Viral News: ಮದುವೆಗೆ ಬೀದಿ ನಾಯಿಗಳನ್ನು ಆಹ್ವಾನಿಸಿದ ವರ

Viral News: ಸಾಮಾನ್ಯವಾಗಿ ಮದುವೆಗೆ ವಧುವರನ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸುವುದನ್ನು ನಾವು ಕೇಳಿರುತ್ತೇವೆ. ಆದರೆ ಇತ್ತೀಚೆಗೆ ವರನೊಬ್ಬ ತನ್ನ ಮದುವೆಗೆ ಬೀದಿ ನಾಯಿಗಳ ಗುಂಪನ್ನು ಆಹ್ವಾನಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಎಲ್ಲರ ಗಮನ ಸೆಳೆದು ವೈರಲ್ ಆಗಿದೆ. ಈ ಅಸಾಮಾನ್ಯ ಮತ್ತು  ಹೃದಯಸ್ಪರ್ಶಿ ದೃಶ್ಯವನ್ನು ಕಂಡು ಅನೇಕ  ವೀಕ್ಷಕರು ಮೂಕವಿಸ್ಮಯರಾಗಿದ್ದಾರೆ.

ವೈರಲ್ ಆದ  ವಿಡಿಯೊದಲ್ಲಿ, ಮದುವೆಯ ವೇದಿಕೆಯ ಮೇಲೆ  ವರನು ತನ್ನ ವಧುವಿನ ಪಕ್ಕದಲ್ಲಿ ನಿಂತಿದ್ದು,  ಕುಟುಂಬಸ್ಥರು ಮತ್ತು ಸ್ನೇಹಿತರು ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ. ಆದರೆ ಮದುವೆಯ ಫೋಟೋಶೂಟ್ ಸಮಯದಲ್ಲಿ  ಆಶ್ಚರ್ಯಕಾರಿ ಘಟನೆಯೊಂದು ನಡೆದಿದೆ. ಅದೇನೆಂದರೆ  ಬೀದಿ ನಾಯಿಗಳ ಗುಂಪು ಕೂಡ ಅವರೊಂದಿಗೆ ಸೇರಿಕೊಂಡಿದ್ದಲ್ಲದೇ , ಎಲ್ಲರೊಂದಿಗೂ ತಾಳ್ಮೆಯಿಂದ ಕುಳಿತು ಫೋಟೋಗಳಿಗೆ ಪೋಸ್ ನೀಡಿದ್ದವು.

ಬೀದಿ ನಾಯಿಗಳನ್ನು ಮದುವೆ ಅತಿಥಿಗಳಂತೆ ಆಹ್ವಾನಿಸಿದ  ದೃಶ್ಯವು ಅನೇಕ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ ಮತ್ತು ಅದಕ್ಕೆ ಅನೇಕರು ಪ್ರತಿಕ್ರಿಯೆಗಳ ಸುರಿಮಳೆಗೈದಿದ್ದಾರೆ.

ಒಬ್ಬ ನೆಟ್ಟಿಗರು, “ವಾವ್, ಅದು ನಿಜವಾಗಿಯೂ ಸೃಜನಶೀಲವಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದನ್ನು “ಎಂತಹ ಸುಂದರವಾದ ಗೆಸ್ಚರ್” ಎಂದು ಕರೆದಿದ್ದಾರೆ. “ಅದ್ಭುತವಾಗಿ ಆಶೀರ್ವಾದಿಸಲ್ಪಟ್ಟ ಮದುವೆ” ಎಂದು ಯಾರೋ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿ ತಮಾಷೆಯಾಗಿ, ” ದೋಗೇಶ್ ಗ್ಯಾಂಗ್ನಲ್ಲಿ ಸಂತೋಷದ ಅಲೆ,” ಎಂದು ಹೇಳಿದರೆ, ಇನ್ನೊಬ್ಬರು “ದೋಗೇಶ್ ಭಾಯ್ ಮತ್ತು ಅವರ ಗ್ಯಾಂಗ್” ಎಂದು ಸರಳವಾಗಿ ಬರೆದಿದ್ದಾರೆ.

ದಂಪತಿಗಳು ಈ ರೀತಿ  ಪ್ರಾಣಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ ತಮ್ಮ ವಿವಾಹಗಳನ್ನು ಆಚರಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ, ಒಡಿಶಾದ ದಂಪತಿ ಇಂಡಿಪೆಂಡೆಂಟ್  ಫಿಲ್ಮ ಮೇಕರ್ ಯುರೇಕಾ ಆಪ್ಟಾ ಮತ್ತು ಅವರ ಪತ್ನಿ ದಂತವೈದ್ಯೆ ಜೊವಾನಾ – ತಮ್ಮ ವಿಶೇಷ ದಿನವನ್ನು ಇಂತಹ ಉದಾತ್ತ ಉದ್ದೇಶಕ್ಕಾಗಿ ಮೀಸಲಿಟ್ಟರು. ತಮ್ಮ ಮದುವೆಗೆ ಎರಡು ದಿನಗಳ ಮೊದಲು, ದಂಪತಿ ಸ್ಥಳೀಯ ಪ್ರಾಣಿ ರಕ್ಷಣಾ ಸಂಸ್ಥೆಯಾದ ಅನಿಮಲ್ ವೆಲ್ಫೇರ್ ಟ್ರಸ್ಟ್ ಎಕಮ್ರಾ (AWTE) ಗೆ ಭೇಟಿ ನೀಡಿ ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಆಹಾರ ಮತ್ತು ಔಷಧಿಗಳನ್ನು ದಾನ ಮಾಡಿದರು.

ಅವರ ಮದುವೆಯ ದಿನದಂದು, ಟ್ರಸ್ಟ್ ದಂಪತಿ ನೀಡಿದ ದೇಣಿಗೆಗಳನ್ನು ಬಳಸಿಕೊಂಡು ಸುಮಾರು 500 ಬೀದಿ ನಾಯಿಗಳಿಗೆ ಆಹಾರವನ್ನು ನೀಡಿತು. ಈ ಸಮಾರಂಭವು ಟ್ಯಾಂಗಿ ಬಳಿಯ ನುಗಾಂವ್ನಲ್ಲಿರುವ ಒಂದು ಸಣ್ಣ ಹಳ್ಳಿಯ ದೇವಾಲಯದಲ್ಲಿ ನಡೆಯಿತು. ದಂಪತಿ ಕೊಡುಗೆಗಳ ಜೊತೆಗೆ, AWTE ಬೀದಿ ನಾಯಿಗಳಿಗೆ ಅನ್ನ ಮತ್ತು ಮಾಂಸಾಹಾರಿ ಆಹಾರವನ್ನು ಸಹ ಒದಗಿಸಿತು. ಈ ಉತ್ತಮ ಕಾರ್ಯವು ಪ್ರಾಣಿಗಳ ಮೇಲಿನ ನಿಜವಾದ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಮದುವೆಯನ್ನು ಕುಟುಂಬ ಮತ್ತು ಸ್ನೇಹಿತರು ಮಾತ್ರವಲ್ಲದೆ ನೂರಾರು ನಾಯಿಗಳೊಂದಿಗೆ  ಆಚರಿಸುವ ಕಾರ್ಯಕ್ರಮವಾಗಿ ಪರಿವರ್ತಿಸಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories