ಸೆಪ್ಟೆಂಬರ್ ಮೊದಲ ವಾರಕ್ಕೆ ಮುಂದೂಡಲ್ಪಟ್ಟ SSC CGL ಪರೀಕ್ಷೆ 2025
SSC CGL Exam Date 2025: ಸ್ಟಾಫ್ ಸೆಲೆಕ್ಷನ್ ಕಮೀಷನ್ (SSC) ಆಗಸ್ಟ್ 13 ರಂದು ಪ್ರಾರಂಭವಾಗಬೇಕಿದ್ದ ಕಂಬೈನ್ಡ್ ಗ್ರಾಜುಯೇಟ್ ಲೆವಲ್ (CGL) ಪರೀಕ್ಷೆಯನ್ನು ಸೆಪ್ಟೆಂಬರ್ ಮೊದಲ ವಾರಕ್ಕೆ ಮುಂದೂಡಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ಎಸ್ಎಸ್ಸಿ ಪರೀಕ್ಷೆ ನಡೆಸುತ್ತದೆ. ಈ ಮೊದಲು SSC CGL ಪರೀಕ್ಷೆ 2025 ಅನ್ನು ಆಗಸ್ಟ್ 13 ರಿಂದ ಆಗಸ್ಟ್ 30, 2025 ರ ನಡುವೆ ನಡೆಸಲು ನಿರ್ಧರಿಸಲಾಗಿತ್ತು.
ಆದರೆ ಹೊಸ ಪರೀಕ್ಷಾ ಮಾದರಿಯ ಅನುಷ್ಠಾನ ಮತ್ತು ಆಧಾರ್ ದೃಢೀಕರಣದಂತಹ ಭದ್ರತಾ ಕ್ರಮಗಳು ಸೇರಿದಂತೆ ಆಡಳಿತಾತ್ಮಕ ಕಾರಣಗಳಿಂದಾಗಿ ಪರೀಕ್ಷೆಯನ್ನು ಸೆಪ್ಟೆಂಬರ್ 2025 ರ ಮೊದಲ ವಾರಕ್ಕೆ ಮುಂದೂಡಲಾಗಿದೆ.
SSC CGL ಪರೀಕ್ಷೆ 2025 ರ ಹೊಸ ದಿನಾಂಕಗಳನ್ನು ಆಯೋಗದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರದ ಸಚಿವಾಲಯಗಳು ವಿವಿಧ ಇಲಾಖೆಗಳಲ್ಲಿರುವ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಪ್ರತಿ ವರ್ಷ SSC CGL ಪರೀಕ್ಷೆಯನ್ನು ನಡೆಸುತ್ತದೆ.
ಈ ವರ್ಷ 14,582 ಹುದ್ದೆಗಳಿಗಾಗಿ 28 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈಗ ಎಸ್ಎಸ್ಸಿ ಈ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಟೈಯರ್ – 1 ಪರೀಕ್ಷೆಯನ್ನು ನಿಗದಿಪಡಿಸಿದೆ. ಇದಕ್ಕೆ ಸಂಬಂಧಿಸಿದ ಸಿಟಿ ಇಂಟಿಮೇಷನ್ ಸ್ಲಿಪ್ ಅನ್ನು ನಿಗದಿತ ಪರೀಕ್ಷೆ ದಿನಾಂಕಕ್ಕಿಂತ 7–10 ದಿನಗಳ ಮೊದಲು ಬಿಡುಗಡೆ ಮಾಡಲಾಗುತ್ತದೆ.
ಅದಕ್ಕಾಗಿ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸುತ್ತಿರುವುದು ಅಗತ್ಯವಾಗಿದೆ.
ಇದನ್ನೂ ಓದಿ: ರೈಲ್ವೆ ನೇಮಕಾತಿಯಿಂದ ಶಾರ್ಟ್ ನೋಟಿಫಿಕೇಷನ್ ಪ್ರಕಟ
SSC CGL ಪರೀಕ್ಷಾರ್ಥಿಗಳಿಗೆ ಸಿಟಿ ಸ್ಲಿಪ್ ಏಕೆ ಬೇಕು?
SSC CGL ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಿಟಿ ಸ್ಲಿಪ್ ಬಹಳ ಮುಖ್ಯವಾಗಿದೆ. ಇದು ಪರೀಕ್ಷೆಯ ದಿನಾಂಕ ಮತ್ತು ಸ್ಥಳವನ್ನು ಮುಂಚಿತವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ಇದರಿಂದ ಅಭ್ಯರ್ಥಿಗಳು ತಮ್ಮ ಪ್ರಯಾಣವನ್ನು ಆಯೋಜಿಸಬಹುದಾಗಿದೆ ಮತ್ತು ನಿಗದಿತ ಸಮಯದಲ್ಲಿ ತಲುಪಬಹುದಾಗಿದೆ. ಇದು ಪರೀಕ್ಷೆ ನಡೆಯುವ ಕೇಂದ್ರದ ಬಗ್ಗೆ ಕೊನೆಯ ಕ್ಷಣದಲ್ಲಿ ಉಂಟಾಗುವ ಗೊಂದಲವನ್ನು ತಪ್ಪಿಸುತ್ತದೆ. ಅಭ್ಯರ್ಥಿಗಳ ಮಾನಸಿಕ ಒತ್ತಡ ದೂರಮಾಡಲು ಸಹಾಯ ಮಾಡುತ್ತದೆ.
SSC CGL ಪರೀಕ್ಷೆ ದಿನಾಂಕವನ್ನು ಪರಿಶೀಲಿಸುವುದು ಹೇಗೆ?
- SSCಯ ಅಧಿಕೃತ ವೆಬ್ಸೈಟ್ ssc.gov.in ಗೆ ಭೇಟಿ ನೀಡಬೇಕು.
- ಅಲ್ಲಿ ನಿಮ್ಮ SSC ಡ್ಯಾಶ್ಬೋರ್ಡ್ ತೆರೆಯಲು ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ನೊಂದಿಗೆ ಲಾಗಿನ್ ಮಾಡಿಕೊಳ್ಳಬೇಕು.
- ನಂತರ, “SSC CGL ಪರೀಕ್ಷೆ 2025 ರ ಸಿಟಿ ಇಂಟಿಮೇಷನ್ ಸ್ಲಿಪ್” ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
- ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್/ಜನ್ಮ ದಿನಾಂಕವನ್ನು ನಮೂದಿಸಬೇಕು.
- ಆಗ ಅದು ನಿಮಗೆ ನಿಗದಿಪಡಿಸಿದ ಪರೀಕ್ಷೆ ನಡೆಯುವ ನಗರ, ಪರೀಕ್ಷೆ ದಿನಾಂಕ ಮತ್ತು ಶಿಫ್ಟ್ ಸಮಯವನ್ನು ತೋರಿಸುತ್ತದೆ.
- ಭವಿಷ್ಯದ ಉಲ್ಲೇಖಕ್ಕಾಗಿ ಆ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: PGCIL ನೇಮಕಾತಿ: 1543 ಫೀಲ್ಡ್ ಎಂಜಿನಿಯರ್, ಫೀಲ್ಡ್ ಸೂಪರ್ವೈಸರ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
(SSC CGL Exam Date 2025 postponed check how to download city intimation slip)



