ಹೀರೋ ಗ್ಲಾಮರ್ ಎಕ್ಸ್ 125 : ಅತ್ಯಂತ ಕಡಿಮೆ ಬೆಲೆ, 1 ಲೀಟರ್‌ಗೆ 65 ಕಿ.ಮೀ. ಮೈಲೇಜ್‌

ಹೀರೋ ಮೋಟೋಕಾರ್ಪ್‌ ಕಂಪೆನಿ ಇದೀಗ ಹೀರೋ ಗ್ಲಾಮರ್ ಎಕ್ಸ್ 125 (Hero Glamour x 125 ) ಬೈಕ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಮಧ್ಯಮ ವರ್ಗದವರನ್ನೇ ಗಮನದಲ್ಲಿ ಇಟ್ಟು ಕೊಂಡು ಈ ಬೈಕ್‌ ತಯಾರಿಸಲಾಗಿದೆ. ಬಿಎಸ್‌6 ಮಾದರಿಯ ಈ ಬೈಕ್‌ನಲ್ಲಿ ಮೈಲೇಜ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ಲಾಮರ್‌ ಬೈಕ್‌ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಹೀರೋ ಗ್ಲಾಮರ್ ಎಕ್ಸ್ 125 ಬೈಕ್‌ ವಿಶೇಷತೆ ಏನು ?

ಸುಧಾರಿತ ತಂತ್ರಜ್ಞಾನ : ಗ್ಲಾಮರ್ ಎಕ್ಸ್‌ಟೆಕ್‌ನ ಮುಖ್ಯ ವಿಶೇಷತೆ ಅಂದ್ರೆ ಬೈಕ್‌ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್. ಇದು ಬೈಕ್‌ನ ವೇಗ, ಟ್ರಿಪ್ ಮೀಟರ್, ಓಡೋಮೀಟರ್ ಮತ್ತು ಇಂಧನ ಮಟ್ಟದ ಮಾಹಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.

ಬ್ಲೂಟೂತ್ ಕನೆಕ್ಟಿವಿಟಿ: ಈ ಬೈಕ್ ಬ್ಲೂಟೂತ್ ಸಂಪರ್ಕ ಸೌಲಭ್ಯವನ್ನು ಹೊಂದಿದೆ. ಇದರ ಮೂಲಕ ನಿಮ್ಮ ಫೋನ್‌ ಅನ್ನು ಬೈಕ್‌ಗೆ ಸಂಪರ್ಕಿಸಿ, ಕರೆ ಮತ್ತು ಎಸ್‌ಎಂಎಸ್‌ ನೋಟಿಫಿಕೇಶನ್‌ಗಳನ್ನು ಪಡೆಯಬಹುದು.

ಟರ್ನ್-ಬೈ-ಟರ್ನ್ ನ್ಯಾವಿಗೇಷನ್: ಇದು ಅತ್ಯಂತ ಉಪಯುಕ್ತ ವೈಶಿಷ್ಟ್ಯವಾಗಿದ್ದು, ಬ್ಲೂಟೂತ್ ಮೂಲಕ ನಿಮ್ಮ ಫೋನ್‌ನಿಂದ ಮ್ಯಾಪ್‌ ನ್ಯಾವಿಗೇಶನ್‌ ಮಾಹಿತಿ ಡಿಜಿಟಲ್ ಡಿಸ್‌ಪ್ಲೇಯಲ್ಲಿ ನೇರವಾಗಿ ಕಾಣಿಸುತ್ತದೆ.

ಇಂಧನ ದಕ್ಷತೆ: ಇದರ i3S ತಂತ್ರಜ್ಞಾನ (ಐಡಲ್‌ ಸ್ಟಾರ್ಟ್-ಸ್ಟಾಪ್‌ ಸಿಸ್ಟಮ್) ಟ್ರಾಫಿಕ್‌ನಲ್ಲಿ ಇಂಜಿನ್‌ ಅನ್ನು ಸ್ವಯಂಚಾಲಿತವಾಗಿ ಆಫ್ ಮಾಡಿ, ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ.

ವಿನ್ಯಾಸ: ಬೈಕ್‌ನ ಲುಕ್‌ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಎಲ್ಇಡಿ ಹೆಡ್‌ಲೈಟ್, ಹೊಸ ಗ್ರಾಫಿಕ್ಸ್ ಮತ್ತು ಆಕರ್ಷಕ ಬಾಡಿ ವಿನ್ಯಾಸವು ಬೈಕ್‌ಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಇದಲ್ಲದೆ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಲಭ್ಯವಿದೆ.

Hero Glamour x 125 Lowest price 65 km l mileage Sold in Five Colours Kannada news

ಹೀರೋ ಗ್ಲಾಮರ್ ಎಕ್ಸ್ 125 ಬೈಕ್‌ ಮೈಲೇಜ್‌ ಎಷ್ಟಿದೆ ?

ಹಿರೋ ಕಂಪೆನಿಯ ಬೈಕ್‌ ಗಳು ಅತೀ ಹೆಚ್ಚು ಮೈಲೇಜ್‌ ನೀಡುತ್ತಿವೆ. ಅದ್ರಲ್ಲೂ ಹೊಸ ಗ್ಲಾಮರ್‌ ಬೈಕ್‌ನಲ್ಲಿ ಮೈಲೇಜ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಂಪೆನಿ ನೀಡಿರುವ ಮಾಹಿತಿಯ ಪ್ರಕಾರ 60-65 ಕಿಲೋಮೀಟರ್/ಲೀಟರ್ ಮೈಲೇಜ್ ನೀಡುತ್ತದೆ.

ಹೀರೋ ಮೋಟೋಕಾರ್ಪ್‌ ಕಂಪನಿಯು ಅಧಿಕೃತವಾಗಿ ತಿಳಿಸಿರುವ ಮಾಹಿತಿಯ ಪ್ರಕಾರ, ಈ ಬೈಕ್ ಸುಮಾರು 63 kmpl ಮೈಲೇಜ್ ನೀಡುತ್ತದೆ (ARAI ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟ ಮೈಲೇಜ್).

ಗ್ಲಾಮರ್ ಎಕ್ಸ್‌ಟೆಕ್‌ನ ಬಳಕೆದಾರರು ನೀಡಿದ ವರದಿಗಳ ಪ್ರಕಾರ, ನಗರದ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ಈ ಬೈಕ್ ಸುಮಾರು 54-57 kmpl ಮತ್ತು ಹೆದ್ದಾರಿಗಳಲ್ಲಿ 57-63 kmpl ಮೈಲೇಜ್ ನೀಡುತ್ತದೆ.

ಬೈಕ್‌ನಲ್ಲಿರುವ i3S (Idle Start-Stop) ತಂತ್ರಜ್ಞಾನವು ಬಹಳಷ್ಟು ಸಹಾಯಕವಾಗಿದೆ. ಟ್ರಾಫಿಕ್‌ನಲ್ಲಿ ಬೈಕ್ ನಿಂತಾಗ, ಈ ವ್ಯವಸ್ಥೆಯು ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಆಫ್ ಮಾಡುತ್ತದೆ ಮತ್ತು ಕ್ಲಚ್ ಒತ್ತಿದ ತಕ್ಷಣ ಮತ್ತೆ ಆನ್ ಆಗುತ್ತದೆ. ಇದರಿಂದ ಇಂಧನ ವ್ಯರ್ಥವಾಗುವುದು ತಪ್ಪುತ್ತದೆ.

ಇದನ್ನೂ ಓದಿ : ಟಾಟಾ ಕರ್ವ್‌ ದಾಖಲೆಯ ಮಾರಾಟ ; ಬೆಲೆ ಎಷ್ಟು ಗೊತ್ತಾ ?

ಹೀರೋ ಗ್ಲಾಮರ್ ಎಕ್ಸ್ 125 ಬೆಲೆ ಎಷ್ಟು ?

ಹೀರೋ ಗ್ಲಾಮರ್ ಎಕ್ಸ್‌ಟೆಕ್‌ನ ಬೆಲೆ ನಗರದಿಂದ ನಗರಕ್ಕೆ ವ್ಯತ್ಯಾಸವಾಗುತ್ತದೆ. ದೆಹಲಿ ಮಾರುಕಟ್ಟೆಯಲ್ಲಿ ಈ ಬೈಕ್‌ ಬೆಲೆ ಎಷ್ಟಿದೆ ಅಂತಾ ನೋಡೋದಾದ್ರೆ, ಎಕ್ಸ್-ಶೋರೂಂ ಬೆಲೆಗಳು ಡ್ರಮ್ ಬ್ರೇಕ್ ವೇರಿಯಂಟ್‌ಗೆ ₹90,498 ಮತ್ತು ಡಿಸ್ಕ್ ಬ್ರೇಕ್ ವೇರಿಯಂಟ್‌ಗೆ ₹95,098 ರಷ್ಟಿವೆ.

ಕರ್ನಾಟಕದಂತಹ ರಾಜ್ಯಗಳಲ್ಲಿ ಆನ್-ರೋಡ್ ಬೆಲೆ (ಎಕ್ಸ್-ಶೋರೂಂ, ಆರ್‌ಟಿಒ, ಮತ್ತು ವಿಮೆ ಸೇರಿ) ಸುಮಾರು ₹1.10 ಲಕ್ಷದಿಂದ ₹1.17 ಲಕ್ಷದವರೆಗೆ ಇರುತ್ತದೆ. ಮೈಲೇಜ್ ವಿಷಯದಲ್ಲಿ, ಕಂಪನಿಯು ಅಧಿಕೃತವಾಗಿ ತಿಳಿಸಿದೆ.

ಇದನ್ನೂ ಓದಿ : ಹೊಂಡಾದ ಹೊಸ ಸಿಬಿ 125 ಹಾರ್ನೆಟ್‌ ಬೈಕ್‌ ಬೆಲೆ ಎಷ್ಟು ?

Hero Glamour x 125 Lowest price 65 km l mileage Sold in Five Colours Kannada news

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories