ಕೋಟ : ಕೆಸ್ರು ಓಕ್ಳಿ – ಜನಮನ ಗೆದ್ದ ಕೆಸರುಗದ್ದೆ ಕ್ರೀಡಾಕೂಟ

Kesaru Okuli Kesarugadde Sports : ಕೋಟ : ಕರಾವಳಿ ಭಾಗದಲ್ಲಿ ಮಳೆಗಾಲ ಆರಂಭವಾದ್ರೆ ಸಾಕು ಕೆಸರು ಗದ್ದೆಯ ಕ್ರೀಡಾಕೂಟಗಳು ಆರಂಭವಾಗುತ್ತದೆ. ಮಕ್ಕಳು, ಮಹಿಳೆಯರು, ಯುವಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಕೋಟದಲ್ಲಿ ನಡೆದ ಕೆಸ್ರು ಓಕ್ಳಿ ಜನಮನ ಗೆದ್ದಿದೆ.

ಉಡುಪಿ ಜಿಲ್ಲೆಯ ಕೋಟ ಸಮೀಪದ ದಾನಗುಂದು- ಹಂದಟ್ಟಿನಲ್ಲಿ ಕೆಸ್ರು ಓಕ್ಳಿ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು. ಇಲ್ಲಿನ ಗೆಳೆಯರ ಬಳಗ ಯುವಕ ಸಂಘ ಕಳೆದ 25 ವರ್ಷಗಳಿಂದಲೂ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುತ್ತಿದೆ.

ಈ ಬಾರಿ ಗಣೇಶೋತ್ಸವ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಅಗಸ್ಟ್‌ 27 ರಿಂದ ಮೇ 31ರ ವರೆಗೆ ಬೆಳ್ಳಿಹಬ್ಬದ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಭಾನುವಾರ ನಡೆದ ಕೆಸ್ರು ಓಕ್ಳಿ ಕಾರ್ಯಕ್ರಮ ಯಶಸ್ವಿ ಆಗಿತ್ತು. ಸುರಿಯುವ ಮಳೆಯ ನಡುವಲ್ಲೇ ಪುಟಾಣಿ ಮಕ್ಕಳಿಂದ ಹಿಡಿದು, ಯುವಕರು, ಯುವತಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Kesaru Okuli Kesarugadde Sports Festival Handattu Kotathattu Geleyara Balaga yuvaka sanga

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories