Realme GT ಹೊಸ ಸ್ಮಾರ್ಟ್​ಫೋನ್​ : 10,000mAh ಬ್ಯಾಟರಿ, 10 ನಿಮಿಷಕ್ಕೆ ಬ್ಯಾಟರಿ ಚಾರ್ಜ್‌

Realme GT : ದೀರ್ಘಾವಧಿ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವಂತಹ ಸ್ಮಾರ್ಟ್​ಫೋನ್​ ಖರೀದಿ ಮಾಡುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಎಷ್ಟೇ ಹಣಕೊಟ್ಟು ಮೊಬೈಲ್​ ಖರೀದಿಸಿದರೂ ಬ್ಯಾಟರಿ ಸಾಮರ್ಥ್ಯ ಸಮಾಧಾನ ಎನಿಸುವುದಿಲ್ಲ.

ಆದರೆ ಇದೀಗ ಮೊಬೈಲ್​ ಪ್ರಿಯರಿಗೆ ಸಿಹಿಸುದ್ದಿ ಎಂಬಂತೆ Realme ಅತೀ ಹೆಚ್ಚು ಕಾಲ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯದ ಮೊಬೈಲ್​ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಈ ವರ್ಷದ ಆರಂಭದಲ್ಲಿ Realme ಕಂಪನಿಯು 10,000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿತ್ತು. ಆದರೆ ಇದೀಗ ಇದಕ್ಕೂ ಹೆಚ್ಚು ಸಾಮರ್ಥ್ಯದ ಮೊಬೈಲ್​ ಕೂಡ Realme ಕಡೆಯಿಂದ ಮಾರುಕಟ್ಟೆಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಮೊಬೈಲ್​ನಲ್ಲಿ ವೈಡ್​ ಚಾರ್ಜಿಂಗ್​ ಸ್ಪೀಡ್​ ಇರಲಿದೆ. ಆಗಸ್ಟ್​ 27ರಂದು ಈ ಹೊಸ ಮೊಬೈಲ್​ ಲಾಂಚ್​ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. Realme ಕಂಪನಿಯು ಟ್ವೀಟ್​ ಮಾಡಿರುವ ಪ್ರಕಾರ 320W ಫಾಸ್ಟ್​ ಚಾರ್ಜಿಂಗ್​ ಹಾಗೂ 10,000mAh ಬ್ಯಾಟರಿ ಸಾಮರ್ಥ್ಯದ ಮೊಬೈಲ್​ಫೋನ್​ ಮಾರುಕಟ್ಟೆಯಲ್ಲಿದೆ.

ಇದನ್ನೂ ಓದಿ : BBSNL 4G ಬಳಕೆದಾರರಿಗೆ ಸಿಹಿಸುದ್ದಿ : ಕೇವಲ 1 ರೂಪಾಯಿಗೆ, 30 ದಿನ ವ್ಯಾಲಿಡಿಟಿ, ಅನಿಯಮಿತ ಕರೆ

ಮುಂದೆ ಏನು ಬರಬಹುದು ? ಎಂದು ಕೇಳಲಾಗಿದೆ. ಇಲ್ಲಿಯವರೆಗೆ ಕಂಪನಿಯು ಮುಂದೆ ಲಾಂಚ್​ ಆಗಲಿರುವ ಸ್ಮಾರ್ಟ್​ಫೋನ್​ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಈ ಟ್ವೀಟ್​ನ ಮೂಲಕ ಮುಂದೆ ಬರುವ ಸ್ಮಾರ್ಟ್​ಫೋನ್​ ಇನ್ನೂ ಹೆಚ್ಚಿನ ಸಾಮರ್ಥ್ಯವುಳ್ಳ ಬ್ಯಾಟರಿ ಹೊಂದಿದೆ ಎಂಬುದರ ಬಗ್ಗೆ ಸುಳಿವು ನೀಡಿದೆ.

ಮೇ ತಿಂಗಳಲ್ಲಿ ಈ ಕಂಪನಿಯು Realme GT ಕಾನ್ಸೆಪ್ಟ್​ ಪರಿಚಯಿಸಿತ್ತು. ಇದರಲ್ಲಿ 10,000mAh ಬ್ಯಾಟರಿ ಹಾಗೂ 320W ಫಾಸ್ಟ್​ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಫೋನ್​ಗಳು 8.5mmಗಿಂತಲೂ ಸಪೂರವಾಗಿದೆ.

ಇದನ್ನೂ ಓದಿ : ನೀವು ಬಾಯಲ್ಲಿ ಹೇಳಿದ್ರೆ ಪೋಟೋ ಎಡಿಟ್‌ : ಗೂಗಲ್ AI​​ ಹೊಸ ಫೀಚರ್ಸ್‌ ರಿಲೀಸ್‌

200 ಗ್ರಾಂಕ್ಕಿಂತ ತುಸು ಹೆಚ್ಚು ತೂಕವನ್ನು ಹೊಂದಿವೆ. ಇದು Realme ಕಂಪನಿಯ ಅತಿ ದೊಡ್ಡ ಬ್ಯಾಟರಿಯನ್ನು ಹೊಂದಿರುವ ಫೋನ್​ ಆಗಿದ್ದು ಚೀನಾ ವೇರಿಯಂಟ್​ನಲ್ಲಿ ಮಾತ್ರ ಲಭ್ಯವಿದೆ. ಮುಂಬರುವ Realme ಸ್ಮಾರ್ಟ್​ಫೋನ್​ ಯಾವೆಲ್ಲ ವಿಶೇಷತೆಗಳನ್ನು ಹೊಂದಿರಬಹುದು ಎಂಬುದನ್ನು ಕಾದು ನೋಡೋಣ.

Realme GT new smartphone 10000mAh battery charge in 10 minutes

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories