Mental Peace: ಹಲವು ದಶಕಗಳಿಂದ, ಸರ್ಕಾರಿ ಉದ್ಯೋಗಗಳನ್ನು ಭದ್ರತೆ ಮತ್ತು ಪ್ರತಿಷ್ಠೆಯ ಕೆಲಸವೆಂದು ಪರಿಗಣಿಸಲಾಗಿದೆ. ಹಾಗಾಗಿ ಅನೇಕ ಜನರು ಓದಿ ಸರ್ಕಾರಿ ಕೆಲಸ ಪಡೆಯಬೇಕೆಂದು ಹರಸಾಹಸ ಮಾಡುತ್ತಾರೆ. ಹೀಗಿರುವಾಗ ಇಲ್ಲೊಬ್ಬ 29 ವರ್ಷದ ಮಹಿಳೆ ಮಾನಸಿಕ ನೆಮ್ಮಿದಿಗಾಗಿ ತನಗೆ ಸಿಕ್ಕ ಸರ್ಕಾರಿ ಬ್ಯಾಂಕ್ ಕೆಲಸಕ್ಕೆ ರಿಸೈನ್ ಮಾಡಿದ್ದಾಳೆ. ಈ ವಿಚಾರವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿ ನೆಟ್ಟಿಗರು ಆಶ್ಚರ್ಯಗೊಳ್ಳಿಸಿದೆ.
ಹೌದು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿರುವ 29 ವರ್ಷದ ವಾಣಿಗೆ ವಾಸ್ತವವು ತುಂಬಾ ಭಿನ್ನವಾಗಿತ್ತು. ತನ್ನ ಕೆಲಸದ ಒತ್ತಡ ತನ್ನ ಮಾನಸಿಕ ಶಾಂತಿಯನ್ನು ಬಲಿ ತೆಗೆದುಕೊಂಡಿದೆ ಎಂದು ಅವಳು ಸೋಶಿಯಲ್ ಮಿಡಿಯಾದಲ್ಲಿ ಬಹಿರಂಗಪಡಿಸಿದ್ದಾಳೆ. 2022 ರಲ್ಲಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಂದು ವರ್ಷ ತರಬೇತಿ ಪಡೆದು ಮೀರತ್ನಲ್ಲಿ ಸ್ಕೇಲ್-I ಅಧಿಕಾರಿಯಾಗಿ ನೇಮಕಗೊಂಡ ವಾಣಿಗೆ ಈ ಕೆಲಸವು ತಂಬಾ ಒತ್ತಡದಿಂದ ಕೂಡಿದ್ದರಿಂದ ಅತೃಪ್ತಳನಾಗಿಸಿದೆ. ಈ ಕೆಲಸವು ಅವಳ ಜೀವನ ಮಟ್ಟವನ್ನು ಸುಧಾರಿಸಿದರೂ, ಅವಳ ಮನಸ್ಸು ಎಂದಿಗೂ ನಿರಾಳವಾಗಲಿಲ್ಲವಂತೆ.
ಇದು ಮಾನಸಿಕವಾಗಿ ಒತ್ತಡ ಹೇರುವ ಮತ್ತು ಕೃತಜ್ಞತೆಯಿಲ್ಲದ ಕೆಲಸ ಎಂದು ಆಕೆ ವೈರಲ್ ವಿಡಿಯೊದಲ್ಲಿ ವಿವರಿಸಿದ್ದಾಳೆ. ಹಾಗಾಗಿ ವೇತನಕ್ಕಿಂತ ಶಾಂತಿಗೆ ಆದ್ಯತೆ ನೀಡುವ ನಿರ್ಧಾರ ಮಾಡಿ ಒಂದು ಹೆಜ್ಜೆ ಮುಂದೆ ಇಟ್ಟ ವಾಣಿ, ಆ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ. ನೀವು ಜೀವನದಲ್ಲಿ ಪಡೆಯುವ ಸಂತೋಷ ಮತ್ತು ಮಾನಸಿಕ ಶಾಂತಿಯು ನೀವು ಹೊಂದಿರಬಹುದಾದ ಯಾವುದೇ ಕೆಲಸಕ್ಕಿಂತ ಶ್ರೇಷ್ಠವಾಗಿದೆ ಎಂದು ಅವಳು ತಿಳಿಸಿದ್ದಾಳೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದುವರೆಗೆ 5.3 ಮಿಲಿಯನ್ ವ್ಯೂವ್ಸ್ ಮತ್ತು 129 ಸಾವಿರ ಲೈಕ್ಗಳನ್ನು ಗಳಿಸಿದೆ. ಇದಕ್ಕೆ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬರು “ಹೊಸ ಆರಂಭಗಳಿಗೆ ಚಿಯರ್ಸ್” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಇತ್ತೀಚಿನ ದಿನಗಳಲ್ಲಿ, ಎಲ್ಲರೂ ಪ್ರಯಾಣ ವ್ಲಾಗ್ಗರ್ ಆಗಲು ತಮ್ಮ ಕೆಲಸಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ” ಎಂದು ಬರೆದಿದ್ದಾರೆ. ಮೂರನೇಯವರು, “ಈ ಅತ್ಯಂತ ಸ್ಪರ್ಧಾತ್ಮಕ ಯುಗದಲ್ಲಿ ನೀವು ಮಾಡಿದ್ದನ್ನು ಮಾಡಲು ಧೈರ್ಯ ಬೇಕು. ಹೊಸ ಆರಂಭಕ್ಕೆ ಅಭಿನಂದನೆಗಳು” ಎಂದು ಹೇಳಿದರು. ಮತ್ತೊಬ್ಬರು, “ನಾವು ಸರ್ಕಾರಿ ಕೆಲಸಕ್ಕಾಗಿ ಕಷ್ಟಪಡುತ್ತಿದ್ದೇವೆ, ಮತ್ತು ಇಲ್ಲಿ ನೀವು ಪಡೆದ ಕೆಲಸವನ್ನು ಬಿಡುತ್ತಿದ್ದೀರಿ. ನಾಣ್ಣುಡಿಯಂತೆ, ಅದನ್ನು ಕಷ್ಟಪಟ್ಟು ಪಡೆದವರು ಅದನ್ನು ಗೌರವಿಸುತ್ತಾರೆ” ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಮದುವೆಗೆ ಬೀದಿ ನಾಯಿಗಳನ್ನು ಆಹ್ವಾನಿಸಿದ ವರ



