ಕೆಲಸ ಕದಿಯುವ AI: ಭವಿಷ್ಯದ ಬಗ್ಗೆ ಕಳವಳ ಹಂಚಿಕೊಂಡ ಜೆಫ್ರಿ ಹಿಂಟನ್‌

Geoffrey Hinton: ಆರ್ಟಿಫಿಷಿಯಲ್‌ ಇಂಟೆಲಿಜನ್ಸ್‌ (AI), ಸದ್ಯ ಪ್ರಪಂಚದಾದ್ಯಂತ ದೊಡ್ಡ ಅಲೆಯನ್ನು ಎಬ್ಬಿಸುತ್ತಿದೆ. ಅತ್ಯಂತ ಕ್ಲಿಷ್ಟಕರ ಪ್ರಶ್ನೆಗಳಿಗೂ ಕ್ಷಣಾರ್ಧದಲ್ಲಿ ಉತ್ತರಿಸಬಲ್ಲ ಕ್ಷಮತೆ ಎಐ ತಂತ್ರಜ್ಞಾನಕ್ಕಿದೆ.

ಗಂಟೆಗಳಲ್ಲಾಗುವ ಕೆಲಸವನ್ನು ಕೆಲವೇ ಸೆಕೆಂಡುಗಳಲ್ಲಿ ಇದು ಪೂರೈಸಬಲ್ಲದು. ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಪಾಯಕಾರಿ ಎಂಬುದು ಕೂಡಾ ನಿಧಾನಕ್ಕೆ ಅರಿವಿಗೆ ಬರುತ್ತಿದೆ.

ಎಐನ ಪಿತಾಮಹ ಎಂದು ಕರೆಯಲ್ಪಡುವ ಜೆಫ್ರಿ ಹಿಂಟನ್ ಈಗ ಮತ್ತೊಮ್ಮೆ ಅದರಿಂದ ಉಂಟಾಗಬಹುದಾದ ಹಾನಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಜೊತೆಗೆ ಚಾಟ್‌ಜಿಪಿಟಿಯಂತಹ ಎಐ ಟೂಲ್ಸ್‌ಗಳು ಅಭಿವೃದ್ಧಿಯನ್ನು ವೇಗಗೊಳಿಸುವ ಬದಲಿಗೆ ಭವಿಷ್ಯದಲ್ಲಿ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಇದರಿಂದ ಕೆಲವರು ಹೆಚ್ಚು ಶ್ರೀಮಂತರಾದರೆ ಇನ್ನು ಕೆಲವರು ಬಡತನದಲ್ಲಿ ಜೀವಿಸಬೇಕಾಗಬಹುದು. ಕೃತಕ ಬುದ್ಧಿಮತ್ತೆಯು ವ್ಯಾಪಕ ನಿರುದ್ಯೋಗಕ್ಕೂ ಕಾರಣವಾಗಬಹುದು. ಜೊತೆಗೆ ಎಐ ಮನುಕುಲಕ್ಕೆ ಗಂಭೀರ ಬೆದರಿಕೆ ಒಡ್ಡಬಹುದು ಎಂದೂ ಅವರು ಭವಿಷ್ಯವನ್ನು ನುಡಿದಿದ್ದಾರೆ.

AI ಮನುಷ್ಯರಿಂಗಿತಲೂ ಹೆಚ್ಚು ಶಕ್ತಿಶಾಲಿ

ಕೃತಕ ಬುದ್ಧಿಮತ್ತೆ (AI) ಎಷ್ಟು ಶಕ್ತಿಶಾಲಿಯಾಗಬಹುದೆಂದರೆ ಅದನ್ನು ಊಹಿಸಲೂ ಸಾಧ್ಯವಿಲ್ಲದಷ್ಟು. ಸಾಮಾನ್ಯ ವ್ಯಕ್ತಿಯೂ ಅದನ್ನು ಅಪಾಯಕಾರಿ ಜೈವಿಕ ಶಸ್ತ್ರಾಸ್ತಗಳನ್ನು ತಯಾರಿಸಲು ಬಳಸಬಹುದು ಎಂದು ಹಿಂಟನ್‌ ಹೇಳಿದ್ದಾರೆ. ಇದು ಮನುಕುಲದ ಮೇಲೆ ಭಾರಿ ಅಪಾಯವನ್ನುಂಟು ಮಾಡಬಹುದು ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಬೀದಿಯಲ್ಲಿ ನಡೆಯುವ ಒಬ್ಬ ಸಾಮಾನ್ಯ ಮನುಷ್ಯನು ಪರಮಾಣು ಬಾಂಬ್‌ ತಯಾರಿಸಬಹುದು ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ. ಸದ್ಯದಲ್ಲೇ ಎಐ ಭಾವನಾತ್ಮಕತೆ ಸೇರಿದಂತೆ ಮಾನವರ ಸಾಮರ್ಥ್ಯಗಳನ್ನು ಮೀರಿಸುತ್ತದೆ ಎಂದು ಹಿಂಟನ್‌ ಎಚ್ಚರಿಸಿದ್ದಾರೆ. ವಿಶಾಲವಾದ ಡೇಟಾಸೆಟ್‌ಗಳಿಂದಲೇ ಕಲಿಯುವ ಎಐ ನ ಸಾಮರ್ಥ್ಯವು ಮಾನವರ ಭಾವನೆ ಮತ್ತು ನಡವಳಿಕೆಗಳನ್ನು ಮಾನವರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಮ್‌ಸಂಗ್‌ನ ಅತ್ಯಂತ ಅಗ್ಗದ ಫೋನ್ ಗ್ಯಾಲಕ್ಸಿ $25 FE ಬಿಡುಗಡೆ: 4 ಕ್ಯಾಮೆರಾ, AI ತಂತ್ರಜ್ಞಾನ ಇದರ ವೈಶಿಷ್ಟ್ಯ

AI ನಿಜವಾಗಿಯೂ ಬುದ್ಧಿವಂತ

2024 ರಲ್ಲಿ ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ನೊಬೆಲ್‌ ಪ್ರಶಸ್ತಿ ಪಡೆದೆ ಜೆಫ್ರಿ ಹಿಂಟನ್‌ ಬಹಳ ಸ್ಪಷ್ಟವಾಗಿ ಎಐ ಬುದ್ದಿವಂತ ಎಂದು ವಾದಿಸುತ್ತಾರೆ. ‘ನನಗೆ ಇದು ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ. ನೀವು ಇದರ ಹತ್ತಿರ ಮಾತಾಡಿ ಪ್ರಶ್ನೆ ಕೇಳಿದರೆ ಅದು ಅರ್ಥ ಮಾಡಿಕೊಳ್ಳುತ್ತದೆ.’ ‘ತಂತ್ರಜ್ಞಾನ ಸಮುದಾಯದಲ್ಲಿ ಎಐ ಹೆಚ್ಚು ಚುರುಕಾಗುತ್ತಿದೆ, ಈ ವಿಷಯದ ಮೇಲೆ ಬಹಳ ಕಡಿಮೆ ಸಂದೇಹವಿದೆ’.

ಇದನ್ನೂ ಓದಿ: iPhone ಪ್ರಿಯರಿಗೆ ಗುಡ್ ನ್ಯೂಸ್! ಬಿಡುಗಡೆ ಸಜ್ಜಾದ ಐಫೋನ್ 17 ಸರಣಿ

(Why AI Godfather Geoffrey Hinton warns to people about their future)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories