ಕೋಟ : ಗೇರುಬೀಜ ಖರೀದಿ ಹೆಸರಲ್ಲಿ ಮಹಿಳೆಗೆ 2.5 ಲಕ್ಷ ವಂಚನೆ

Udupi News : ಕೋಟ : ಗೇರು ಬೀಜದ ಖರೀದಿಯ ನೆಪದಲ್ಲಿ ಬಿಎಸ್‌ಎಫ್‌ ಆಫೀಸರ್‌ ಹೆಸರಲ್ಲಿ ಮಹಿಳಾ ವ್ಯಾಪಾರಿಗೆ 2.5 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಕುಂದಾಪುರದ ಗೇರು ಬೀಜದ ವ್ಯಾಪಾರಿಯಾದ ವೀಣಾ (56 ವರ್ಷ) ಎಂಬವರಿಗೆ ತಾನು ಯಲಹಂಕದ ಬಿಎಸ್‌ಎಫ್‌ ( BSF)ಪರ್ಚೇಸರ್ ಅಧಿಕಾರಿ ಖುನಾಲ್‌ ಚೌಧರಿ ಎಂಬಾತ ಪರಿಚಯ ಮಾಡಿಕೊಂಡಿದ್ದ.

ಮೊದಲ ಹಂತದಲ್ಲಿ 5 ಟನ್ ಗೇರುಬೀಜ ಆಯಿಲ್ ಖರೀದಿಸುತ್ತೇವೆ. ನಂತರ 30 ಟನ್ ಗೇರು ಆಯಿಲ್‌ಗೆ‌ ಖರೀದಿಗೆ ಬೇಡಿಕೆ ಇಟ್ಟಿದ್ದ ಆಗಸ್ಟ್‌ 14ರಂದು ಟ್ಯಾಂಕರ್‌ನಲ್ಲಿ ಆಯಿಲ್‌ ಕಳುಹಿಸುವಂತೆ ಹೇಳಿ ವೀಣಾ ಅವರ ವಿಶ್ವಾಸ ಗಳಿಸಿದ್ದಾನೆ.

ಆಗಸ್ಟ್ 15 ರಂದು ಸರ್ಕಾರಿ ರಜೆ ಇರುವ ಕಾರಣ, ಗೇಟ್‌ಪಾಸ್‌ ಆನ್‌ಲೈನ್‌ನಲ್ಲಿ ಮಾಡಿಸಬೇಕು ಎಂದು ನೆಪ ಹೇಳಿ, ಆತ ₹5 ರೂಪಾಯಿಗಳನ್ನು ತಾನು ಹಾಕುವಂತೆ ಹೇಳಿದ್ದಾನೆ.

ವೀಣಾ ಅವರ ಮಗನ ಬ್ಯಾಂಕ್ ಖಾತೆಯಿಂದ ₹5 ರೂಪಾಯಿ ಹಾಕಿದಾಗ, ವಂಚಕನು ₹10 ಹಿಂದಿರುಗಿಸಿದ್ದಾನೆ.

ಈ ಮೂಲಕ ವೀಣಾ ಅವರ ವಿಶ್ವಾಸಗಳಿಸಿದ ಆರೋಪಿ ಸೆಕ್ಯೂರಿಟಿ ಡೇಪಾಸಿಟ್‌ ಎಂದು ₹2.5 ಲಕ್ಷ ಹಣ ಕಳುಹಿಸುವಂತೆ ತಿಳಿಸಿದ್ದಾನೆ. ವೀಣಾ ಅವರು ದೆಹಲಿಯಲ್ಲಿ ಮೀಟಿಂಗ್‌ನಲ್ಲಿ ಇದ್ದ ಕಾರಣ ತಕ್ಷಣವೇ 2,45,486 ಹಣವನ್ನು ವರ್ಗಾಯಿಸಿದ್ದಾರೆ.

ಇದನ್ನೂ ಓದಿ : ಉಡುಪಿ ಅಪರಾಧ ಪ್ರಕರಣಗಳು

ನಂತರ, ತಾವು ಮೋಸ ಹೋಗಿರುವುದನ್ನು ಅರಿತ ವೀಣಾ, ಕೂಡಲೇ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಯಲಹಂಕ ಭಂಡಾರದ ಅಧಿಕಾರಿಯೆಂದು ನಂಬಿಸಿ ಹಣ ಪಡೆದು ಮೋಸ ಮಾಡಿರುವ ಆರೋಪಿ ಖುನಾಲ್ ಚೌಧರಿ ವಿರುದ್ಧ ತನಿಖೆ ಮುಂದುವರಿದಿದೆ. ಸೈಬರ್ ಅಪರಾಧಗಳಿಂದ ಜಾಗರೂಕರಾಗಿರಿ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ 50ರ ಸಂಭ್ರಮಕ್ಕೆ 50 ಸೇವಾ ಕಾರ್ಯ

Kota Police station Woman cheated of Rs 250000lakh in the name of buying cashew nuts Kannada news Udupi News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories