ನಿಮ್ಮ ಕಾರಿಗೂ ಫ್ಯಾನ್ಸಿ ನಂಬರ್‌ ಪ್ಲೇಟ್‌ ಹಾಕಿಸಿಕೊಳ್ಬೇಕಾ? ಅದಕ್ಕೆ ಈ ಸಿಂಪಲ್‌ ಟಿಪ್ಸ್‌ ಪಾಲಿಸಿ

Fancy Number Plate For Car: ಈಗಂತೂ ಪ್ರತಿಯೊಬ್ಬರೂ ತಮ್ಮ ಕಾರು ಎಲ್ಲರ ಕಾರಿಗಿಂತ ಭಿನ್ನವಾಗಿ ಕಾಣಬೇಕು ಅಂತ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಕಾರಿನಲ್ಲಿ ಏನೇನೋ ಬದಲಾವಣೆಗಳನ್ನು ಮಾಡಿಸುತ್ತಾರೆ.

ಅದರಲ್ಲೂ ಕಾರಿನ ನಂಬರ್ ಪ್ಲೇಟ್‌ ಬಗ್ಗೆಯಂತೂ ವಿಶೇಷವಾಗಿ ಯೋಚಿಸುತ್ತಾರೆ. ಯಾವ ನಂಬರ್‌ ಪ್ಲೇಟ್‌ ಇದ್ದರೆ ತಮ್ಮ ಕಾರು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ ಎಂದು ಯೋಚಿಸುತ್ತಾರೆ.

ಇದು ಕಾರಿನ ಮಾಲಿಕರ ಕತೆಯಾದರೆ, ಇನ್ನು ರಸ್ತೆಗಿಳಿದ ಆ ಕಾರನ್ನು ನೋಡುವ ಜನರು ಇದೇನು ಇವರ ಕಾರ್‌ನ ನಂಬರ್‌ ಪ್ಲೇಟ್‌ ಇಷ್ಟು ವಿಶೇಷವಾಗಿದೆ ಎಂದು ಕೆಲವೊಮ್ಮೆ ಯೋಚಿಸಿ ಇನ್ನು ಕೆಲವೊಮ್ಮೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಆಶ್ಚರ್ಯವೇಕೆಂದರೆ, ಅವರಿಗೆ ಈ ರೀತಿಯ ನಂಬರ್‌ ಪ್ಲೇಟ್‌ ಹೇಗೆ ಸಿಕ್ಕಿತು ಎಂಬ ಯೋಚನೆ ಅವರ ಮನಸ್ಸಿನಲ್ಲಿ ಸುಳಿದಾಡುತ್ತದೆ. 0001, 7777, 9999 ಈ ರೀತಿಯ ಸಂಖ್ಯೆಗಳನ್ನು ನೋಡಿದಾಗಲಂತೂ ಕುತೂಹಲ ಇನ್ನೂ ಹೆಚ್ಚುತ್ತದೆ.

ಈ ರೀತಿಯ ನಂಬರ್‌ ಫ್ಲೇಟ್‌ಗೆ ಫ್ಯಾನ್ಸಿ ನಂಬರ್‌ ಫ್ಲೇಟ್‌ ಅಥವಾ ವಿಐಪಿ ನಂಬರ್‌ ಎಂದು ಹೇಳುತ್ತಾರೆ. ಹಾಗಾದರೆ ಈ ರೀತಿಯ ಫ್ಯಾನ್ಸಿ ನಂಬರ್‌ಗಳನ್ನು ನಿಮ್ಮ ಕಾರಿಗೂ ಪಡೆಯುವುದು ಹೇಗೆ?

ಅದರ ಪ್ರಕ್ರಿಯೆಗಳೇನು ಹಾಗೂ ಹೆಚ್ಚುವರಿ ಶುಲ್ಕವೇನಾದರೂ ಪಾವತಿಸಬೇಕಾ ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ವಿಐಪಿ ಸಂಖ್ಯೆ ಪಡೆಯುವುದು ಹೇಗೆ?

ಕಾರಿಗೆ ವಿಐಪಿ ಸಂಖ್ಯೆ ಪಡೆಯುವುದು ಕಷ್ಟಕದ ಕೆಲಸವಲ್ಲ. ಆದರೆ ಅದರ ಸರಿಯಾದ ವಿಧಾನವನ್ನು ತಿಳಿದುಕೊಳ್ಳಬೇಕು. ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರೆ ಸಚಿವಾಲಯವು ವಿಐಪಿ ಸಂಖ್ಯೆಗಳನ್ನು ಮಾರಾಟ ಮಾಡಲು ವಿಶೇಷ ಆನ್‌ಲೈನ್‌ ಹರಾಜನ್ನು ಏರ್ಪಡಿಸುತ್ತದೆ. ಆಗ ನೀವು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ರಸ್ತೆ ಸಾರಿಗೆ ಸಚಿವಾಲಯದ ಅಧಿಕೃತ ವೆಬ್‌ಸೈಟ್ parivahan.gov.in/parivahan/ ಗೆ ಭೇಟಿ ನೀಡಬೇಕು. ಅಲ್ಲಿ ಸಾರ್ವಜನಿಕ ಬಳಕೆದಾರರಾಗಿ, ನಿಮ್ಮ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ಐಡಿಯಂತಹ ಅಗತ್ಯ ಮಾಹಿತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ಪರಿಶೀಲನೆಗಾಗಿ ಬರುವ OTPಯನ್ನು ನಮೂದಿಸಿ ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ: ಮಳೆಗಾಲದಲ್ಲಿ ಇಲೆಕ್ಟ್ರಿಕ್‌ ಕಾರ್‌ ಕೇರ್‌ ಮಾಡೋದು ಹೇಗೆ ಅಂತೀರಾ? ಹಾಗಾದ್ರೆ ಈ ಟಿಪ್ಸ್‌ ನಿಮಗಾಗಿ

ನಿಮ್ಮ ನೆಚ್ಚಿನ ಸಂಖ್ಯೆ ಆರಿಸಿಕೊಳ್ಳುವುದು ಹೇಗೆ?

ನೋಂದಣಿ ಮಾಡಿಕೊಂಡ ನಂತರ, ನಿಮ್ಮ ವಾಹನವನ್ನು ನೀವು ನೋಂದಾಯಿಸಲು ಬಯಸುವ ರಾಜ್ಯದ ಹೆಸರನ್ನು ನೀವು ಆರಿಸಬೇಕು. ನಂತರ ವಾಹನದ ವಿವರಗಳನ್ನು ನೀಡಬೇಕು. ಉದಾಹರಣೆಗೆ ಅದು ಕಾರು ಅಥವಾ ಸ್ಕೂಟರ್, ವಾಹನವು ಖಾಸಗಿ ಅಥವಾ ವಾಣಿಜ್ಯವೇ ಎಂಬಂತಹ ವಿವರಗಳನ್ನು ನೀಡಬೇಕಾಗುತ್ತದೆ. ಇದಾದನಂತರ ನೀವು ವಿಐಪಿ ಸಂಖ್ಯೆಗಳ ಪಟ್ಟಿಯನ್ನು ನೋಡಬಹುದು. ಅಲ್ಲಿ ನೀವು ನಿಮ್ಮ ಇಷ್ಟದ ಆಯ್ಕೆಯ ಸಂಖ್ಯೆಯನ್ನು ಆಯ್ಕೆ ಮಾಡಬಹುದು. ಅದಕ್ಕಿಂತ ಮೊದಲು ಲಭ್ಯತೆಯನ್ನು ಪರಿಶೀಲಿಸಬಹುದು.

ಶುಲ್ಕ ಪಾವತಿಸಿಬೇಕಾಗುತ್ತದೆಯಾ?

ಹೌದು, ನಿಮ್ಮ ಆಯ್ಕೆಯ ಸಂಖ್ಯೆಯನ್ನು ನೀವು ಪಡೆದುಕೊಳ್ಳಬೇಕೆಂದರೆ, ಆ ಸಂಖ್ಯೆಗೆ ನೀವು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆ ಸಂಖ್ಯೆಯ ಜನಪ್ರಿಯತೆಯನ್ನು ಅವಲಂಬಿಸಿ ಶುಲ್ಕವು ಬದಲಾಗುತ್ತದೆ. ಶುಲ್ಕವನ್ನು ಪಾವತಿಸಿದ ನಂತರ, ನೀವು ಹರಾಜಿನಲ್ಲಿ ಭಾಗವಹಿಸಬಹುದು.

ಹರಾಜು ಪ್ರಕ್ರಿಯೆ ಹೇಗೆ?

ಈ ಹರಾಜು ಪ್ರಕ್ರಿಯೆಯು ಕೆಲವು ದಿನಗಳವರೆಗೆ ಇರುತ್ತದೆ. ನೀವು ಆಯ್ಕೆ ಮಾಡಿದ ಸಂಖ್ಯೆಗೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಬಿಡ್ ಮಾಡಿದರೆ, ಹೆಚ್ಚಿನ ಬಿಡ್ ಮಾಡಿದವರು ಆ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ: Honda CB 125 Hornet Bike: ಹೊಂಡಾದ ಹೊಸ CB 125 ಹಾರ್ನೆಟ್‌ ಬೈಕ್‌: ಇದು ಮಧ್ಯಮ ವರ್ಗದವರಿಗೆ ಗುಡ್‌ನ್ಯೂಸ್

ಸಂಖ್ಯೆ ಹಂಚಿಕೆ ಹೇಗೆ?

ಹರಾಜಿನಲ್ಲಿ ಹೆಚ್ಚಿನ ಬಿಡ್ ಮಾಡಿದವರಿಗೆ ಸಂಖ್ಯೆಯನ್ನು ನೀಡಲಾಗುತ್ತದೆ. ನೀವು ಬಿಡ್ ನಲ್ಲಿ ಗೆದ್ದರೆ, ಉಳಿದ ಮೊತ್ತವನ್ನು ಠೇವಣಿ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ನಂತರ ನಿಮಗೆ ನಂಬರ್‌ ಹಂಚಿಕೆಯಾದ ಪತ್ರವನ್ನು ನೀಡಲಾಗುತ್ತದೆ.

Automobile how to get Fancy number plate for car VIP registration number information in Kannada

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories