
ಓಟದ ಸ್ಪರ್ಧೆಯಲ್ಲಿ ಉತ್ತಮ ಓಟಗಾರರು ಇರುವಾಗ ಗೆಲ್ಲುವುದೆಂದರೆ ಸಾಮಾನ್ಯ ವಿಚಾರವಲ್ಲ. ಗೆಲುವು ಸಾಧಿಸಲು ಓಟಗಾರರು ಹರಸಾಹಸ ಮಾಡಬೇಕಾಗುತ್ತದೆ. ಅಂತಹದರಲ್ಲಿ ಬ್ರೆಜಿಲ್ನಲ್ಲಿ ನಡೆದ ಓಟದ ಸ್ಫರ್ಧೆಯಲ್ಲಿ ಕುಡಿದ ವ್ಯಕ್ತಿಯೊಬ್ಬ ಕೇವಲ ಚಪ್ಪಲಿಗಳನ್ನು ಧರಿಸಿ, ನೇರವಾಗಿ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ 8 ಕಿಲೋಮೀಟರ್ ಓಟವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾನೆ.
31 ವರ್ಷದ ಇಸಾಕ್ ಪಿನ್ಹೋ ನೂರಾರು ಪ್ರಸಿದ್ಧ ಓಟಗಾರರ ಗುಂಪಿನೊಂದಿಗೆ ತನ್ನ ವೀರೋಚಿತ ಪ್ರದರ್ಶನವನ್ನು ನೀಡಿದ್ದಾನೆ. ಇವನ ಸಾಹಸದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರನ್ನು ಬೆರಗುಗೊಳಿಸಿದೆ.
ನ್ಹೋ ಈಶಾನ್ಯ ಪ್ಯಾರಾ ಪಟ್ಟಣದ ಕ್ಯಾಪಿಟಾವೊ ಪೊಕೊದ ಸ್ಥಳೀಯನು. ಅವನು ಬ್ರೆಜಿಲ್ನಲ್ಲಿ ನಡೆದ 8 ಕಿಮೀ ಓಟದಲ್ಲಿ ಕೇವಲ ಫ್ಲಿಪ್-ಫ್ಲಾಪ್ಗಳನ್ನು ಧರಿಸಿ ಎಲ್ಲರೂ ಆಶ್ಚರ್ಯಪಡುವಂತೆ ಗೆದ್ದನು. ಆ ಸಮಯದಲ್ಲಿ ಅವನು ಕುಡಿದಿದ್ದರೂ ಕೂಡ ತನ್ನನ್ನು ತಾನು ಸಮತೋಲನಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾದನು.
ಇದನ್ನೂ ಓದಿ : 80ನೇ ವಯಸ್ಸಲ್ಲಿ 1000 ಮೆಟ್ಟಿಲು ಏರಿದ ಅಜ್ಜಿ
ಮದ್ಯದ ಚಟ ಮತ್ತು ನಿರಾಶ್ರಿತತೆಯಿಂದ ಬಳಲುತ್ತಿದ್ದ ಅವನು ಈ ಸ್ಪರ್ಧೆಯಲ್ಲಿ ಗೆದ್ದ ನಂತರ ಈಗ ಕುಡಿಯುವುದನ್ನು ನಿಲ್ಲಿಸಿರುವುದಾಗಿ ಮತ್ತು ಕ್ರೀಡೆಯಲ್ಲಿ ಭಾಗವಹಿಸುವುದಾಗಿ ಹೇಳಿಕೊಂಡಿದ್ದಾನೆ. ವರದಿಯ ಪ್ರಕಾರ, ಅವನು ಓಟಕ್ಕೆ ನೋಂದಾಯಿಸಿಕೊಂಡಿಲ್ಲ ಮತ್ತು ಅಂತಿಮ ಗೆರೆಯನ್ನು ದಾಟಿದ್ದಕ್ಕಾಗಿ ಪದಕವನ್ನು ನೀಡಲಾಯಿತು.
ಬ್ರೆಜಿಲ್ನ ತರಬೇತುದಾರರಾದ ಎಸ್ಟೇಲಾ ಲಾರಿಜ್ಜಿಯೇರಿ, ಪಿನ್ಹೋ ಅವನ ಸ್ಪೂರ್ತಿದಾಯಕ ಕಥೆಯನ್ನು ತಿಳಿದ ನಂತರ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವನ ಓಟದ ಸ್ಫರ್ಧೆಯ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿದೆ. ವಿಡಿಯೊ ವೈರಲ್ ಆದ ನಂತರ, ಇಸಾಕ್ ಅವನ ಸೋಶಿಯಲ್ ಮೀಡಿಯಾ ಖಾತೆಯನ್ನು 40,000 ಕ್ಕೂ ಹೆಚ್ಚು ಜನರು ಫಾಲೋ ಮಾಡಿದ್ದಾರೆ.
ಇದನ್ನೂ ಓದಿ : ಬಾಲಕನ ಹಲ್ಲು ಶಾರ್ಪ್ ಮಾಡೋದಕ್ಕೆ ಈತ ಮಾಡಿದ್ದೇನು ಗೊತ್ತಾ ?
ವರದಿಗಳ ಪ್ರಕಾರ, ಈ ಘಟನೆಯ ನಂತರ ಸ್ಥಳೀಯರು ಪಿನ್ಹೋ ಅವನ ನೆರವಿಗೆ ಧನಸಹಾಯ ಮಾಡಿದ್ದಾರೆ. ಅವನು ಸ್ವಂತ ಸ್ಥಳಕ್ಕೆ ತೆರಳುವವರೆಗೆ ತಾತ್ಕಾಲಿಕ ಮನೆ ಹುಡುಕಲು ಸಹಾಯ ಮಾಡಿದ್ದಾರೆ ಮತ್ತು ಉದ್ಯೋಗ ಹುಡುಕುವಲ್ಲಿ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
ಸಮುದಾಯದ ಸದಸ್ಯರು, ಪ್ರಭಾವಿಗಳು ಮತ್ತು ವ್ಯಾಪಾರ ಮಾಲೀಕರು ಪಾದರಕ್ಷೆಗಳು, ಬಟ್ಟೆಗಳನ್ನು ಅವನಿಗೆ ನೀಡಿದ್ದಾರೆ ಮತ್ತು ತರಬೇತಿಗಳ ಮೂಲಕ ಅವನಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
Drunk man wins 8km race this story is very exciting



