ನಾಳೆ ಚಂದ್ರ ಗ್ರಹಣ: ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?
Lunar Eclipse 2025: ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳೆರಡೂ ಬಾನಂಗಳದಲ್ಲಿ ನಡೆಯುವ ಕೌತುಕಗಳು. ಇದೇ ಸ್ಟೆಪ್ಟೆಂಬರ್ 7 ರಂದು ಆಗಸದಲ್ಲಿ ಈ ವರ್ಷದ ಎರಡನೇಯ ಹಾಗೂ ಕೊನೆಯ ಚಂದ್ರ ಗ್ರಹಣ ನಡೆಯಲಿದೆ.
ಭಾದ್ರಪದ ಮಾಸದ ಹುಣ್ಣಿಮೆ ತಿಥಿಯಂದು ಈ ವಿದ್ಯಮಾನ ಜರುಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವನ್ನು ಅತ್ಯಂತ ಸೂಕ್ಷ್ಮ ಸಮಯ ಎಂದು ಹೇಳಲಾಗುತ್ತದೆ.
ಈ ಸಮಯದಲ್ಲಿ ಕೆಲವು ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಅದರ ಜೊತೆಗೆ ಕೆಲವು ಆಚರಣೆಗಳನ್ನು ನಿಷೇಧಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವು ಕೆಲವು ರಾಶಿಯವರಿಗೆ ಒಳ್ಳೆಯದನ್ನು ಮಾಡಿದರೆ ಇನ್ನು ಕೆಲವು ರಾಶಿಯವರಿಗೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಅದಕ್ಕೆ ಶಾಸ್ತ್ರದಲ್ಲಿ ಪರಿಹಾರಗಳನ್ನು ಸಹ ಸೂಚಿಸಲಾಗಿದೆ.
ಈ ಗ್ರಹಣದ ಸಮಯದಲ್ಲಿ ಏನು ಮಾಡಬೇಕು? ದೋಷ ಪರಿಹಾರ ಹೇಗೆ ಎಂದು ತಿಳಿದುಕೊಳ್ಳೋಣ.
ಗ್ರಹಣ ಪ್ರಾರಂಭ ಮತ್ತು ಅಂತ್ಯ
ಈ ವರ್ಷದ 2ನೇ ಚಂದ್ರ ಗ್ರಹಣವು ಸೆಪ್ಟೆಂಬರ್ 7ರಂದು ಜರುಗಲಿದೆ. ಚಂದ್ರ ಗ್ರಹಣವು ಸೆಪ್ಟೆಂಬರ್ 7 ರ ರಾತ್ರಿ 9:58ಕ್ಕೆ ಪ್ರಾರಂಭವಾಗಿ ರಾತ್ರಿ 1:28 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಗ್ರಹಣದ ಆರಂಭ ಮತ್ತು ಮೋಕ್ಷಕಾಲದಲ್ಲಿ ಭಗವಂತನನ್ನು ಸ್ಮರಿಸುವುದರಿಂದ ಎಲ್ಲ ದೋಷಗಳು ನಾಶವಾಗುತ್ತವೆ. ಜ್ಯೋತಿಷ್ಯದ ಪ್ರಕಾರ ಚಂದ್ರ ಗ್ರಹಣದ ಸೂತಕವು ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ. ಸೂತಕದ ಆರಂಭದಿಂದ ಗ್ರಹಣದ ಅಂತ್ಯದವರೆಗೆ, ಆಹಾರವನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ. ಗ್ರಹಣದ ಸಮಯದಲ್ಲಿ ಯಾವುದೇ ಮಂತ್ರ ಮತ್ತು ಗುರು ಮಂತ್ರವನ್ನು ಪಠಿಸುವುದರಿಂದ ಸಿದ್ಧಿ ಪ್ರಾಪ್ತಿಯಾಗುತ್ತದೆ ಮತ್ತು ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ಇದನ್ನೂ ಓದಿ: ಸ್ಯಾಮ್‌ಸಂಗ್‌ನ ಅತ್ಯಂತ ಅಗ್ಗದ ಫೋನ್ ಗ್ಯಾಲಕ್ಸಿ S25 FE ಬಿಡುಗಡೆ: 4 ಕ್ಯಾಮೆರಾ, AI ತಂತ್ರಜ್ಞಾನ ಇದರೆ ವೈಶಿಷ್ಟ್ಯ
ಚಂದ್ರ ಗ್ರಹಣದಂದು ಯಾವ ರಾಶಿಯವರು ಏನು ದಾನ ಮಾಡಬೇಕು?
ಗ್ರಹಣದ ಸಮಯವು ಕೆಲವು ರಾಶಿಯವರ ಮೇಲೆ ದೋಷದ ಪರಿಣಾಮವನ್ನುಂಟು ಮಾಡುತ್ತದೆ.
ಮೇಷ ರಾಶಿ: ಈ ಚಂದ್ರಗ್ರಹಣದಿಂದ ಮೇಷ ರಾಶಿಯವರಿಗೆ ಲಾಭವಾಗುತ್ತದೆ. ಮೇಷ ರಾಶಿಯವರು ಕೆಂಪು ಬೇಳೆಯನ್ನು ದಾನ ಮಾಡಬೇಕು, ಇದಲ್ಲದೆ, ಬಿಳಿ ವಸ್ತುಗಳನ್ನು ದಾನ ಮಾಡುವುದರಿಂದಲೂ ಪ್ರಯೋಜನ ಪಡೆದುಕೊಳ್ಳುತ್ತಾರೆ.
ವೃಷಭ ರಾಶಿ: ವೃಷಭ ರಾಶಿಯವರು ಜೀವನದಲ್ಲಿ ಸಂತೋಷವನ್ನು ಪಡೆಯುತ್ತಾರೆ. ವೃಷಭ ರಾಶಿಯವರು ಹಾಲು, ಮೊಸರು ಅಥವಾ ಅಕ್ಕಿಯಂತಹ ಬಿಳಿ ವಸ್ತುಗಳನ್ನು ದಾನ ಮಾಡಬೇಕು.
ಮಿಥುನ ರಾಶಿ: ಮಿಥುನ ರಾಶಿಯವರು ಹಸಿರು ಬಟ್ಟೆ ಮತ್ತು ಹಣ್ಣುಗಳನ್ನು ದಾನ ಮಾಡಬೇಕು.
ಕಟಕ ರಾಶಿ: ಕಟಕ ರಾಶಿಯವರು ಸಕ್ಕರೆ ಮಿಠಾಯಿ ಮತ್ತು ಹಾಲು ದಾನ ಮಾಡಬೇಕು.
ಸಿಂಹ ರಾಶಿ: ಸಿಂಹ ರಾಶಿಯವರು ಬೆಲ್ಲವನ್ನು ದಾನ ಮಾಡಬೇಕು.
ಕನ್ಯಾ ರಾಶಿ: ಕನ್ಯಾ ರಾಶಿಯವರು ಶುಭವನ್ನು ಪಡೆಯುತ್ತಾರೆ. ಕನ್ಯಾ ರಾಶಿಯವರು ಹೆಸರುಕಾಳನ್ನು ದಾನ ಮಾಡಬೇಕು.
ತುಲಾ ರಾಶಿ: ತುಲಾ ರಾಶಿಯವರು ಹಾಲು, ಅಕ್ಕಿ ಮತ್ತು ತುಪ್ಪವನ್ನು ದಾನ ಮಾಡಬೇಕು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಕೆಂಪು ವಸ್ತುಗಳನ್ನು ದಾನ ಮಾಡಬೇಕು.
ಮಕರ ರಾಶಿ: ಮಕರ ರಾಶಿಯವರು ಕಪ್ಪು ಎಳ್ಳನ್ನು ದಾನ ಮಾಡಬೇಕು.
ಕುಂಭ ರಾಶಿ: ಕುಂಭ ರಾಶಿಯವರು ಕಪ್ಪು ಎಳ್ಳು ಮತ್ತು ಎಣ್ಣೆಯನ್ನು ದಾನ ಮಾಡಬೇಕು.
ಮೀನ ರಾಶಿ: ಮೀನ ರಾಶಿಯವರು ಅರಿಶಿಣವನ್ನು ದಾನ ಮಾಡಬೇಕು.
ಇದನ್ನೂ ಓದಿ: Gruhalaskhmi : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್
(When is Lunar Eclipse 2025 know the time date dos and dnots)



