ಬಿಸಿ ಬಿಸಿ ಪಾವ್ ಭಾಜಿ: ಸಿಂಪಲ್ ಆಗಿ ಕೇವಲ ಹದಿನೈದೇ ನಿಮಿಷದಲ್ಲಿ ಹೀಗೆ ತಯಾರಿಸಿ
Pav Bhaji Recipe: ಪಾವ್ ಭಾಜಿ ಯಾರಿಗೆ ಇಷ್ಟ ಇಲ್ಲ ಹೇಳಿ! ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ಪಾವ್ ಭಾಜಿಯ ರುಚಿಯನ್ನು ಇಷ್ಟಪಡುತ್ತಾರೆ.
ಭಾರತದ ಸ್ಟ್ರೀಟ್ ಫುಡ್‌ಗಳ ಸಾಲಿನಲ್ಲಿ ಹೆಚ್ಚು ಜನಪ್ರಿಯತೆಯನ್ನೂ ಇದು ಗಳಿಸಿದೆ. ಮೃದುವಾದ ಪಾವ್‌ಗೆ ಘಂ ಎಂದು ಪರಿಮಳ ಬೀರುವ ಭಾಜಿ ಸೇರಿಸಿ ಸರಿಯುವುದೇ ಒಂದು ಆನಂದ.
ಇಂತಹ ಪಾವ್ ಭಾಜಿಯನ್ನ ಅಪರೂಪಕ್ಕೆ ಹೊಟೇಲ್ ಅಥವಾ ಫುಡ್ ಕಾರ್ನರ್‌ಗಳಲ್ಲಿ ಸವಿದರೆ ಓಕೆ, ಆದರೆ ಪದೇ ಪದೇ ಹೊರಗೆ ಹೋಗಿ ಪಾವ್ ಭಾಜಿ ಸವಿಯುವುದು ಆಗದ ಮಾತು.
ಅದಕ್ಕಾಗಿ ರುಚಿಯಾದ ಪಾವ್ ಭಾಜಿಯನ್ನು ಮನೆಯಲ್ಲಿಯೇ ತಯಾರಿಸವುದನ್ನು ಕಲಿತರೆ ಸ್ವಚ್ಛತೆಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಸ್ಟ್ರೀಟ್ ಫುಡ್ ಶೈಲಿಯಲ್ಲಿಯೇ ಮನೆಯಲ್ಲಿ ಪಾವ್ ಭಾಜಿ ಸುಲಭವಾಗಿ ತಯಾರಿಸಬಹುದು. ಕೇವಲ 15 ನಿಮಿಷಗಳಲ್ಲಿ ರುಚಿಯಾದ ಪಾವ್ ಭಾಜಿ ತಯಾರಿಸಿ ಸವಿಯಬಹುದು.
ಹೇಗೆ ಅಂತೀರಾ? ಇಲ್ಲಿದೆ ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಪಾವ್ ಭಾಜಿ ರೆಸಿಪಿ.
Pav Bhaji Recipe: ಪಾವ್ ಭಾಜಿ ತಯಾರಿಸಲು ಬೇಕಾಗುವ ಪದಾರ್ಥಗಳು
ಕ್ಯಾರೆಟ್ – 1
ಬೀಟ್ರೂಟ್ – 1 (ಮಧ್ಯಮ ಗಾತ್ರದ್ದು)
ಆಲೂಗಡ್ಡೆ – 2
ಟೊಮೆಟೊ – 2
ಬೆಳ್ಳುಳ್ಳಿ– 4–5 ಎಸಳುಗಳು
ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಮ್ – 1
ಸಣ್ಣಗೆ ಕತ್ತರಿಸಿದ ಈರುಳ್ಳಿ – 1
ಪಾವ್ ಭಾಜಿ ಮಸಾಲ
ಟೊಮೆಟೊ ಪ್ಯೂರಿ – 1 ಕಪ್
ಎಣ್ಣೆ
ಬೆಣ್ಣೆ
ಕಾಶ್ಮೀರಿ ಕೆಂಪು ಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಇದನ್ನೂ ಓದಿ: Dahi Paneer Recipe: ಚಪಾತಿ, ರೋಟಿಗೆ ಬೆಸ್ಟ್ ಕಾಂಬಿನೇಷನ್ ದಹಿ ಪನೀರ್
ಪಾವ್ ಭಾಜಿ ತಯಾರಿಸುವ ವಿಧಾನ
– ಮೊದಲಿಗೆ ಆಲೂಗಡ್ಡೆ, ಕ್ಯಾರೆಟ್ ಮತ್ತು ಬೀಟ್ರೂಟ್ ಸಿಪ್ಪೆ ತೆಗೆದು ತೊಳೆದು, ನಂತರ ದೊಡ್ಡ ತುಂಡುಗಳಾಗಿ ಕತ್ತರಿಸಿ. ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ. ಅದಕ್ಕೆ ಕತ್ತರಿಸಿದ ಟೊಮೆಟೊ, ಬೆಳ್ಳುಳ್ಳಿ, ಸ್ವಲ್ಪ ನೀರು ಸೇರಿಸಿ ಎರಡರಿಂದ ಮೂರು ಸೀಟಿ ಬರುವವರೆಗೆ ಬೇಯಿಸಿ.
– ಒಂದು ದಪ್ಪ ತಳದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಮತ್ತು ಬೆಣ್ಣೆಯನ್ನು ಸೇರಿಸಿ ಬಿಸಿ ಮಾಡಿ.
– ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ 1 ರಿಂದ 2 ನಿಮಿಷದವರೆಗೆ ಹುರಿಯಿರಿ. ಅದಕ್ಕೆ ಕ್ಯಾಪ್ಸಿಕಂ ಅನ್ನು ಸಹ ಸೇರಿಸಿ.
– ಕ್ಯಾಪ್ಸಿಕಂ ಮತ್ತು ಈರುಳ್ಳಿ ಬಾಣಲೆಯಲ್ಲಿ ಸ್ವಲ್ಪ ಬೇಯಿಸಿದಾಗ, ಉಪ್ಪು, ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಮತ್ತು ಪಾವ್ ಭಾಜಿ ಮಸಾಲ ಸೇರಿಸಿ.
– ಒಮ್ಮೆ ಎಲ್ಲವನ್ನು ಮಿಕ್ಸ್ ಮಾಡಿ, ನಂತರ ಟೊಮೆಟೊ ಪ್ಯೂರಿ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.
– ಪ್ರಶರ್ ಕುಕ್ಕರ್‌ನಲ್ಲಿರುವ ತರಕಾರಿಗಳನ್ನು ಮ್ಯಾಷರ್ ಸಹಾಯದಿಂದ ಮ್ಯಾಶ್ ಮಾಡಿ.
– ಆ ತರಕಾರಿಗಳನ್ನು ಬಾಣಲೆಯಲ್ಲಿ ಹಾಕಿ ಸ್ವಲ್ಪ ಹೊತ್ತು ಹೆಚ್ಚಿನ ಉರಿಯಲ್ಲಿ ಕುದಿಸಿ. ತಳ ಹಿಡಿಯದಂತೆ ಕೈಯಾಡಿಸುತ್ತ ಇರಿ.
– ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪು ಸೇರಿಸಿದರೆ ಪಾವ್ ಭಾಜಿ ರೆಡಿ.
– ಈಗ ಪ್ಯಾನ್ ಬಿಸಿ ಮಾಡಿ, ಪಾವ್ ಮೇಲೆ ಬೆಣ್ಣೆ ಹಚ್ಚಿ ಬೇಯಿಸಿ.
– ಬಿಸಿ ಇರುವಾಗಲೇ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿಯ ಜೊತೆಗೆ ಪಾವ್ ಭಾಜಿ ಸವಿಯಿರಿ.
ಇದನ್ನೂ ಓದಿ: Sprouts Seed Pulao Recipe: ಆರೋಗ್ಯಕರ ರೈಸ್ ಐಟಮ್: ಮೊಳಕೆ ಕಾಳಿನ ಪುಲಾವ್ ರೆಸಿಪಿ ಹೀಗೆ ತಯಾರಿಸಿ
(How to make Pav Bhaji in just 15 minutes at home simple Pav Bhaji Recipe in kannada)



