Viral News: ಸಂಸಾರದೊಳಗಿನ ಜಗಳ ನಾಲ್ಕು ಗೋಡೆಗಳ ಮಧ್ಯದಲ್ಲಿ ಇರಬೇಕು, ಅದು ಬೀದಿಗೆ ಬರಬಾರದು ಎನ್ನುತ್ತಾರೆ. ಆದರೆ ಉತ್ತರ ಪ್ರದೇಶದ ಒಂದು ಕುಟುಂಬದೊಳಗಿನ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಿಲಿಭಿತ್ನ ಪುರನ್ಪುರ ಪ್ರದೇಶಕ್ಕೆ ಸೇರಿದ ಕುಟುಂಬದಲ್ಲಿ, ಸಂಗೀತಾ ಎಂಬ ವಿವಾಹಿತ ಮಹಿಳೆ ತನ್ನ ಪತಿ ಸಮೋಸಾ ತಂದು ಕೊಡಲಿಲ್ಲ ಎಂಬ ಕಾರಣ ಕೋಪಗೊಂಡು ತನ್ನ ಪತಿ ಹಾಗೂ ಮಾವನಿಗೆ ಹೊಡೆದಿದ್ದಾಳೆ.
ಆಕೆ ಸಮೋಸಾ ತಿನ್ನುವ ಬಯಕೆಯ ಬಗ್ಗೆ ಬಹಿರಂಗಪಡಿಸಿದ ನಂತರ ಒಂದು ವಿಚಿತ್ರ ಪರಿಸ್ಥಿತಿ ಎದುರಾಗಿದೆ. ಗರಿಗರಿಯಾದ, ಕರಿದ ತಿಂಡಿಗಾಗಿ ಜನರು ಯಾವ ಮಟ್ಟಕ್ಕೆ ಹೋಗಬಹುದು? ಎಂಬುದನ್ನು ಈ ವಿಡಿಯೊ ತಿಳಿಸಿದೆ.
ಈ ಘಟನೆ ದಂಪತಿಯ ನಡುವಿನ ಸಣ್ಣ ಸಮಸ್ಯೆಯಾಗಿದ್ದರೂ ಅದು ದೊಡ್ಡ ತಿರುವು ಪಡೆದುಕೊಂಡಿತು. ಮಹಿಳೆಯ ಬೇಡಿಕೆಯ ಹೊರತಾಗಿಯೂ, ಆಕೆಯ ಪತಿ ಶಿವಂ ಆಗಸ್ಟ್ 30 ರಂದು ಸಮೋಸಾ ಇಲ್ಲದೆ ಮನೆಗೆ ಮರಳಿದರು.
ಇದು ಅವರ ನಡುವೆ ಜಗಳಕ್ಕೆ ಕಾರಣವಾಯಿತು. ತೀವ್ರವಾದ ಜಗಳ ಎಂದಿಗೂ ಮುಗಿಯಲ್ಲ ಎಂದು ತೋರಿದಾಗ, ಪತ್ನಿ ತನ್ನ ಪೋಷಕರಾದ ಉಷಾ ಮತ್ತು ರಾಮ್ಲದತೆ ಅವರನ್ನು ತನ್ನ ಮನೆಗೆ ಕರೆಸಿದಳು.
ಆದರೆ ಅವರು ಅವರನ್ನೂ ಸಮಾಧಾನಗೊಳಿಸಲಿಲ್ಲ, ಹಾಗಾಗಿ ಜಗಳ ಹೆಚ್ಚಾಗಿ ಸಂಗೀತಾ ತನ್ನ ಪೋಷಕರೊಂದಿಗೆ ಶಿವಂ ಮತ್ತು ಅವಳ ಮಾವ ವಿಜಯ್ ಕುಮಾರ್ ಅವರನ್ನು ನಿಂದಿಸಿ ಹೊಡೆದಿದ್ದಾಳೆ ಎಂದು ಆರೋಪಿಸಲಾಗಿದೆ.
ಪಿಲಿಭಿತ್ ಜಿಲ್ಲೆಯ ಭಗವಂತಪುರದ ಆನಂದಪುರ ಗ್ರಾಮದ ನಿವಾಸಿ ವಿಜಯ್ ಕುಮಾರ್ ಅವರು ಮರುದಿನ ಈ ಪ್ರಕರಣವನ್ನು ಪಂಚಾಯತ್ಗೆ ಕೊಂಡೊಯ್ದರು. ಆಗಸ್ಟ್ 31 ರಂದು, ಮಾಜಿ ಗ್ರಾಮದ ಮುಖ್ಯಸ್ಥ ಅವಧೇಶ್ ಶರ್ಮಾ ಅವರ ಸಮ್ಮುಖದಲ್ಲಿ ಪರಿಸ್ಥಿತಿಯನ್ನು ಚರ್ಚಿಸಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪಂಚಾಯತ್ ನಡೆಸಲಾಯಿತು.
ಶುರುವಿನಲ್ಲಿ, ವಿಷಯವು ಇತ್ಯರ್ಥವಾಗುವಂತೆ ತೋರುತ್ತಿತ್ತು. ಆದರೆ ಪರಿಸ್ಥಿತಿ ಬದಲಾಯಿತು ಮತ್ತು ವಿಷಯವು ಬಗೆಹರಿಯದೆ ಉಳಿಯಿತು. ಮತ್ತೊಮ್ಮೆ, ಸೊಸೆ, ಆಕೆಯ ತಾಯಿ, ತಂದೆ ಮತ್ತು ತಾಯಿಯ ಚಿಕ್ಕಪ್ಪ ರಾಮತೋಟರ್ ಶಿವಂ ಮೇಲೆ ಹಲ್ಲೆ ನಡೆಸಿದರು.
ಶಿವಂನನ್ನು ರಕ್ಷಿಸಲು ವಿಜಯ್ ಹೋದಾಗ, ಅವರನ್ನು ಮತ್ತು ಅವರ ಮಗನನ್ನು ಅಲ್ಲಿ ಕ್ರೂರವಾಗಿ ಥಳಿಸಲಾಯಿತು. ಕೊನೆಗೆ ವಿಜಯ್ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಅಮ್ಮನ ಸೀರೆಯನ್ನೇ ಧೋತಿ ಮಾಡಿಕೊಂಡ ಮಗ; ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ!
ದಂಪತಿಗಳ ನಡುವಿನ ಅನೇಕ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡ ವಾದಗಳಾಗಿ ಬದಲಾಗುವುದು ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚಿನ ಗಮನ ಸೆಳೆಯುತ್ತದೆ. ಕೆಲವು ತಿಂಗಳ ಹಿಂದೆ, ಸಾರ್ವಜನಿಕ ಸ್ಥಳದಲ್ಲಿ ನಡೆದ ತೀವ್ರ ವಾದದ ಸಮಯದಲ್ಲಿ, ವಿವಾಹಿತ ಮಹಿಳೆಯೊಬ್ಬಳು ಪತಿಯ ದೇಹದ ಭಾಗಗಳನ್ನು ಕತ್ತರಿಸಿ ಡ್ರಮ್ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದು, ಅದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.



