ಇಂಟೆಲಿಜನ್ಸ್‌ ಬ್ಯೂರೋ ನೇಮಕಾತಿ 2025: 4,987 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ

Intelligence Bureau Recruitment 2025: ಗೃಹ ಸಚಿವಾಲಯದ ಅಧೀನದಲ್ಲಿರುವ ಗುಪ್ತಚರ ಬ್ಯೂರೋ (Intelligence Bureau) ಈ ವರ್ಷದ ಅತಿ ದೊಡ್ಡ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಇಂಟಲಿಜೆನ್ಸ್‌ ಬ್ಯೂರೋ ಒಟ್ಟು 4987 ಭದ್ರತಾ ಸಹಾಯಕ/ ಕಾರ್ಯನಿರ್ವಾಹಕ (SA/Exe) ಹುದ್ದೆಗೆ ಅರ್ಜಿ ಆಹ್ವಾನಿಸದೆ. ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಭಾರತದ ಪ್ರಮುಖ ಆಂತರಿಕ ಗುಪ್ರಚರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಇದೊಂದು ಅನನ್ಯ ಅವಕಾಶವಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆಗಸ್ಟ್‌ 17ರ ಒಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಅಭಿಯಾನವು ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಾದ ಮಾಹಿತಿ ಹೀಗಿದೆ…

Intelligence Bureau Recruitment 2025: ಹುದ್ದೆಯ ಹೆಸರು

ಭದ್ರತಾ ಸಹಾಯಕ/ಕಾರ್ಯನಿರ್ವಾಹಕ

ಒಟ್ಟು ಹುದ್ದೆಗಳು: 4987

ಶೈಕ್ಷಣಿಕ ಅರ್ಹತೆ

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಾಸಸ್ಥಳ ಪ್ರಮಾಣಪತ್ರ ಹಾಗೂ ಸ್ಥಳೀಯ ಭಾಷೆಯ ಜ್ಞಾನವೂ ಅತ್ಯಗತ್ಯ.

ವಯೋಮಿತಿ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 27 ವರ್ಷಗಳು. ನಿಯಮಾನುಸಾರ ಮೀಸಲು ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಸಂಬಳ ಮತ್ತು ಆಯ್ಕೆ ಪ್ರಕ್ರಿಯೆ

ಆಯ್ಕೆಯಾದ ಅಭ್ಯರ್ಥಿಗಳಿಗೆ ಲೆವಲ್‌ – 3 (21,700 ರೂ. – 69,100 ರೂ.) ಅಡಿಯಲ್ಲಿ ವೇತನ ದೊರೆಯುತ್ತದೆ. ಈ ಹುದ್ದೆಗೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುವುದು.

ಇದನ್ನೂ ಓದಿ: ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ! ಬ್ಯಾಂಕ್‌ ಆಫ್‌ ಮಹಾರಾಷ್ಟ್ರದಲ್ಲಿದೆ 500 ಜನರಲಿಸ್ಟ್‌ ಆಫೀಸರ್‌ ಹುದ್ದೆ

ಅರ್ಜಿ ಶುಲ್ಕ

ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ: 650 ರೂ
ಎಸ್‌ಸಿ/ಎಸ್‌ಟಿ: 550 ರೂ
ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು: 550 ರೂ

ಅರ್ಜಿ ಸಲ್ಲಿಕೆ ಹೇಗೆ?

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.

ಅಲ್ಲಿ ಮುಖಪುಟದಲ್ಲಿರುವ IB ಸೆಕ್ಯುರಿಟಿ ಅಸಿಸ್ಟೆಂಟ್/ಎಕ್ಸಿಕ್ಯುಟಿವ್ ನೇಮಕಾತಿ 2025 ನೋಂದಣಿ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

ಲಾಗಿನ್‌ ಆದ ನಂತರ ಅಲ್ಲಿ ವೈಯಕ್ತಿಕ ವಿವರಗಳನ್ನು ನಮೂದಿಸಿ.

ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ನಿಗದಿತ ಶುಲ್ಕವನ್ನು ಪಾವತಿಸಿ.

ಫಾರ್ಮ್‌ ಅನ್ನು ಸಲ್ಲಿಸಿದ ನಂತರ ದೃಢೀಕರಣ ಪುಟವನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.

ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ.

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದನ್ನೂ ಓದಿ: ಸೆಂಟ್ರಲ್‌ ರೇಲ್ವೆಯಲ್ಲಿ ನೇಮಕಾತಿ : ಎಸ್‌ಎಸ್‌ಎಲ್‌ಸಿ, ಪಿಯಸಿ ಆದವರಿಗೆ ಗುಡ್‌ ನ್ಯೂಸ್‌ !

(Intelligence Bureau Recruitment 2025 August 17 is the last date to apply for 4987 posts)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories