FD ಖಾತೆ ತೆರೆಯುವ ಯೋಚನೆಯಲ್ಲಿದ್ದೀರಾ ? ಈ ಬ್ಯಾಂಕ್​ಗಳಲ್ಲಿ ಸಿಗಲಿದೆ ಅತೀ ಹೆಚ್ಚು ಬಡ್ಡಿ

FD account : ಹಣ ಉಳಿತಾಯ ಮಾಡಬೇಕೆಂಬ ಹೆಬ್ಬಯಕೆ ಅನೇಕರಿಗೆ ಇರುತ್ತದೆ. ಆದರೆ ಯಾವ ರೀತಿಯಲ್ಲಿ ಹಣ ಉಳಿತಾಯ ಮಾಡಬೇಕೆಂಬ ಯೋಜನೆ ಅನೇಕರಿಗೆ ತಿಳಿದಿರುವುದಿಲ್ಲ. ಹಣ ಉಳಿತಾಯ ಎಂದಾಕ್ಷಣ ಅನೇಕರು ಸ್ಥಿರ ಠೇವಣಿ ಖಾತೆಗಳನ್ನು ತೆರೆಯುವ ಯೋಚನೆ ಮಾಡುತ್ತಾರೆ.

ನೀವು ಕೂಡ FD ಖಾತೆ ತೆರೆಯುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಮೊದಲು ನೀವು ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ವಿವಿಧ ಬ್ಯಾಂಕುಗಳ ಬಡ್ಡಿದರಗಳ ಬಗ್ಗೆ ಪರಿಶೀಲನೆ ನಡೆಸಬೇಕು.

ಹೆಚ್ಚಿನ ಬ್ಯಾಂಕುಗಳಲ್ಲಿ ಒಂದೇ ಮಾದರಿಯ ಬಡ್ಡಿ ದರ ಇದ್ದರೂ ಕೂಡ 50 ಬೇಸಿಸ್​ ಪಾಯಿಂಟ್​ಗಳ ಕನಿಷ್ಟ ವ್ಯತ್ಯಾಸವು ನಿಮಗೆ ಸಿಗಬಹುದಾದ ಬಡ್ಡಿದರದಲ್ಲಿ ಭಾರಿ ವ್ಯತ್ಯಾಸ ಉಂಟು ಮಾಡಲು ಕಾರಣವಾಗಬಹುದು.

ಉದಾಹರಣೆಗೆ, ₹10 ಲಕ್ಷದ ಅವಧಿ ಠೇವಣಿಯ ಮೇಲೆ ಶೇಕಡಾ 0.5 ರಷ್ಟು ಹೆಚ್ಚುವರಿ ಬಡ್ಡಿಯು ಒಂದು ವರ್ಷದಲ್ಲಿ ₹5,000 ರಷ್ಟು ಹೆಚ್ಚಿನ ಬಡ್ಡಿ (ತೆರಿಗೆಗೆ ಮೊದಲು)ಕ್ಕೆ ಕಾರಣವಾಗುತ್ತದೆ.

ನೀವು ಒಂದು ವರ್ಷಕ್ಕೆ ಸ್ಥಿರ ಠೇವಣಿ ಖಾತೆ ತೆರೆಯಲು ಯೋಚಿಸಿದ್ದರೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿದರ ಪಡೆಯಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ :

ಇದನ್ನೂ ಓದಿ : ಆಧಾರ್‌ ಕಾರ್ಡ್‌ ನಿಮ್ಮ ಬಳಿ ಇದ್ರೆ ಸಿಗುತ್ತೆ 50 ಸಾವಿರ ಸಾಲ

FD account : FD ಖಾತೆಗಳಿಗೆ ಅತೀ ಹೆಚ್ಚು ಬಡ್ಡಿದರ ನೀಡುವಂ ಬ್ಯಾಂಕುಗಳ ವಿವರ :

ಎಚ್​ಡಿಎಫ್​ಸಿ ಬ್ಯಾಂಕ್​ : ಭಾರತ ಖಾಸಗಿ ವಲಯದ ಬ್ಯಾಂಕುಗಳಲ್ಲೇ ಪ್ರಮುಖ ಬ್ಯಾಂಕ್​ ಎನಿಸಿರುವ ಎಚ್​ಡಿಎಫ್​ಸಿ ಬ್ಯಾಂಕ್ ಒಂದು ವರ್ಷದ ಅವಧಿಯ ಸ್ಥಿರ ಠೇವಣಿಗೆ ಶೇಕಡಾ 6.25 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 6.75 ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ದರಗಳು ಜೂನ್ 25, 2025 ರಂದು ಜಾರಿಗೆ ಬಂದಿವೆ.

ಐಸಿಐಸಿಐ ಬ್ಯಾಂಕ್ : ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಒಂದಾಗಿದ್ದು ಸಾಮಾನ್ಯ ಹಾಗೂ ಹಿರಿಯ ನಾಗರಿಕರಿಗೆ ಒಂದು ವರ್ಷದ ಅವಧಿಯ ಸ್ಥಿರ ಠೇವಣಿಗೆ ಕ್ರಮವಾಗಿ ಶೇ. 6.25 ಮತ್ತು ಶೇ. 6.75 ರಷ್ಟು ಬಡ್ಡಿದರವನ್ನು ನೀಡುತ್ತಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಒಂದು ವರ್ಷದ ಅವಧಿಯ ಠೇವಣಿಗಳ ಮೇಲೆ ಕ್ರಮವಾಗಿ ಶೇ. 6.25 ಮತ್ತು ಶೇ. 6.75 ರಷ್ಟು ಬಡ್ಡಿಯನ್ನು ನೀಡುತ್ತದೆ.

ಇದನ್ನೂ ಓದಿ : ಭೂದಾಖಲೆಯ ತಿದ್ದುಪಡಿ ಇನ್ಮುಂದೆ ಬಲು ಸುಲಭ

ಫೆಡರಲ್ ಬ್ಯಾಂಕ್: ಇದು ಕೂಡ ಖಾಸಗಿ ವಲಯದ ಬ್ಯಾಂಕ್ ಆಗಿದ್ದು ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಒಂದು ವರ್ಷದ ಸ್ಥಿರ ಠೇವಣಿಗಳ ಮೇಲೆ ಕ್ರಮವಾಗಿ ಶೇ. 6.40 ಮತ್ತು ಶೇ. 6.90 ಬಡ್ಡಿಯನ್ನು ನೀಡುತ್ತದೆ. ಈ ದರಗಳು ಆಗಸ್ಟ್ 18 ರಿಂದ ಜಾರಿಗೆ ಬಂದಿವೆ.

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ : ಈ ವರ್ಷದ ಜುಲೈ 15ರಂದು ಜಾರಿಗೆ ಬಂದಿರುವ ಬಡ್ಡಿ ದರಗಳ ಪ್ರಕಾರ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಸಾಮಾನ್ಯ ನಾಗರಿಕರಿಗೆ ಶೇ. 6.25 ಮತ್ತು ಹಿರಿಯ ನಾಗರಿಕರಿಗೆ ಶೇ. 6.75 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಆಗಸ್ಟ್​ 20ರಂದು ಜಾರಿಗೆ ಬಂದಿರುವ ದರಗಳ ಪ್ರಕಾರ, ನಿಯಮಿತ ಠೇವಣಿಗೆ ಶೇ. 6.40 ಮತ್ತು ಹಿರಿಯ ನಾಗರಿಕರಿಗೆ ಶೇ. 6.90 ಬಡ್ಡಿದರವನ್ನು ನೀಡುತ್ತಿದೆ.

Are you thinking of opening an FD account These banks will offer the highest interest rates HDFC ICCI SBI UNB FB

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories