ಒಪ್ಪೋ F31 5G ಸರಣಿಗಾಗಿ ಕಾಯುತ್ತಿರುವವರಿಗೆ ಗುಡ್‌ ನ್ಯೂಸ್‌ ! ಸೆಪ್ಟೆಂಬರ್‌ 15ಕ್ಕೆ ಕೊಡಲಿದೆ ಗ್ರ್ಯಾಂಡ್‌ ಎಂಟ್ರಿ !

Oppo F31 Series: ಒಪ್ಪೋ ತನ್ನ ಹೊಸ ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಒಪ್ಪೋದ ಹೊಸ ಸರಣಿಯ ಹೆಸರು ಒಪ್ಪೋ F31 5G ಸರಣಿ.

ಈ ಫೋನ್‌ಗಳನ್ನು ಸೆಪ್ಟೆಂಬರ್ 15, 2025 ರಂದು ಕಂಪನಿ ಬಿಡುಗಡೆಮಾಡಲಿದೆ. ಕಂಪನಿಯು ಈ ಸರಣಿಯನ್ನು ಡ್ಯೂರಬಲ್ ಚಾಂಪಿಯನ್ ಎಂಬ ಟ್ಯಾಗ್‌ಲೈನ್‌ನೊಂದಿಗೆ ಪ್ರಚಾರ ಮಾಡುತ್ತಿದೆ.

ಫೋನ್ ನ ಬಿಡುಗಡೆ ದಿನಾಂಕವನ್ನು ಹೊರತುಪಡಿಸಿ ಕಂಪನಿಯು ಯಾವುದೇ ಇತರ ಮಾಹಿತಿಯನ್ನು ನೀಡಿಲ್ಲ. ಆದರೆ, ಟಿಪ್‌ಸ್ಟರ್ ಪರಸ್ ಗುಗ್ಲಾನಿ ಈ ಸರಣಿಯ ಮುಂಬರುವ 3 ಫೋನ್‌ಗಳಾದ ಒಪ್ಪೋ F31, F31 ಪ್ರೊ ಮತ್ತು F31 ಪ್ರೊ ಪ್ಲಸ್‌ನ ವೈಶಿಷ್ಟ್ಯಗಳನ್ನು ಸೋರಿಕೆ ಮಾಡುವ ಮೂಲಕ ಬಳಕೆದಾರರ ಉತ್ಸಾಹವನ್ನು ಹೆಚ್ಚಿಸಿದ್ದಾರೆ.

ಸೋರಿಕೆಯಾದ ಮಾಹಿತಿಯ ಪ್ರಕಾರ ಈ ಫೊನ್‌ ಜಲನಿರೋಧಕ ರೇಟಿಂಗ್‌ ನೊಂದಿಗೆ ಬರುತ್ತಿದೆ ಎಂಬುದು ಪ್ರಮುಖವಾಗಿ ಕಾಣಿಸುತ್ತಿದೆ. ಇದರೆ ಜೊತೆಗೆ ಈ ಫೋನುಗಳ ಬ್ಯಾಟರಿ ಕ್ಷಮತೆಯು 7000 mAh ಎಂಬುದು ತಿಳಿದುಬರುತ್ತಿದೆ.

ಒಪ್ಪೋ F31 ಸರಣಿ ಯಾವ ವೈಶಿಷ್ಟ್ಯಗಳಿರಬಹುದು

ಸೋರಿಕೆಯಾದ ಮಾಹಿತಿಯ ಪ್ರಕಾರ ಒಪ್ಪೋ ತನ್ನ ಹೊಸ F31 ರಲ್ಲಿ 6.57 ಇಂಚಿನ AMOLED ಡಿಸ್ಟ್ರೇಯನ್ನು ಒದಗಿಸಲಿದೆ. ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.

ಈ ಫೋನ್ 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಆಯ್ಕೆಯಲ್ಲಿ ಬರುತ್ತದೆ. ಇನ್ನು ಈ ಫೋನ್‌ನಲ್ಲಿ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸ್ಸರ್‌ ಅನ್ನು ಇರಲಿದೆ.

ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ಗಳು ಮತ್ತು 16-ಮೆಗಾಪಿಕ್ಸೆಲ್ ಸೆಲ್ಪಿ ಕ್ಯಾಮೆರಾ ಆಗಿರುತ್ತದೆ. ಈ ಫೋನ್ IP68, IP69 ಮತ್ತು IP66 ಜಲನಿರೋಧಕ ರೇಟಿಂಗ್‌ನೊಂದಿಗೆ ಬರುತ್ತದೆ.

ಫೋನ್‌ನ ಬ್ಯಾಟರಿ 7000mAh ಆಗಿದ್ದು, ಇದು 80 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ: ಕೆಲಸ ಕದಿಯುವ AI: ಭವಿಷ್ಯದ ಬಗ್ಗೆ ಕಳವಳ ಹಂಚಿಕೊಂಡ ಜೆಫ್ರಿ ಹಿಂಟನ್‌

ಇನ್ನು ಒಪ್ಪೋ F31 ಪ್ರೋ 5G ಬಗ್ಗೆ ಹೇಳುವುದಾದರೆ, ಈ ಫೋನ್ 6.57-ಇಂಚಿನ AMOLED ಡಿಸ್ಟ್ರೇಯೊಂದಿಗೆ ಬರಲಿದೆ ಎಂದು ಟಿಪ್‌ಸ್ಟರ್ ಹೇಳಿದ್ದಾರೆ. ಇದು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯನ್ನು ಹೊಂದಿರುತ್ತದೆ.

ಪ್ರೊಸೆಸರ್ ಆಗಿ, ಈ ಫೋನ್‌ನಲ್ಲಿ ಡೈಮೆನ್ಸಿಟಿ 7300 ಎನರ್ಜಿಯನ್ನು ನೋಡಬಹುದಾಗಿದೆ. ಛಾಯಾಗ್ರಹಣಕ್ಕಾಗಿ, ನೀವು 50-ಮೆಗಾಪಿಕ್ಸೆಲ್ ಮುಖ್ಯ ಮತ್ತು 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಪಡೆಯುತ್ತೀರಿ.

ಈ ಫೋನ್‌ನ ಬ್ಯಾಟರಿ 7000mAh ಆಗಿದ್ದು, ಇದು 80-ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಕೂಡಾ IP66, IP68 ಮತ್ತು IP69 ಜಲನಿರೋಧಕ ರೇಟಿಂಗ್‌ನೊಂದಿಗೆ ಸಹ ಬರುತ್ತದೆ.

ಒಪ್ಪೋ F31 ಪ್ರೋ ಪ್ಲಸ್‌ 5G ಬಗ್ಗೆ ಹೇಳುವುದಾದರೆ, ಕಂಪನಿಯು ಈ ಫೋನ್‌ ಅನ್ನು 120Hz ರಿಫ್ರೆಶ್ ದರದೊಂದಿಗೆ ಬರಲಿದೆ ಎಂದು ಟಿಪ್‌ಸ್ಟರ್ ಹೇಳಿದರು.

ನೀವು ಫೋನ್‌ನಲ್ಲಿ 8GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಪಡೆಯುತ್ತೀರಿ. ಪ್ರೊಸೆಸರ್ ಆಗಿ, ಕಂಪನಿಯು ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 7 Gen 3 ಅನ್ನು ನೀಡಲಿದೆ.

ಫೋನ್‌ನ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಮತ್ತು ಸೆಲ್ಪಿ ಕ್ಯಾಮೆರಾ 32 ಮೆಗಾಪಿಕ್ಸೆಲ್‌ಗಳು. ಈ ಫೋನ್ 7000mAh ಬ್ಯಾಟರಿ ಮತ್ತು 80 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಈ ಫೋನ್ IP66, IP68 ಮತ್ತು IP69 ರೇಟಿಂಗ್‌ಗಳೊಂದಿಗೆ ಬರುತ್ತದೆ. ಕಂಪನಿಯ ಈ ಮೂರು ಫೋನ್‌ಗಳು ಅಲ್ಟಾ ಸ್ಲಿಮ್ ವಿನ್ಯಾಸ ಮತ್ತು 360 ಡಿಗ್ರಿ ಆರ್ಮರ್ ಬಾಡಿಯೊಂದಿಗೆ ಬರುತ್ತವೆ.

ಇದನ್ನೂ ಓದಿ: ಸ್ಯಾಮ್‌ಸಂಗ್‌ನ ಅತ್ಯಂತ ಅಗ್ಗದ ಫೋನ್‌ ಗ್ಯಾಲಕ್ಸಿ S25 FE ಬಿಡುಗಡೆ: 4 ಕ್ಯಾಮೆರಾ, AI ತಂತ್ರಜ್ಞಾನ ಇದರ ವೈಶಿಷ್ಟ್ಯ

(Oppo F31 Series ready to launch in India on 15th September know the specification)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories