ಪರಶುರಾಮ ಥೀಮ್‌ ಪಾರ್ಕ್‌ ರಿಟ್‌ ಅರ್ಜಿ ಗೊಂದಲ : ಮುನಿಯಾಲು ವಿರುದ್ದ ಹಿತರಕ್ಷಣಾ ಸಮಿತಿ ಮುನಿಸು

ಕಾರ್ಕಳ : ಕಾರ್ಕಳದಲ್ಲಿ ಪರಶುರಾಮ ಮೂರ್ತಿ (Karkala Parashurama Theme Park) ನಿರ್ಮಾಣದ ವಿಚಾರದಲ್ಲಿ ಸಲ್ಲಿಕೆಯಾಗಿರುವ ರಿಟ್‌ ಅರ್ಜಿ ಇದೀಗ ಕಾಂಗ್ರೆಸ್‌ ನಾಯಕರ ನಡುವಿನ ವೈಮನಸ್ಸಿಗೆ ಕಾರಣವಾಗಿದೆ.

ಕಾಂಗ್ರೆಸ್‌ ಮುಖಂಡ ಉದಯ್‌ ಕುಮಾರ್‌ ಶೆಟ್ಟಿ ಅವರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಕೆ ಮಾಡಿರುವುದರ ವಿರುದ್ದ ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ ಹಿತರಕ್ಷಣಾ ಸಮಿತಿ ಮುನಿಸಿಕೊಂಡಿದೆ. ಈ ಕುರಿತು ಸಮಿತಿಯ ಅಧ್ಯಕ್ಷರು ಸ್ಪಷ್ಟನೆ ನೀಡುವಂತೆ ಉಪಾಧ್ಯಕ್ಷ ನಿತಿನ್‌ ಪೂಜಾರಿ ಆಗ್ರಹಿಸಿದ್ದಾರೆ.

ಪರಶುರಾಮ ಮೂರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜಶೀಟ್‌ ಸಲ್ಲಿಕೆ ಮಾಡಿದ್ದಾರೆ. ಆದರೆ ಚಾರ್ಜ್‌ಶೀಟ್‌ನಲ್ಲಿ ಇರುವ ವಿಚಾರವನ್ನು ತಿಳಿದುಕೊಳ್ಳದೆ ತರಾತುರಿಯಲ್ಲಿ ಉದಯ್‌ ಕುಮಾರ್‌ ಶೆಟ್ಟಿ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ರಿಟ್‌ ಅರ್ಜಿಯ ವಿಚಾರವನ್ನು ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ ಹಿತರಕ್ಷಣಾ ಸಮಿತಿ ಅಧ್ಯಕ್ಷರು ಸಮರ್ಥಿಸಿಕೊಳ್ಳದೆ ಮೌನಕ್ಕೆ ಶರಣಾಗಿರುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.

ಇದನ್ನೂ ಓದಿ : ಹಂದಟ್ಟು ಚೌತಿ – ಬೆಳ್ಳಿ ಹಬ್ಬ : ಉದ್ಯಮಿ ಆನಂದ ಕುಂದರ್‌ ಅವರಿಂದ ಆಹ್ವಾನ ಪತ್ರಿಕೆ ಬಿಡುಗಡೆ

ಮೌನದಿಂದಾಗಿ ರಾಜ್ಯ ಸರಕಾರಕ್ಕೆ ಮತ್ತು ಪರಶುರಾಮ ಥೀಮ್‌ಪಾರ್ಕ್‌ ಹಿತರಕ್ಷಣಾ ಸಮಿತಿಯ ಪರಶುರಾಮ ಮೂರ್ತಿಯ ಪುನರ್‌ ನಿರ್ಮಾಣದ ಇಚ್ಚಾಶಕ್ತಿಗೆ ಹಿನ್ನೆಡೆ ಆಗುವ ಸಂಭವವಿದೆ ಎಂದಿದ್ದಾರೆ.

ಡಿಕೆ ಶಿವಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರ ಮುನಿಸು

ಕರ್ನಾಟಕದ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರು ಕಾರ್ಕಳದಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಕುಟುಂಬೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಪರಶುರಾಮ ಮೂರ್ತಿಯನ್ನು ಮುಂಬರುವ ವಿಧಾನಸಭಾ ಚುನಾವಣೆಯ ವಿಷಯವನ್ನಾಗಿಸಿ ಎಂಬ ಹೇಳಿಕೆ ನೀಡಿದ್ದರು.

ಆದರೆ ಈ ಹೇಳಿಕೆಯನ್ನು ಅವರಿಂದ ನಾಯಕರು ಹೇಳಿಸಿದ್ದಾರೆ ಎಂದು ಕಾರ್ಕಳದ ಹಿರಿಯ ಕಾಂಗ್ರೆಸ್‌ ನಾಯಕರು ಪರಶುರಾಮ ಮೂರ್ತಿ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದಾರೆ ಎಂದಿದ್ದಾರೆ.

ಹಿರಿಯ ಕಾಂಗ್ರೆಸ್‌ ನಾಯಕರು ಅಂತರ ಕಾಯ್ದುಕೊಂಡಿರುವ ಲಾಭವನ್ನು ಕಾರ್ಕಳದ ಬಿಜೆಪಿ ನಾಯಕರು ಪಡೆದುಕೊಂಡು, ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ ಹಿತರಕ್ಷಣಾ ಸಮತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ವಿರುದ್ದ ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಮುನಿಯಾಲು ನ್ಯಾಯಾಲಯಕ್ಕೆ ಪಿಐಎಲ್‌ ಹಾಸ್ಯಾಸ್ಪದ : ನವೀನ್‌ ನಾಯಕ್‌

ಹೈಕೋರ್ಟ್‌ಗೆ ರಿಟ್‌ ಅರ್ಜಿ : ಕಾರ್ಕಳದಲ್ಲಿ ಗೊಂದಲ

ಕಾರ್ಕಳದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್‌ ಪಾರ್ಕ್‌ನ ಗೋಮಾಳ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯ ಪ್ರಥಮವಾಗಿ ನಡೆಯಬೇಕಿದೆ.

ಆದರೆ ಉದಯ್‌ ಕುಮಾರ್‌ ಶೆಟ್ಟಿ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿರುವುದು ಬಿಜೆಪಿ ನಾಯಕರಿಂದ ಕಾರ್ಕಳ ಜನತೆಗೆ ತಿಳಿದು ಬಂದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಹೀಗಾಗಿ ಸಮಿತಿಯ ಅಧ್ಯಕ್ಷರು ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ನಿತಿನ್‌ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Karkala Parashurama Theme Park Writ Petition Confusion: Muniyalu Vs Parshuram Hitaraksha Samiti

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories