ನೀವು ಬಾಯಲ್ಲಿ ಹೇಳಿದ್ರೆ ಪೋಟೋ ಎಡಿಟ್‌ : ಗೂಗಲ್ AI​​ ಹೊಸ ಫೀಚರ್ಸ್‌ ರಿಲೀಸ್‌

Google Gemini AI : ಗೂಗಲ್​ ಫೋಟ್​ ಅಪ್ಲಿಕೇಶನ್​ನಲ್ಲಿ ಆರ್ಟಿಫಿಷಿಯಲ್​ ಇಂಟಿಲಿಜೆನ್ಸ್​ ಬಳಕೆ ಮಾಡಿ ಹೊಸ ವೈಶಿಷ್ಟ್ಯತೆ ಒಂದನ್ನು ತಯಾರಿಸಲಾಗಿದ್ದು ನೀವು ಕೇವಲ ಮಾತಿನ ಮುಖಾಂತರ ನಿಮಗೆ ಯಾವ ರೀತಿಯ ಚಿತ್ರ ಬೇಕೆಂದು ಹೇಳಿದರೆ ಸಾಕು ನಿಮ್ಮ ಫೋಟೋ ಅದೇ ರೀತಿ ಎಡಿಟ್​ ಆಗಲಿದೆ.

ಮೇಡ್​ ಬಾಯ್​ ಕಾರ್ಯಕ್ರಮದಲ್ಲಿ ಗೂಗಲ್​ ಕಂಪನಿಯು ಈ ಹೊಸ ಫೀಚರ್​ ಬಗ್ಗೆ ಘೋಷಣೆ ಮಾಡಿದೆ. ಹಾಗೂ ಈ ಹೊಸ ವೈಶಿಷ್ಟ್ಯತೆಯು ಇತ್ತೀಚಿಗೆ ಲಾಂಚ್​ ಮಾಡಲಾಗಿರುವ Google Pixel 10 ಸೀರಿಸ್​ನಿಂದ ಆರಂಭಗೊಳ್ಳಲಿದೆ.

ಯಾವ ರೀತಿ ಕಾರ್ಯ ನಿರ್ವಹಿಸುತ್ತೆ ಈ Google ಹೊಸ ಫೀಚರ್​ ?

ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಗೂಗಲ್​ ಫೊಟೋ ಆಪ್​ನಲ್ಲಿ ಹೊಸದೊಂದು ಫೀಚರ್​ನ್ನು ಸೇರ್ಪಡೆಗೊಳಿಸಲಾಗಿದೆ. ಇದು ಕಂಪನಿಯ AI Assistant, Geminiಯನ್ನು ಬಳಕೆ ಮಾಡಿ AI ಫೋಟೋಗಳನ್ನು ಎಡಿಟ್​ ಮಾಡಲಿದೆ.

ನಿಮ್ಮ ಫೋಟೋವನ್ನು ಯಾವ ರೀತಿ ಎಡಿಟ್​ ಮಾಡಬೇಕು ಎಂದು ನೀವು ಬಾಯಲ್ಲಿ ಹೇಳಿದರೆ ಸಾಕು. ಅದಕ್ಕೆ ಅನುಗುಣವಾಗಿ ನಿಮ್ಮ ಫೋಟೋ ಎಡಿಟ್​ ಆಗಲಿದೆ.

ಇದನ್ನೂ ಓದಿ : ಬಿಎಸ್‌ಎನ್‌ಎಲ್‌ 4ಜಿ : 1 ರೂಪಾಯಿ ರಿಚಾರ್ಜ್‌ 30 ದಿನ ವ್ಯಾಲಿಡಿಟಿ

ಇನ್ನೂ ಸುಲಭವಾಗಿ ಇದನ್ನು ವಿವರಿಸಬೇಕೆಂದರೆ ನೀವು ಗೂಗಲ್​ ಫೋಟೋಗೆ ತೆರಳಿ ನಿಮ್ಮ ಫೋಟೋಗಳನ್ನು ನಿಮ್ಮ ಧ್ವನಿಯ ಮೂಲಕ ಎಡಿಟ್​ ಮಾಡಬೇಕೆಂದು ಬಯಸಿದರೆ Geminiಯು AI ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನೀವು ಬಯಸಿದಂತೆ ಫೋಟೋಗಳನ್ನು ಎಡಿಟ್​ ಮಾಡಲಿದೆ.

ಉದಾಹರಣೆ ನೀವು ಕ್ಲಿಕ್ಕಿಸಿಕೊಂಡ ಫೋಟೋದ ಬ್ಯಾಕ್​ಗ್ರೌಂಡ್​ನಲ್ಲಿ ಜನರು ಅಥವಾ ಗಾಡಿಗಳಿದ್ದರೆ ನೀವು ಅವುಗಳನ್ನು ತೆಗೆದು ಹಾಕು ಎಂದು ಹೇಳಿದರೆ ಸಾಕು Geminiಯು ಆ ಕಾರ್ಯವನ್ನು ಮಾಡಲಿದೆ.ಇದರಿಂದ ನೀವು ಉತ್ತಮ ಬ್ಯಾಕ್​ಗ್ರೌಂಡ್​ಗಳನ್ನು ಹೊಂದಿರುವ ಫೋಟೋವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ : ಗೂಗಲ್‌ ಫಿಕ್ಸೆಲ್‌ ಪ್ರೋ 10 : ಏನಿದು ಹೊಸ ಫೀಚರ್ಸ್‌

ನೀವು ಮ್ಯಾನ್ಯುವಲ್​ ಸೆಟ್ಟಿಂಗ್​ಗಳ ಮೂಲಕ ಈ ಕಾರ್ಯವನ್ನು ಮಾಡುವ ಹರಸಾಹಸವನ್ನು ಪಡಬೇಕಾದ ಅವಶ್ಯಕತೆ ಕೂಡ ಇರುವುದಿಲ್ಲ ಎಂದು ಕಂಪನಿ ತಿಳಿಸಿದೆ.

You can edit photos with your mouth: Google Gemini AI releases new features

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories