು, ಹಾಸನ, ಮಂಗಳೂರು ಮಾರ್ಗವಾಗಿ ಸಂಚರಿಸುವ ಸಾಧ್ಯತೆಯಿದೆ.
- ಕಾಮಗಾರಿ ಪ್ರಗತಿ: ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉಳಿದಿರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಈ ವರ್ಷದೊಳಗೆ ಸೇವೆಯನ್ನು ಪ್ರಾರಂಭಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಸದ್ಯಕ್ಕೆ, ಬೆಂಗಳೂರಿನಿಂದ ಮಂಗಳೂರಿಗೆ ನೇರ ವಂದೇ ಭಾರತ್ ರೈಲು ಸೇವೆ ಇನ್ನೂ ಆರಂಭವಾಗಿಲ್ಲ. ಈ ಮಾರ್ಗದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದ್ರೆ, ಈ ಸೇವೆ ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.
ವಂದೇ ಭಾರತ್ ರೈಲು ಸಂಚಾರದಿಂದ ಪ್ರವಾಸೋದ್ಯಮ, ವಾಣಿಜ್ಯ ಮತ್ತು ಜನರ ವೈಯಕ್ತಿಕ ಪ್ರಯಾಣಕ್ಕೆ ದೊಡ್ಡ ಉತ್ತೇಜನ ನೀಡಲಿದೆ.
Vande Bharat Express : ಕರಾವಳಿ ಅಭಿವೃದ್ದಿಗೆ ಪೂರಕ
ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಸಂಚಾರವು ಕರಾವಳಿ ಭಾಗದ ಜನರಿಗೆ, ವಿಶೇಷವಾಗಿ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದವರಿಗೆ, ಹಲವು ರೀತಿಯಲ್ಲಿ ಲಾಭದಾಯಕವಾಗಲಿದೆ. ಪ್ರಮುಖ ಲಾಭಗಳು ಇಲ್ಲಿವೆ:
ಪ್ರಯಾಣದ ಸಮಯ ಕಡಿತ: ಪ್ರಸ್ತುತ ಬೆಂಗಳೂರು ಮತ್ತು ಮಂಗಳೂರು ನಡುವೆ ರೈಲಿನಲ್ಲಿ ಪ್ರಯಾಣಿಸಲು 8-9 ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ವಂದೇ ಭಾರತ್ ರೈಲು ಆರಂಭವಾದರೆ ಈ ಪ್ರಯಾಣದ ಸಮಯ ಸುಮಾರು 6 ಗಂಟೆಗಳಿಗೆ ಇಳಿಯಲಿದೆ. ಇದು ಕರಾವಳಿಯ ಜನರಿಗೆ ಬೆಂಗಳೂರಿಗೆ ವೇಗವಾಗಿ ಮತ್ತು ಹೆಚ್ಚು ಅನುಕೂಲಕರವಾಗಿ ತಲುಪಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಇ- ಖಾತಾ ಅರ್ಜಿಗೆ ಬಾರೀ ಬೇಡಿಕೆ : ಏನಿದು ಇ – ಖಾತಾ ? ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸುಧಾರಿತ ಸಂಪರ್ಕ: ಬೆಂಗಳೂರು ಕರ್ನಾಟಕದ ರಾಜಧಾನಿ. ಮಾತ್ರವಲ್ಲ ಪ್ರಮುಖ ಆರ್ಥಿಕ ಕೇಂದ್ರವೂ ಹೌದು, ವೇಗದ ರೈಲು ಸಂಚಾರದಿಂದ ಕರಾವಳಿ ಹಾಗೂ ಬೆಂಗಳೂರು ನಡುವೆ ಸಂಪರ್ಕ ಕೊಂಡಿಯಾಗಿರಲಿದೆ. ಅಲ್ಲದೇ ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ.
Vande Bharat Express : ಪ್ರವಾಸೋದ್ಯಮ ಅಭಿವೃದ್ದಿ
ಪ್ರವಾಸೋದ್ಯಮಕ್ಕೆ ಉತ್ತೇಜನ: ಮಂಗಳೂರು ಕರಾವಳಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ವೇಗವಾಗಿ ಕರಾವಳಿಗೆ ತಲುಪಲು ಸಾಧ್ಯವಾಗಲಿದೆ.
ಪ್ರವಾಸಿಗರು ಮಂಗಳೂರು, ಉಡುಪಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಂತಹ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಆಸಕ್ತಿ ವಹಿಸುತ್ತಾರೆ. ಇದು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ.
ವ್ಯಾಪಾರ ಮತ್ತು ವಾಣಿಜ್ಯಕ್ಕೆ ಅನುಕೂಲ: ಕರಾವಳಿ ಭಾಗದಿಂದ ಬೆಂಗಳೂರಿಗೆ ವ್ಯಾಪಾರ ಸಂಬಂಧಿತ ಪ್ರಯಾಣ ಮಾಡುವವರಿಗೆ ಸಮಯದ ಉಳಿತಾಯವಾಗುತ್ತದೆ. ಇದು ವ್ಯಾಪಾರ ಚಟುವಟಿಕೆಗಳನ್ನು ಹೆಚ್ಚಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಇದನ್ನೂ ಓದಿ : ಫೋರ್ತ್‌ಫೋಕಸ್ ಗೆ “2025ರ ಗಮನಾರ್ಹ ಸಂಸ್ಥೆ” ಪ್ರಶಸ್ತಿ – ಬಿಸಿನೆಸ್ ಔಟ್‌ಲೈನ್‌ನ ಬಿಸಿನೆಸ್ ಎಲೈಟ್ ಅವಾರ್ಡ್‌ನಲ್ಲಿ ಗೌರವ
ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಲಾಭ: ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಅಥವಾ ಕೆಲಸ ಮಾಡುತ್ತಿರುವ ಕರಾವಳಿ ಮೂಲದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ತಮ್ಮ ಮನೆಗೆ ಭೇಟಿ ನೀಡಲು ಹೆಚ್ಚು ಸುಲಭವಾಗುತ್ತದೆ. ಕಡಿಮೆ ಸಮಯದಲ್ಲಿ ಪ್ರಯಾಣಿಸುವುದರಿಂದ ವಾರಾಂತ್ಯದಲ್ಲಿಯೂ ಮನೆಗೆ ಹೋಗಿ ಬರಲು ಸಾಧ್ಯವಾಗುತ್ತದೆ.
ಆರಾಮದಾಯಕ ಪ್ರಯಾಣ: ವಂದೇ ಭಾರತ್ ರೈಲುಗಳು ಆಧುನಿಕ ಸೌಲಭ್ಯಗಳು ಮತ್ತು ಆರಾಮದಾಯಕ ಆಸನಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ನೀಡುತ್ತವೆ. ಇದು ಸುದೀರ್ಘ ಪ್ರಯಾಣವನ್ನು ಹೆಚ್ಚು ಆಹ್ಲಾದಕರವಾಗಿಸುತ್ತದೆ.
Vande Bharat Express : 57 ಸುರಂಗ, 700 ಸೇತುವೆ ..!
ಈ ಮಾರ್ಗದಲ್ಲಿ ಹಾಸನ-ಮಂಗಳೂರು ನಡುವೆ 57 ಸುರಂಗಗಳು ಮತ್ತು 700 ಸೇತುವೆಗಳು ಇರುವುದರಿಂದ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ.
ಮಂಗಳೂರು-ಮಡಗಾಂವ್ ಮತ್ತು ಮಂಗಳೂರು-ತಿರುವನಂತಪುರಂ ನಡುವೆ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಬೆಂಗಳೂರು-ಮಂಗಳೂರು ನಡುವಿನ ವಂದೇ ಭಾರತ್ ರೈಲು ಸೇವೆ ಇನ್ನೂ ಆರಂಭವಾಗಿಲ್ಲ, ಆದರೆ ಕಾಮಗಾರಿ ಪ್ರಗತಿಯಲ್ಲಿದೆ.
Vande Bharat Express : travel Bengaluru to Mangaluru in just 6 hours in Kannada News



