ಬ್ರಹ್ಮಾವರ : ಅಂದರ್‌ – ಬಾಹರ್‌ ಇಸ್ಪೀಟ್‌ ಜೂಟಾಟ ಆಡ್ತಿದ್ದ 11 ಮಂದಿ ಬಂಧನ

Bramavara Police Arrest Gambling : ಬ್ರಹ್ಮಾವರ : ಹಣವನ್ನು ಪಣಕ್ಕಿಟ್ಟು ಅಂದರ್‌ ಬಾಹರ್‌ ಇಸ್ಪೀಟ್‌ ಜೂಜಾಟ ಆಡ್ತಿದ್ದ 11 ಮಂದಿಯನ್ನು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಬಂಧಿಸಿರುವ ಘಟನೆ ಬ್ರಹ್ಮಾವರದ ನೀಲಾವರದಲ್ಲಿ ನಡೆದಿದೆ.

ಬ್ರಹ್ಮಾವರದ ಪೊಲೀಸ್ ಉಪನಿರೀಕ್ಷಕರಾದ ಅಶೋಕ್ ಮಾಳಾಬಗಿ ನೇತೃತ್ವದ ತಂಡವು ಸಂಜೆ 7:30 ರ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿತ್ತು. ದಾಳಿಯ ವೇಳೆಯಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಟ ಆಡ್ತಿರೋದು ಪತ್ತೆಯಾಗಿದೆ.

ನೀಲಾವರದ ಸದಾಶಿವ ದೇವಾಡಿಗ, 52 ಹೇರೂರು ಗ್ರಾಮದ ಪ್ರಸನ್ನ, 52 ಹೇರೂರು ಗ್ರಾಮದ ರಜಾಕ್, ಚೇರ್ಕಾಡಿಯ ಭಾಸ್ಕರ, ಕೊಡವೂರು ಗ್ರಾಮದ ಅಶೋಕ, ತೆಂಕನಿಡಿಯೂರು ಗ್ರಾಮದ ಹರೀಶ್ ನಾಯ್ಕ, ಉಡುಪಿ ಪುತ್ತೂರು ಹನುಮಂತನಗರದ ಚಂದ್ರಹಾಸ, ಬೇಳೂರು ಗ್ರಾಮದ ರವಿಕುಮಾರ, ಚೇರ್ಕಾಡಿಯ ಶಶಿಕಾಂತ, ಸಂತೆಕಟ್ಟೆ ಕಕ್ಕುಂಜೆಯ ಆನಂದ ಕೋಟ್ಯಾನ ಮತ್ತು ಚೇರ್ಕಾಡಿಯ ಸಂಪತ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಜೂಜಾಟ ಆಡ್ತಾ ಇರೋದನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ಕಾರ್ಕಳದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಕನ್ನ

Bramavara Police ಪೊಲೀಸರು ಆರೋಪಿಗಳಿಂದ ₹20,900 ನಗದು, 52 ಇಸ್ಪೀಟ್ ಎಲೆಗಳು, ಒಂದು ಫೈಬರ್ ಟೇಬಲ್, 12 ಪ್ಲಾಸ್ಟಿಕ್ ಕುರ್ಚಿಗಳು, 11 ಮೊಬೈಲ್ ಫೋನ್‌ಗಳು, ಮೂರು ಕಾರುಗಳು ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಜೂಜಾಟದಂತಹ ಅಕ್ರಮ ಚಟುವಟಿಕೆಯ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಸಮೋಸಾ ತರಲಿಲ್ಲ ಎಂದು ಪತಿ ಹಾಗೂ ಮಾವನಿಗೆ ಹೊಡೆದ ಸೊಸೆ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories