ಸಮುದ್ರದ ನಡುವಿನಲ್ಲಿದೆ ಶಿವ ದೇವಾಲಯ : ಭಕ್ತರ ದರ್ಶನಕ್ಕಾಗಿ ಸ್ವಯಂ ದಾರಿ ಬಿಟ್ಟು ಕೊಡುತ್ತೆ ಸಾಗರ

Nishkalanka Mahadev Temple : ಸುತ್ತಲೂ ಬೋರ್ಗರೆಯುತ್ತಿರೋ ಸಮುದ್ರ . ಪ್ರತಿಘಳಿಗೆಗೊಮ್ಮೆ ದಡವನ್ನು ಕಾಣುವ ನೆಪದಲ್ಲಿ ಬಂದು ಹೋಗುವ ಅಲೆಗಳ ಸಾಲು.ಗಾಳಿಯಲ್ಲಿ ಬೆರೆತ ಕಡಲ ಶಬ್ದ.. ಸಮುದ್ರದ ನಡುವಿನಲ್ಲಿ ಈಗ ಎದ್ದು ಬರುವಂತೆ ಕಾಣುವ ಸಣ್ಣ ಶಿಖರ ಗೋಪುರ.
ಪುರಾಣದ ಸಮುದ್ರ ಮಥನದ ಮಂದಾರ ಪರ್ವತ ಒಂದು ಸಾರಿ ನೆನಪಿಗೆ ಬರದೇ ಇರದು. ಆದ್ರೆ ಇದು ಸಮುದ್ರದ ಮಥನಕ್ಕೆ ಸಂಬಂಧಿಸಿದ ಗೋಪುರವಲ್ಲ . ಬದಲಾಗಿ ಸಮುದ್ರ ಮಥನದಲ್ಲಿ ವಿಷವನ್ನು ಕುಡಿದ ಮಹಾದೇವ ದೇಗುಲ.
ಹೌದು ಇದು ಭಾರತದಲ್ಲಿ ಪೂಜಿಸಲ್ಪಡುವ ವಿಶಿಷ್ಟ ದೇವಾಲಯ . ಭಾರತದಲ್ಲಿ ಶಿವರಾಧನೆ ಹಾಗೂ ಶಿವ ದೇವಾಲಯಕ್ಕೆ ಬಹಳ ಮಹತ್ವವಿದೆ. ಇಲ್ಲಿ ಬೆಟ್ಟ, ಗುಡ್ಡ, ನದಿ ಕಣಿವೆ ಹೀಗೆ ಎಲ್ಲೆಂದರಲ್ಲಿ ನಾವು ಶಿವನ ದೇವಾಲಯವನ್ನು ಕಾಣುತ್ತೇವೆ.

ಆದರೆ ಈ ದೇವಾಲಯ ಮಾತ್ರ ಇದಕ್ಕಿಂತ ತುಂಬಾ ಭಿನ್ನ. ಇಲ್ಲಿ ಸ್ವಯಂ ಭಗವಂತನೇ ಸಮುದ್ರವನ್ನು ತನ್ನ ಆವಾಸವನ್ನಾಗಿ ಮಾಡಿ ಸ್ವಯಂಭು ಆಗಿ ನೆಲೆ ನಿಂತಿದ್ದಾನೆ. ಸಮುದ್ರದ ನಡುವೆ ಆರಾಧಿಸಲ್ಪಡುವ ಈ ದೇವಾಲಯ ಅರಬ್ಬಿ ಸಮುದ್ರದ ಒಳಗಡೆ ಸುಮಾರು 2 ಕಿಲೋ ಮೀಟರ್ ದೂರದಲ್ಲಿದೆ .
ದಡದಿಂದ ನೋಡಿದ್ರೆ ಕೇವಲ ಗೋಪುರ ಹಾಗೂ ಪತಾಕೆ ಮಾತ್ರ ಕಾಣ ಬರುತ್ತೆ. ಹಾಗಾದ್ರೆ ಇಲ್ಲಿ ಶಿವನನ್ನು ಹೇಗೆ ನೋಡೋದಪ್ಪಾ ಅಂದುಕೊಂಡರೆ , ಅದಕ್ಕೂ ಪ್ರಕೃತಿಯೇ ವ್ಯವಸ್ಥೆ ಮಾಡಿಕೊಂಡಿದೆ.
ಹೌದು ಇಲ್ಲಿಗೆ ನಾವು ನೀವು ಬಯಸಿದ ಹಾಗೆ ಹೋಗೋಕೆ ಆಗೋದಿಲ್ಲ, ಬದಲಾಗಿ ಇಲ್ಲಿಗೆ ಹೋಗೋಕೆ ಸಮುದ್ರ ರಾಜನ ಅಪ್ಪಣೆ ಬೇಕು. ಇಲ್ಲಿ ಸ್ವಯಂ ಅರಬ್ಬಿ ಸಮುದ್ರವೇ ಭಕ್ತರ ಭೇಟಿಗಾಗಿ ಕೆಲ ಘಂಟೆಗಳ ಸಮಯ ಮಾಡಿಕೊಡುತ್ತೆ .
ಭಕ್ತರಿಗಾಗಿ ದಾರಿ ಬಿಟ್ಟು ಕೊಡುವ ಸಮುದ್ರ ..!
ಆಗ ದಡದಿಂದ ದೇವಾಲಯದ ವರೆಗೆ ಸಮುದ್ರವೇ ದಾರಿ ಬಿಟ್ಟುಕೊಡುತ್ತೆ, ಆಗ ಸಮುದ್ರದ ಭೂ ಭಾಗ ಮೇಲೆ ಕಾಣಿಸಿಕೊಂಡು ಅದರಮ ಮೂಲಕ ತೆರಳಿ ಶಿವಲಿಂಗಳ ದರ್ಶನ ಮಾಡಿಕೊಳ್ಳಬಹುದು. ಕೆಲವು ಘಂಟೆಗಳ ನಂತರ ಮತ್ತೆ ಸಮುದ್ರ ಮೊದಲಿನಂತಾಗುತ್ತೆ ಅನ್ನೋದೆ ವಿಶೇಷ .
ಇಲ್ಲಿ ಸಾಮಾನ್ಯವಾಗಿ ಮದ್ಯಾಹ್ನ ನಂತದ ವೇಳೆಯಲ್ಲೇ ದರ್ಶನಕ್ಕೆ ಅವಕಾಶ ಸಿಗುತ್ತೆ. ಆಗಲೇ ಭಕ್ತರು ತಮ್ಮ ಪರಿವಾರದ ಸಮೇತರಾಗಿ ಬಂದು ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಸಂಜೆಯಾಗುತ್ತಿದ್ದಂತೆ ಅರ್ಚಕರು ಸೇರಿದಂತೆ ಎಲ್ಲರೂ ದಡಕ್ಕೆ ವಾಪಾಸ್ಸಾಗುತ್ತಾರೆ. ಇನ್ನು ಅಮವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ಭಕ್ತರಿಗೆ ದೇವರ ದರ್ಶನ ಲಭ್ಯವಾಗುವುದಿಲ್ಲ. ಅಂದು ಕಡಲ ಮೊರೆತ ಜಾಸ್ತಿಯಾಗಿದ್ದು ,ಸಮುದ್ರದ ಹಿಂದೆ ಸರಿಯುವುದಿಲ್ಲ, .
ಇದನ್ನೂ ಓದಿ : ಶ್ರೀ ಕೃಷ್ಣನ ನೈವೇದ್ಯಕ್ಕೆ ಅವಲಕ್ಕಿ
ಈ ದೇವಾಲಯದ ಕುರಿತು ಹೇಳೋದಾದ್ರೆ ಈ ಸ್ಥಳದಲ್ಲಿ ಐದು ಸ್ವಯಂಭೂ ಶಿವಲಿಂಗಗಳೂ ಹಾಗೂ ಅದರ ಎದುರಿನಲ್ಲಿ ಐದು ನಂದಿ ವಿಗ್ರಹಗಳಿವೆ. ನಡುವಿನಲ್ಲಿ ದೊಡ್ಡದಾದ ಒಂದು ಶಿವಲಿಂಗವಿದ್ರೆ , ಸುತ್ತಲೂ ಒಂದೇ ರೀತಿಯ ನಾಲ್ಕು ಶಿವಲಿಂಗಗಳು ಪ್ರತಿಷ್ಠಾಪತವಾಗಿದೆ.
ಇಲ್ಲಿನ ಸ್ಥಳಪುರಾಣದ ಪ್ರಕಾರ ಈ ಲಿಂಗಗಳು ಮಹಾಭಾರತದ ಕಾಲಾವಧಿಗೆ ಸೇರಿದ್ದು ಎನ್ನಲಾಗುತ್ತೆ . ಮಹಾಭಾರತದ ಯುದ್ಧದ ನಂತರ ಪಾಂಡವರಿಗೆ ತಮ್ಮ ಬಂಧುಗಳ ಸಾವಿನ ನೋವು ಕಾಡೋಕೆ ಶುರುವಾಗಿತ್ತು .
ಅಮಾಯಕರ ಯೋಧರ ಹತ್ಯೆಯ ಪಾಯಶ್ಚಿತ ಮಾಡೋಕೆ ಅಂತನೇ ಕೃಷ್ಣನ ಬಳಿ ಸಲಹೆ ಕೇಳಿದ್ರು ಎನ್ನಲಾಗುತ್ತೆ .ಆಗ ಕೃಷ್ಣನು. ಒಂದು ಕಪ್ಪು ಹಸು ಹಾಗೂ ಕಪ್ಪು ಬಾವುಟವನ್ನು ಪಾಂಡವರಿಗೆ ನೀಡಿ, ಅದು ಎಲ್ಲಿ ಬೆಳಗಾಗುತ್ತೋ ಅಲ್ಲಿ ಶಿವನನ್ನು ಆರಾಧಿಸಿ ಎಂದು ಹೇಳಿದನು.

ಶಿವ 5 ಲಿಂಗದ ರೂಪದಲ್ಲಿ ಪಾಂಡವರಿಗೆ ದರ್ಶನ
ಅವರು ನಡೆದುಕೊಂಡು ಸೌರಾಷ್ಟ್ರ( ಗುಜರಾತ್ )ದ ಭಾವನಗರಕ್ಕೆ ಬಂದಾಗ ಅಲ್ಲಿ ಬಾವುಟ ಹಾಗೂ ಹಸು ಬಿಳಿ ಬಣ್ಣಕ್ಕೆ ತಿರುಗಿತಂತೆ. ಅಲ್ಲಿ ಶಿವನನ್ನು ಪ್ರಾರ್ಥಿಸಿದಾಗ ಶಿವನು ಐದು ಲಿಂಗದ ರೂಪದಲ್ಲಿ 5 ಪಾಂಡವರಿಗೂ ಕಾಣಿಸಿಕೊಂಡನು.
ಅದೇ ಮುಂದೆ ನಿಷ್ಕಳಂಕ ಮಹಾದೇವ ಕ್ಷೇತ್ರವಾಯಿತು. ಅದೇ ಶಿವಲಿಂಗಗಳು ಇಂದಿಗೂ ಪೂಜಿಸಲ್ಪಡುತ್ತವೆ ಎಂಬುದು ಇಲ್ಲಿಯ ಭಕ್ತರ ನಂಬಿಕೆ.ಇಲ್ಲಿ ನಿಷ್ಕಲಂಕ ಅಂದ್ರೆ ಪಾಪವನ್ನು ಕಳೆಯವವನು ಎಂದರ್ಥ.
ಈ ದೇವಾಲಯವು ಅಹಮದಾಬಾದ್ ನಿಂದ 192 ಕಿಲೋಮೀಟರ್ ಹಾಗೂ ದ್ವಾರಕಾದಿಂದ 492 km ದೂರದಲ್ಲಿದೆ. ಒಟ್ಟಾರೆ ವಿಸ್ಮಯದ ಆಗರವಾಗಿರುವ ದೇವಾಲಯವನ್ನು ನೀವು ನೋಡಿ ಬರದಿದ್ದರೆ ನಮ್ಮ ಕಣ್ಣಿಗೆ ಮೋಸ ಮಾಡಿಕೊಂಡಂತೆ ಅಲ್ವಾ ?
ಇದನ್ನೂ ಓದಿ : ಅಂಗಾರಕ ಚತುರ್ಥಿಯಂದು ಗಣಪನಿಗೆ ಕಡಲೆಯನ್ನು ಸಮರ್ಪಿಸಿ
Nishkalanka Mahadev Temple Gujarat Shiva temple in the middle of the ocean The ocean itself makes way for devotees to have darshan



