ಇಂಡೋನೇಷ್ಯಾ ಅಂತರಾಷ್ಟ್ರೀಯ ಟಿ20 ತಂಡ : ಕುಂದಾಪುರದ ಸಂಪತ್‌ ಖಾರ್ವಿ

ಕರಾವಳಿ ಕುಂದಾಪುರ ಹುಡುಗನೋರ್ವ ಅಂತರಾಷ್ಟ್ರೀಯ ಟಿ20 ಪಂದ್ಯಾವಳಿಯನ್ನು ಆಡೋದಕ್ಕೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಕುಂದಾಪುರ ಗೋಪಾಡಿಯ ಸಂಪತ್‌ ಖಾರ್ವಿ (Kundapura Sampath Kharvi) ಈ ಸಾಧನೆ ಮಾಡಿದ್ದಾರೆ. ಅಂದಹಾಗೆ ಈತ ಆಡ್ತಾ ಇರೋದು ಭಾರತಕ್ಕ ಬದಲಾಗಿ ಇಂಡೋನೇಷ್ಯಾಕ್ಕೆ.

ಹೌದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗೋಪಾಡಿಯ ನಿವಾಸಿ ಆಗಿರುವ ಸಂಪತ್‌ ಖಾರ್ವಿ ಸದ್ಯ ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್‌ ತಂಡದ ಸದಸ್ಯ. 37 ವರ್ಷ ವಯಸ್ಸಿನ ಸಂಪತ್‌ ಖಾರ್ವಿ ಈಗಾಗಲೇ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

ಸಂಪತ್‌ ಖಾರ್ವಿ ವೃತ್ತಿಯಲ್ಲಿ ಇಂಜಿನಿಯರ್‌ ಆಗಿ ಇಂಡೋನೇಷ್ಯಾಕ್ಕೆ ಉದ್ಯೋಗದ ನಿಮಿತ್ತ ತೆರಳಿದ್ದರು. ಆದರೆ ತಾಯ್ನೆಲದಲ್ಲಿ ಆಡುತ್ತಿದ್ದ ಕ್ರಿಕೆಟ್‌ ಆಸ್ತಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಹಂತಕ್ಕೇರಿಸಿದೆ.

ಸಂಪತ್‌ ಖಾರ್ವಿ ಅವರು ಸಂಪತ್‌ ಕುಮಾರ್‌ ಹೆಸರಿನಲ್ಲಿ ಇಂಡೋನೇಷ್ಯಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ಟಿ20 ತಂಡದ ಆಟಗಾರನಾಗಿದ್ದು, ಮುಂದೆ ಎಲ್ಲಾ ಮಾದರಿಯ ಕ್ರಿಕೆಟ್‌ ಆಡುವ ಸಾಧ್ಯತೆಯಿದೆ.

ಕುಂದಾಪುರದ ಸಂಪತ್‌ ಖಾರ್ವಿ ಅವರು ಬಾಲಿ ಬಾಷ್ ಇಂಟರ್‌ನ್ಯಾಷನಲ್ ರೈಸಿಂಗ್ – ಏಷ್ಯಾ ಟ್ರೈ-ಸೀರೀಸ್‌ 2025ರಲ್ಲಿ (Bali Bash 2025) ಪಂದ್ಯಾವಳಿಯಲ್ಲಿ ಇಂಡೋನೇಷ್ಯಾ ತಂಡದ ಪರ 5 ಅಂತರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದಾರೆ. 2025ರಲ್ಲಿ ತನ್ನ 37ನೇ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

ಸಂಪತ್‌ ಖಾರ್ವಿ ಬ್ಯಾಟಿಂಗ್‌ ದಾಖಲೆ

  • ಪಂದ್ಯಗಳು (Matches): 5
  • ಇನ್ನಿಂಗ್ಸ್ (Innings): 4
  • ರನ್ (Runs): 79
  • ಗರಿಷ್ಠ ಸ್ಕೋರ್ : 31 (ದಕ್ಷಿಣ ಕೊರಿಯಾ ವಿರುದ್ಧ)
  • ಸರಾಸರಿ (Average): 19.75
  • ಸ್ಟ್ರೈಕ್ ರೇಟ್ (Strike Rate): 143.63
  • ಬೌಂಡರಿಗಳು (Fours): 4
  • ಸಿಕ್ಸರ್‌ಗಳು (Sixes): 7

Also Read : ಭಾರತ ಏಕದಿನ ಕ್ರಿಕೆಟ್‌ ತಂಡಕ್ಕೆ ಕೆಎಲ್‌ ರಾಹುಲ್‌ ನಾಯಕ


ಸಂಪತ್‌ ಖಾರ್ವಿ – ಯಾವ ತಂಡದ ವಿರುದ್ದ ಎಷ್ಟು ರನ್‌

  • ಜುಲೈ 13 – 2025 ರಂದು ದಕ್ಷಿಣ ಕೊರಿಯಾ ವಿರುದ್ಧ 15 ಎಸೆತಗಳಲ್ಲಿ 31 ರನ್.
  • ಜುಲೈ 10- 2025 ರಂದು ಫಿಲಿಪೈನ್ಸ್ ತಂಡದ ವಿರುದ್ಧ 9 ಎಸೆತಗಳಲ್ಲಿ 10 ರನ್.
  • ಜುಲೈ 8- 2025 ದಕ್ಷಿಣ ಕೊರಿಯಾ ವಿರುದ್ಧ 8 ಎಸೆತಗಳಲ್ಲಿ 9 ರನ್.
  • ಜುಲೈ 7-2025 ಫಿಲಿಪೈನ್ಸ್ ವಿರುದ್ಧ 23 ಎಸೆತಗಳಲ್ಲಿ 29 ರನ್.

ಬ್ಯಾಟಿಂಗ್‌ ಮಾತ್ರವಲ್ಲ, ಬೌಲಿಂಗ್‌ನಲ್ಲಿಯೂ ಸಂಪತ್‌ ಖಾರ್ವಿ ಉತ್ತಮ ಸಾಧನೆ ಮಾಡಿದ್ದಾರೆ. 5 ಪಂದ್ಯಗಳ ಪೈಕಿ 3 ಇನ್ನಿಂಗ್ಸ್‌ ನಲ್ಲಿ ಬೌಲಿಂಗ್‌ ಮಾಡುವ ಅವಕಾಶ ದೊರಕಿತ್ತು. ಈ ಪೈಕಿ 1 ವಿಕೆಟ್‌ ಪಡೆದಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ವಿರುದ್ದ ಆಡ್ತಾರಾ ಸಂಪ ತ್‌ ಖಾರ್ವಿ ?

ಸಂಪತ್‌ ಖಾರ್ವಿ ಇಂಡೋನೇಷ್ಯಾ ಕ್ರಿಕೆಟ್‌ ತಂಡದ ಆಟಗಾರ. ಆದರೆ ಅವರು ಭಾರತದಂತಹ ಅಗ್ರ ತಂಡದ ವಿರುದ್ದ ಆಡುವ ಸಾಧ್ಯತೆ ತೀರಾ ಕಡಿಮೆ. ಭಾರತ ವಿಶ್ವದ ಅತ್ಯಂತ ಬಲಿಷ್ಠ ಕ್ರಿಕೆಟ್‌ ತಂಡಗಳಲ್ಲಿ ಒಂದು. ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿವೆ.

Also Read : 58 ವರ್ಷದ ಬಳಿಕ ಎಡ್ಜ್‌ಬಾಸ್ಟನನ್‌ ನಲ್ಲಿ ಗೆದ್ದು ದಾಖಲೆ ಬರೆದ ಶುಭಮನ್‌ ಗಿಲ್‌ ಪಡೆ

ಆದರೆ ಇಂಡೋನೇಷ್ಯಾ ಕ್ರಿಕೆಟ್‌ ತಂಡವು ಅಗ್ರ ಶ್ರೇಯಾಂಕ ಪಡೆದಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಅಷ್ಟೇನೂ ಪ್ರಬಲವಾಗಿಲ್ಲ. ಈ ಎರಡೂ ತಂಡಗಳ ನಡುವೆ ನೇರ ದ್ವಿಪಕ್ಷೀಯ ಸರಣಿಗಳು ನಡೆಯುವುದು ಅಪರೂಪ.

ಭಾರತ ಮತ್ತು ಇಂಡೋನೇಷ್ಯಾ ತಂಡಗಳು ICC ಟೂರ್ನಮೆಂಟ್‌ಗಳಾದ T20 ವಿಶ್ವಕಪ್, ODI ವಿಶ್ವಕಪ್ ಗಳಲ್ಲಿ ಮುಖಾಮುಖಿ ಆಗಬೇಕಾದರೆ, ಇಂಡೋನೇಷ್ಯಾ ತಂಡವು ಮೊದಲು ಅರ್ಹತಾ ಸುತ್ತುಗಳನ್ನು ದಾಟಿ ಮುಖ್ಯ ಟೂರ್ನಿಗೆ ಪ್ರವೇಶಿಸಬೇಕು.

ಇಂಡೋನೇಷ್ಯಾ ಸದ್ಯಕ್ಕೆ ಪ್ರಮುಖ ವಿಶ್ವಕಪ್‌ಗಳಿಗೆ ಅರ್ಹತೆ ಪಡೆಯುವಷ್ಟು ಬಲಿಷ್ಠವಾಗಿಲ್ಲ. ಅಲ್ಲದೇ ಇಂಡೋನೇಷ್ಯಾವು ಏಷ್ಯಾ ಖಂಡದ ತಂಡ ಆಗಿರುವುದರಿಂದ ಭವಿಷ್ಯದಲ್ಲಿ ಏಷ್ಯಾ ಕಪ್‌ನಂತಹ ಪ್ರಾದೇಶಿಕ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿರಬಹುದು.

ಭಾರತದಂತಹ ಬಲಿಷ್ಠ ತಂಡದ ವಿರುದ್ಧ ಆಡಲು ಅವರು ತಮ್ಮ ಪ್ರಾದೇಶಿಕ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಾಗುತ್ತದೆ.

ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡ್ತಾರಾ ಸಂಪತ್‌ ಖಾರ್ವಿ?

ಇಂಡೋನೇಷ್ಯಾ ಕ್ರಿಕೆಟ್ ತಂಡವು ಇನ್ನೂ ICC ವಿಶ್ವಕಪ್ (T20 ಅಥವಾ ODI) ಪಂದ್ಯಾವಳಿಗಳಿಗೆ ಅರ್ಹತೆ ಪಡೆಯುವ ಮಟ್ಟಕ್ಕೆ ಬೆಳೆದಿಲ್ಲ. ವಿಶ್ವಕಪ್‌ಗಳಿಗೆ ಅರ್ಹತೆ ಪಡೆಯಲು, ತಂಡಗಳು ಪ್ರಾದೇಶಿಕ ಅರ್ಹತಾ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕು ಮತ್ತು ನಂತರ ಜಾಗತಿಕ ಅರ್ಹತಾ ಪಂದ್ಯಾವಳಿಗಳನ್ನು ಗೆಲ್ಲಬೇಕು.

ಇಂಡೋನೇಷ್ಯಾವು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಹೊಸದಾಗಿ ಪ್ರವೇಶಿಸಿರುವ ತಂಡವಾಗಿದ್ದು, ಸಣ್ಣ ಪುಟ್ಟ ಪ್ರಾದೇಶಿಕ ಸರಣಿಗಳಲ್ಲಿ ಮಾತ್ರ ಆಡುತ್ತಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಂಪತ್‌ ಖಾರ್ವಿ ಭಾರತದ ವಿರುದ್ಧ ಆಡುವುದು ಅಥವಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾಗವಹಿಸುವುದು ಅಸಾಧ್ಯ.

ಆದರೆ, ಇಂಡೋನೇಷ್ಯಾದಲ್ಲಿ ಕ್ರಿಕೆಟ್ ಬೆಳವಣಿಗೆಯಾಗುತ್ತಿರುವುದರಿಂದ ಮತ್ತು ಹೊಸ ಆಟಗಾರರು ಬರುತ್ತಿರುವುದರಿಂದ, ಭವಿಷ್ಯದಲ್ಲಿ ಪರಿಸ್ಥಿತಿ ಬದಲಾಗಬಹುದು.

Kundapuras Sampath Kharvi – Sampath Kumar Makes International T20 Debut for Indonesia

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories