APPSC ಫಾರೆಸ್ಟ್ ಆಫೀಸರ್ ಪರೀಕ್ಷೆ ಹಾಲ್ ಟಿಕೆಟ್ ಡೌನ್ಲೋಡ್ ಮಾಡುವುದು ಹೇಗೆ?
APPSC Exam Hall Ticket 2025: ಆಂಧ್ರ ಪ್ರದೇಶ ಲೋಕ ಸೇವಾ ಆಯೋಗವು (APPSC) ಫಾರೆಸ್ಟ್ ಬೀಟ್ ಆಫೀಸರ್ (FBO) ಮತ್ತು ಅಸಿಸ್ಟಂಟ್ ಬೀಟ್ ಆಫೀಸರ್ (ABO) ಹುದ್ದೆಗಳಿಗೆ ಸೆಪ್ಟೆಂಬರ್ 7 ರಂದು ಪರೀಕ್ಷೆಯನ್ನು ನಿಗದಿಪಡಿಸಿದೆ.
ಈಗ ಈ ಪರೀಕ್ಷೆಗಳಿಗೆ ಅಧಿಕೃತವಾಗಿ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯು ಅಧಿಸೂಚನೆ ಸಂಖ್ಯೆ 06/2025 ರ ಅಡಿಯಲ್ಲ 650ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ.
ಸರಿಯಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆಂಧ್ರ ಪ್ರದೇಶ ಲೋಕ ಸೇವಾ ಆಯೋಗ(APPSC) ದ ಅಧಿಕೃತ ವೆಬ್ಸೈಟ್ನಿಂದ ತಮ್ಮ ಹಾಲ್ ಟಿಕೇಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಪರೀಕ್ಷೆಗೆ ಹಾಜಾರಾಗಲು ಅಭ್ಯರ್ಥಿಗಳಿಗೆ ಪ್ರವೇಶ ಪತ್ರವು ಕಡ್ಡಾಯವಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳು ಹಾಲ್ ಟಿಕೆಟ್ ನಲ್ಲಿ ನಮೂದಿಸಲಾದ ಎಲ್ಲಾ ಮಾಹಿತಿ ಮತ್ತು ಸೂಚನೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲು ಸೂಚಿಸಲಾಗಿದೆ.
ಹಾಲ್ ಟಿಕೇಟ್ ನಲ್ಲಿ ಏನೇನು ಪರಿಶೀಲಿಸಬೇಕು?
ಆಂಧ್ರ ಪ್ರದೇಶ ಲೋಕ ಸೇವಾ ಆಯೋಗ(APPSC) ವು ಫಾರೆಸ್ಟ್ ಬೀಟ್ ಆಫೀಸರ್ (FBO) ಮತ್ತು ಅಸಿಸ್ಟಂಟ್ ಬೀಟ್ ಆಫೀಸರ್ (ABO) ಹುದ್ದೆಗಳಿಗೆ ನಡೆಸುವ ಪರೀಕ್ಷೆಯ ಹಾಲ್ ಟಿಕೆಟ್ ಅನ್ನು ಬಿಡುಗಡೆ ಮಾಡಿದೆ. ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಿಕೊಂಡ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ಸರಿಯಾಗಿ ಪರಿಶೀಲಿಸಬೇಕು.
– ಅಭ್ಯರ್ಥಿಯ ಹೆಸರು
– ಅಭ್ಯರ್ಥಿಯ ಭಾವಚಿತ್ರ
– ಪರೀಕ್ಷೆಯ ದಿನಾಂಕ ಮತ್ತು ಸಮಯ
– ಪರೀಕ್ಷೆ ನಡೆಯುವ ಸ್ಥಳದ ವಿಳಾಸ
– ವರದಿ ಮಾಡುವ ಸಮಯ
ಪ್ರಮುಖ ಸೂಚನೆಗಳೇನು?
– ಮೊದಲಿಗೆ ಹಾಲ್ ಟಿಕೆಟ್ನಲ್ಲಿರುವ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
– ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪತ್ರದ ಜೊತೆಗೆ ಮಾನ್ಯವಾದ ಫೋಟೋ ಐಡಿ (ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ)ಯನ್ನು ತೆಗೆದುಕೊಂಡು ಹೋಗಿ.
– ಕೊನೆಯ ಕ್ಷಣದಲ್ಲಿ ಉಂಟಾಗಬಹುದಾದ ಗೊಂದಲವನ್ನು ತಪ್ಪಿಸಲು ನಿಗದಿತ ಸಮಯಕ್ಕಿಂತ ಮೊದಲೇ ಪರೀಕ್ಷಾ ಕೇಂದ್ರದಲ್ಲಿರಿ.
– ಪ್ರವೇಶ ಪತ್ರದಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ.
ಇದನ್ನೂ ಓದಿ: ಸೆಪ್ಟೆಂಬರ್ ಮೊದಲ ವಾರಕ್ಕೆ ಮುಂದೂಡಲ್ಪಟ್ಟ SSC CGL ಪರೀಕ್ಷೆ 2025
APPSC Forest Beat Officer Hall Ticket 2025: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ?
– ಮೊದಲಿಗೆ ಆಂಧ್ರ ಪ್ರದೇಶ ಲೋಕ ಸೇವಾ ಆಯೋಗ(APPSC)ದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
– ಮುಖಪುಟದಲ್ಲಿರುವ ಅಡ್ಮಿಟ್ ಕಾರ್ಡ್/ಹಾಲ್ ಟಿಕೆಟ್ ವಿಭಾಗಕ್ಕೆ ಹೋಗಿ.
– ಅಲ್ಲಿ ಫಾರೆಸ್ಟ್ ಬೀಟ್ ಆಫೀಸರ್ (FBO) ಮತ್ತು ಅಸಿಸ್ಟಂಟ್ ಬೀಟ್ ಆಫೀಸರ್ (ABO) ಪರೀಕ್ಷೆ 2025ರ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿ ಎಂಬುದರ ಮೇಲೆ ಕ್ಲಿಕ್ಕಿಸಿ.
– ನಿಮ್ಮ ನೋಂದಣಿ ಸಂಖ್ಯೆ, ಒಟಿಪಿಆರ್ ಐಡಿ ಮತ್ತು ಪಾಸ್ವರ್ಡ್ ಮತ್ತು ಸರಿಯಾದ ಕ್ಯಾಪ್ಚಾವನ್ನು ನಮೂದಿಸಿ ಲಾಗಿನ್ ಆಗಿ.
– ಈಗ ಪರದೆಯ ಮೇಲೆ ಬರುವ ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ಅದರ ಪ್ರಿಂಟ್ಔಟ್ ತೆಗೆದುಕೊಳ್ಳಿ.
ಇದನ್ನೂ ಓದಿ: PGCIL ನೇಮಕಾತಿ: 1543 ಫೀಲ್ಡ್ ಎಂಜಿನಿಯರ್, ಫೀಲ್ಡ್ ಸೂಪರ್ವೈಸರ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
(APPSC Exam Hall Ticket 2025 how to download and important things)



