ಹಂದಟ್ಟು ಚೌತಿ – ಬೆಳ್ಳಿ ಹಬ್ಬ : ಉದ್ಯಮಿ ಆನಂದ ಕುಂದರ್ ಅವರಿಂದ ಆಹ್ವಾನ ಪತ್ರಿಕೆ ಬಿಡುಗಡೆ

Handattu Chouthi : ಕೋಟ : ಹಂದಟ್ಟು ದಾನಗುಂದು ಗೆಳೆಯರ ಬಳಗ ಯುವಕ ಸಂಘ (ರಿ.) ಇದರ ವತಿಯಿಂದ ಸಾರ್ವಜನಿಕ ಗಣೇಶೋತ್ಸವ 25ನೇ ವರ್ಷದ ಸಂಭ್ರಮದಲ್ಲಿದೆ.
ಈ ಹಿನ್ನೆಲೆಯಲ್ಲಿ ಹಂದಟ್ಟು ಚೌತಿ ಬೆಳ್ಳಿ ಹಬ್ಬದ ಆಹ್ವಾನ ಪತ್ರಿಕೆಯನ್ನು ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ, ಉದ್ಯಮಿ ಆನಂದ ಸಿ ಕುಂದರ್ ಅವರು ಬಿಡುಗಡೆ ಗೊಳಿಸಿದ್ದಾರೆ.
ಕೋಟದ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಆನಂದ ಸಿ. ಕುಂದರ್ ಅವರು ಹಂದಟ್ಟು – ದಾನಗುಂದು ಗೆಳೆಯರ ಬಳಗ ಯುವಕ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಉಪಯೋಗಕ್ಕಾಗಿ ಸ್ವತಃ ಜಾಗದಲ್ಲಿ ಸಭಾಭವನ ನಿರ್ಮಾಣ ಮಾಡಿರುವ ಸಂಸ್ಥೆಯ ಸಾಮಾಜಿಕ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
Also Read : ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) : ಅರ್ಜಿ ಸಲ್ಲಿಸುವುದು ಹೇಗೆ ?
ಗೆಳೆಯರ ಬಳಗ ಯುವಕ ಸಂಘ (ರಿ.) ದಾನಗುಂದು ಹಂದಟ್ಟು ಇದರ ವತಿಯಿಂದ ಹಂದಟ್ಟು ಚೌತಿ ಬೆಳ್ಳಿ ಹಬ್ಬವು ಆಗಸ್ಟ್ 27 ರಿಂದ 31 ರ ತನಕ ನಡೆಯಲಿದೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.
Handattu Chouthi : ಸಹಸ್ರ ನಾರಿಕೇಳ ಗಣಯಾಗ
ಲೋಕಕಲ್ಯಾಣಾರ್ಥವಾಗಿ ಅಗಸ್ಟ್ 30ರಂದು “ಸಹಸ್ರ ನಾರಿಕೇಳ ಗಣಯಾಗ” ಹಾಗೂ ಮಹಾ ಅನ್ನಸಂತರ್ಪಣೆ” ನೆರವೇರಲಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಗೆಳೆಯರ ಬಳಗ ಯುವಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
Also Read : ಕಸ ಗುಡಿಸುವವನ ಬಳಿ 100 ಕೋಟಿ ರೂ. ಆಸ್ತಿ
Handattu Chouthi Silver Jubilee Anand Kundar Invitation release Kannada News



