ಟ್ರಯಂಫ್ ಥ್ರಕ್ಸ್ಟನ್ 400 ಬೈಕ್ ರೆಟ್ರೊ, ಸ್ಟೈಲಿಶ್ ಲುಕ್ ಗೆ ಪುಲ್ ಫಿಧಾ: ಬೆಲೆ ಮಾತ್ರ ಸ್ವಲ್ಪ ದುಬಾರಿ
Triumph Thruxton 400: ಬೈಕ್ ಪ್ರಿಯರಿಗೆ ಒಂದೊಳ್ಳೆ ಸುದ್ದಿ. ಟ್ರಯಂಫ್ ತನ್ನ ಹೊಸ ಬೈಕ್ ಥ್ರಕ್ಸ್ಟನ್ 400 ಅನ್ನು ಆಗಸ್ಟ್ 6 (ಇಂದು) ಭಾರತದಲ್ಲಿ ಬಿಡುಗಡೆಮಾಡಲಿದೆ.
ಟ್ರಯಂಫ್ನ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400X ಬೈಕ್ಗಳು ಈಗಾಗಲೇ ಎಂಟ್ರಿ ಲೆವೆಲ್ ಪ್ರೀಮಿಯಂ ವಿಭಾಗದಲ್ಲಿ ತಮ್ಮ ಸ್ಥಾನವನ್ನ ಭದ್ರ ಪಡಿಸಿಕೊಂಡಿವೆ. 400 ಶ್ರೇಣಿಗೆ ಥ್ರಕ್ಸ್ಟನ್ ತನ್ನ ಹೊಸ ವಿನ್ಯಾಸದೊಂದಿಗೆ ಸೇರ್ಪಡೆಯಾಗಲಿದೆ.
ಇದು ಬಜಾಜ್ ಆಟೋ ಸಹಯೋಗದೊಂದಿಗೆ 400 ಸಿಸಿ ಫ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾದ 3 ನೇ ಬೈಕ್ ಆಗಿದೆ.
ಪರೀಕ್ಷೆಯ ಸಮಯದಲ್ಲಿ ಕಾಣಿಸಿಕೊಂಡ ಈ ಬೈಕ್ ಅನ್ನು ಇಂದು ಅನಾವರಣಗೊಳಿಸಲಾಗುತ್ತಿದೆ. ಈ ಬೈಕ್ನಲ್ಲಿ ಯಾವೆಲ್ಲಾ ಹೊಸ ವೈಶಿಷ್ಟ್ಯಗಳನ್ನು ಕಾಣಬಹುದು ಎಂದು ನೋಡೋಣ.
ಟ್ರಯಂಫ್ ಥ್ರಕ್ಸ್ಟನ್ 400 ಬೈಕ್ನ ವಿನ್ಯಾಸ
ಈ ಬೈಕ್ ಅನ್ನು ಪರೀಕ್ಷೆಯ ಸಮಯದಲ್ಲಿ ಹಾಗೂ ಸೋರಿಕೆಯಾದ ಚಿತ್ರಗಳನ್ನು ನೋಡಿದಾಗ ಅದರ ವಿನ್ಯಾಸದ ಕಲ್ಪನೆ ಅಂದಾಜು ಮಾಡಬಹುದಾಗಿದೆ. ಇದೊಂದು ರೆಟ್ರೊ, ಸ್ಟೈಲಿಶ್ ಹಾಗೂ ಬ್ರಿಟಿಷ್ ಲುಕ್ ಅನ್ನು ನೀಡುವ ಬೈಕ್ ಎನ್ನುವುದು ತಿಳದುಬರುತ್ತದೆ. ಇದರ ದುಂಡಗಿನ ಎಲ್ಇಡಿ ಹೆಡ್ಲೈಟ್ ಇದಕ್ಕೆ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ. ಇನ್ನು ಇದರ ಸೀಟ್ ಕೆಫೆ ರೇಸರ್ನಂತಿದ್ದು, ಹ್ಯಾಂಡಲ್ಬಾರ್ಗಳು ಕೆಳಗಿವೆ. ಇದರ ಇಂಧನ ಟ್ಯಾಂಕ್ ಟಿಯರ್ಡ್ರಾಪ್ ಆಕಾರದಲ್ಲಿದ್ದು ಹಿಂಭಾಗದಲ್ಲಿ ಸಣ್ಣ ಟೈಲ್ಲೈಟ್ ಮತ್ತು ಗ್ಯಾಬ್ ರೈಲ್ನಂತಹ ವಿನ್ಯಾಸ ಹೊಂದಿರಬಹುದು. ಸೋರಿಕೆಯಾದ ಚಿತ್ರಗಳ ಪ್ರಕಾರ ಈ ಬೈಕ್ ಹಳದಿ ಮತ್ತು ಸಿಲ್ವರ್ ಬಣ್ಣಗಳ ಸಂಯೋಜನೆಯೊಂದಿಗೆ ಬರಬಹುದು.
ಇದನ್ನೂ ಓದಿ: ಮಳೆಗಾಲದಲ್ಲಿ ಸುರಕ್ಷಿತ ಕಾರು ಚಾಲನೆಗೆ ಉಪಯುಕ್ತ 10 ಸಲಹೆಗಳು
ಟ್ರಯಂಫ್ ಥ್ರಕ್ಸ್ಟನ್ 400 ಬೈಕ್ನ ಇತರೆ ವೈಶಿಷ್ಟ್ಯಗಳು
ಥ್ರಕ್ಸ್ಟನ್ ಬೈಕ್ 400 ಸಿಸಿ ಬೈಕ್ನ ಫ್ಲಾಟ್ಫಾರ್ಮ್ ಅನ್ನು ಆಧರಿಸಿರುವುದರಿಂದ ಹಲವು ವೈಶಿಷ್ಟ್ಯಗಳನ್ನು ಈ ಮೊದಲು ಬಿಡುಗಡೆಯಾದ ಬೈಕ್ನಿಂದಲೇ ತೆಗೆದುಕೊಂಡಿರಬಹುದು. ಇದು ಸಂಪೂರ್ಣವಾಗಿ ಎಲ್ಇಡಿ ಲೈಟಿಂಗ್, ಡಿಜಿಟಲ್-ಎನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಸ್ಲಿಪ್ಪರ್ ಕ್ಲಚ್ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ದಕ್ಷತೆ ಮತ್ತು ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ, ಇದರ ಸ್ಪೋರ್ಟಿ ಲುಕ್ ಇನ್ನೂ ಉತ್ತಮವಾಗಿರುವುದನ್ನು ನೀರಿಕ್ಷಿಸಬಹುದಾಗಿದೆ. ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400X ನಂತೆಯೇ 398 cc ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 39.5 bhp ಪವರ್ ಮತ್ತು 37.5 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯದ ಇಂಜಿನ್ ಹೊಂದಿದೆ. 6-ಸ್ಪೀಡ್ ಟ್ರಾನ್ಸ್ಮಿಷನ್ ಮತ್ತು ಸ್ಲಿಪ್-ಅಸಿಸ್ಟ್ ಕ್ಲಚ್ನೊಂದಿಗೆ ಬರುತ್ತದೆ. ಈ ಬೈಕ್ನ ಹಿಂಭಾಗದಲ್ಲಿರುವ ಮೊನೊಶಾಕ್ ಮತ್ತು 2 ಚಕ್ರಗಳಲ್ಲಿರುವ ಡಿಸ್ಕ್ ಬ್ರೇಕ್ಗಳು ಸವಾರರಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ.
ಇದನ್ನೂ ಓದಿ: ನಿಮ್ಮ ಕಾರಿಗೂ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿಸಿಕೊಳ್ಬೇಕಾ? ಅದಕ್ಕೆ ಈ ಸಿಂಪಲ್ ಟಿಪ್ಸ್ ಪಾಲಿಸಿ
ಟ್ರಯಂಫ್ ಥ್ರಕ್ಸ್ಟನ್ 400 ಬೈಕ್ನ ಬೆಲೆ
ಟ್ರಯಂಫ್ ಸ್ಪೀಡ್ 400 ಬೈಕ್ನ ಬೆಲೆಯು 2.40 ಲಕ್ಷ ರೂ. (ಎಕ್ಸ್ ಶೋ ರೂಂ ಬೆಲೆ) ಮತ್ತು ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಬೈಕ್ನ ಬೆಲೆಯು 2.65 ಲಕ್ಷ ರೂ. (ಎಕ್ಸ್ ಶೋ ರೂಂ ಬೆಲೆ) ಇದೆ. ಥ್ರಕ್ಸ್ಟನ್ ಕೂಡಾ 400 ಫ್ಲಾಟ್ಫಾರ್ಮ್ಗೆ ಸೇರಿರುವುದರಿಂದ ಈ ಬೈಕ್ನ ಎಕ್ಸ್ ಶೋ ರೂಂ ಬೆಲೆಯನ್ನು ಸುಮಾರು 2.80 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಥ್ರಕ್ಸ್ಟನ್ 400 ಬೈಕ್, ಟ್ರಯಂಫ್ನ 400 ಸಿಸಿ ಸರಣಿಯಲ್ಲಿ ಅತ್ಯಂತ ದುಬಾರಿಯ ಬೈಕ್ ಆಗಿದೆ.
ಇದನ್ನೂ ಓದಿ: Top 12 EV cars 2025 ರಲ್ಲಿ ಬಿಡುಗಡೆ ಆಗೋ ಟಾಪ್ 12 ಇವಿ ಕಾರುಗಳು
Automobile Triumph Thruxton 400 bike launch in India know the expected features and price in Kannada



