ಜಿಎಸ್ಟಿ ದರ ಕಡಿತ : ಟಾಟಾ ಕಾರು ಖರೀದಿಸುವವರಿಗೆ ಗುಡ್ ನ್ಯೂಸ್!
Tata Cars After GST: ಇತ್ತೀಚೆಗೆ ಜಾರಿಗೆ ಬಂದ ಜಿಎಸ್ಟಿ ದರ ಕಡಿತದ ಬದಲಾವಣೆಗೆ ಅನುಗುಣವಾಗಿ ಟಾಟಾ ಮೋಟಾರ್ಸ್ ತನ್ನ ಎಲ್ಲಾ ಪ್ರಯಾಣಿಕ ವಾಹನಗಳ ಬೆಲೆಯನ್ನು ಕಡಿತಗೊಳಿಸಿದೆ. ಹೊಸ ದರವು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿದೆ.
ಈ ಕಡಿತದ ಪ್ರಯೋಜನಗಳನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ವಾಹನ ತಯಾರಕರು ಬದ್ಧರಾಗಿದ್ದಾರೆ. ಇದರಿಂದ ಕೈಗೆಟಕುವ ದರದಲ್ಲಿ ಟಾಟಾದ ಜನಪ್ರಿಯ ಕಾರುಗಳನ್ನು ಖರೀದಿಸಬಹುದಾಗಿದೆ.
ಬೆಲೆ ಹೊಂದಾಣಿಕೆಯು ವಾಹನದ ಮಾದರಿ ಮತ್ತು ರೂಪಾಂತರಕ್ಕೆ ಅನುಗುಣವಾಗಿ ಬದಲಾಗುತ್ತದೆ. ಸುಮಾರು 65,000 ರೂ. ದಿಂದ 1,55 ಲಕ್ಷ ರೂ.ಗಳ ವರೆಗೆ ದರದಲ್ಲಿ ಬದಲಾವಣೆ ಕಾಣಬಹುದಾಗಿದೆ.
ಈ ವ್ಯತ್ಯಾಸವು ಸೆಪ್ಟೆಂಬರ್ 22 ರ ನಂತರ ಕಾರು ಕೊಳ್ಳುವವರಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಇದರಿಂದ ಭಾರತದಾದ್ಯಂತ ಕಾರು ಖರೀದಿಯಲ್ಲಿ ಪೈಪೋಟಿಯನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ಫೋನ್ಪೇ, ಗೂಗಲ್ ಪೇ, ಪೇಟಿಎಂ : ಸೆಪ್ಟೆಂಬರ್ 15 ರಿಂದ UPI ಹೊಸ ರೂಲ್ಸ್
ಜಿಎಸ್ಟಿ 2.0 ನಂತರ ಟಾಟಾ ಮೋಟಾರ್ಸ್ ಬೆಲೆ ಕಡಿತ ಪಟ್ಟಿ
| ಹೆಸರು | ಕಡಿತಗೊಳ್ಳುವ ದರ (ರೂ.) |
| ಟಿಯಾಗೊ | 75,000 ರೂ. ಗಳ ವರೆಗೆ |
| ಟಿಗೊರ್ | 80,000 ರೂ. ಗಳ ವರೆಗೆ |
| ಅಲ್ಟ್ರೂಝ್ | 1,10,000ರೂ. ಗಳ ವರೆಗೆ |
| ಪಂಚ್ | 85,000 ರೂ. ಗಳ ವರೆಗೆ |
| ನೆಕ್ಸಾನ್ | 1,55,000 ರೂ. ಗಳ ವರೆಗೆ |
| ಕರ್ವ್ | 65,000 ರೂ. ಗಳ ವರೆಗೆ |
| ಹ್ಯಾರಿಯರ್ | 1,40,000 ರೂ. ಗಳ ವರೆಗೆ |
| ಸಫಾರಿ | 1,45,000 ರೂ. ಗಳ ವರೆಗೆ |
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಅವರು, ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುವ ಪ್ರಯಾಣಿಕ ವಾಹನಗಳ ಮೇಲಿನ ಜಿಎಸ್ಟಿ ದರ ಕಡಿತವು ಪ್ರಗತಿಪರ ಮತ್ತು ಸಕಾಲಿಕ ನಿರ್ಧಾರವಾಗಿದೆ. ಇದು ಭಾರತದಾದ್ಯಂತ ಲಕ್ಷಾಂತರ ಜನರಿಗೆ ಕಾರು ಖರೀದಿಸಲು ಮುಂದಾಗುವಂತೆ ಮಾಡುತ್ತದೆ. ಈ ಸುಧಾರಣೆ ಮತ್ತು ಉದ್ದೇಶವನ್ನು ಟಾಟಾ ಮೋಟಾರ್ಸ್ ಸಂಪೂರ್ಣವಾಗಿ ಗೌರವಿಸುತ್ತದೆ. ಇದರ ಸಂಪೂರ್ಣ ಪ್ರಯೋಜನ ಗ್ರಾಹಕರಿಗೆ ಸಿಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟೆಸ್ಲಾ ಕಂಪೆನಿ ಕಾರು ಖರೀದಿಸಿ ಟೀಕೆಗೆ ಗುರಿಯಾದ ಸಾರಿಗೆ ಸಚಿವ
(Tata Cars After GST Now Tata cars become cheaper by more then 1 lakh after GST 2.0)



