Sprouts Seed Pulao Recipe: ಮಕ್ಕಳ ಲಂಚ್‌ ಬಾಕ್ಸ್‌ಗೆ ಆರೋಗ್ಯಕರ ರೈಸ್‌ ಐಟಮ್‌: ಮೊಳಕೆ ಕಾಳಿನ ಪುಲಾವ್‌ ರೆಸಿಪಿ ಹೀಗೆ ತಯಾರಿಸಿ

Sprouts Seed Pulao Recipe: ಲಂಚ್‌ ಬಾಕ್ಸ್‌ ಎನ್ನುವುದು ಪ್ರತಿ ಮುಂಜಾನೆಯ ಒಂದು ವಿಶೇಷ ತಲೆನೋವು. ಒಂದೇ ರೀತಿಯ ತಿಂಡಿಗಳನ್ನು ಮಾಡಿದರೆ ದೊಡ್ಡವರೇನೋ ಸುಮ್ಮನಿರಬಹುದು.

ಆದರೆ ಮಕ್ಕಳು ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾರರು. ಅವರಿಗೆ ಪ್ರತಿದಿನ ಹೊಸ ರುಚಿ ಬೇಕು. ನೀವೆಷ್ಟೇ ತಿಳಿ ಹೇಳಿದರೂ ಅವರಂತೂ ನಿಮ್ಮ ಮಾತು ಕೇಳುವುದಿಲ್ಲ.

ಹಾಗಾಗಿ ನೀವೂ ಕೂಡಾ ಪ್ರತಿದಿನದ ತಿಂಡಿಗಾಗಿ ಹೊಸ ಹೊಸ ರುಚಿಯನ್ನು ಹುಡುಕುತ್ತಿರಬಹುದು. ಅದಕ್ಕಾಗಿ ಇಲ್ಲಿ ಒಂದು ಹೊಸ ರುಚಿಯನ್ನು ಹೇಳಿದ್ದೇವೆ.

ಇದು ತರಕಾರಿಗಳ ಪುಲಾವ್‌ಗಿಂತಲೂ ಅಧಿಕ ಪೋಷಕಾಂಶಗಳಿಂದ ಕೂಡಿದ ಪುಲಾವ್‌ ಆಗಿದೆ. ಮೊಳಕೆ ಕಟ್ಟಿದ ಕಾಳುಗಳಿಂದ ತಯಾರಿಸುವ ಈ ಪುಲಾವ್‌ ನಿತ್ಯದ ಆಹಾರಕ್ರಮಕ್ಕೆ ಒಂದು ಉತ್ತಮ ಸೇರ್ಪಡೆಯಾಗಬಲ್ಲದು.

ಅತ್ಯಂತ ಕಡಿಮೆ ಸಮಯದಲ್ಲಿ ಈ ಮೊಳಕೆ ಕಾಳಿನ ಪುಲಾವ್‌ ತಯಾರಿಸಬಹುದು. ಇದು ಮಕ್ಕಳ ಲಂಚ್‌ ಬಾಕ್ಸ್‌ಗೆ ಅಷ್ಟೇ ಅಲ್ಲ, ಬೆಳಗ್ಗಿನ ತಿಂಡಿ, ಆಫೀಸಿಗೆ ಹೋಗವವರಿಗೂ ಬೆಸ್ಟ್‌ ಆಗಿದೆ.

ಸುಲಭವಾಗಿ ಮೊಳಕೆ ಕಾಳುಗಳ ಪುಲಾವ್‌ ತಯಾರಿಸುವುದು ಹೇಗೆ ಎಂದು ತಿಳಿಯೋಣ.

ಇದನ್ನೂ ಓದಿ: ರಾತ್ರಿ ಉಳಿದ ಅನ್ನವನ್ನು ಎಸೆಯಬೇಡಿ ! ಇದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ ?

Sprouts Seed Pulao Recipe: ಮೊಳಕೆ ಕಾಳಿನ ಪುಲಾವ್‌ – ಬೇಕಾಗುವ ಸಾಮಗ್ರಿಗಳು

ಮೊಳಕೆ ತರಿಸಿದ ಹೆಸರು ಕಾಳು – 1 ಕಪ್‌
ಈರುಳ್ಳಿ – 2
ಸಣ್ಣಗೆ ಕತ್ತರಿಸಿದ ಕ್ಯಾರೆಟ್‌ ಮತ್ತು ಬೀನ್ಸ್‌ – 1 ಕಪ್‌
ಕ್ಯಾಪ್ಸಿಕಂ – 1
ಅಕ್ಕಿ –1 ಕಪ್‌
ಟೊಮೆಟೊ – 1
ಹಸಿರು ಮೆಣಸಿನಕಾಯಿ – 2 ರಿಂದ 3
ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಜೀರಿಗೆ – 1 ಚಮಚ
ಗರಂ ಮಸಾಲ ಪುಡಿ – 1 ಚಮಚ
ಅರಿಶಿಣ ಪುಡಿ 1/2 ಚಮಚ
ತುಪ್ಪ – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Sprouts Seed Pulao Recipe: ಮೊಳಕೆ ಕಾಳು ಪುಲಾವ್ ಹೀಗೆ ತಯಾರಿಸಿ

– ಮೊದಲು ಕುಕ್ಕರ್‌ಗೆ ತುಪ್ಪ ಹಾಕಿ ಸ್ವಲ್ಪ ಬಿಸಿ ಮಾಡಿ. ಅದಕ್ಕೆ ಜೀರಿಗೆ ಸೇರಿಸಿ.

– ಜೀರಿಗೆ ಹುರಿದ ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ, 2 ನಿಮಿಷ ಹುರಿಯಿರಿ.

– ಈಗ ಅದಕ್ಕೆ ಕತ್ತರಿಸಿಟ್ಟ ಕ್ಯಾರೆಟ್, ಬೀನ್ಸ್‌, ಕ್ಯಾಪ್ಸಿಕಂ ಸೇರಿಸಿ. ಎಲ್ಲಾ ತರಕಾರಿಗಳನ್ನು 2 ನಿಮಿಷಗಳ ಕಾಲ ಹುರಿಯಿರಿ.

– ನಂತರ ಅದಕ್ಕೆ ಮೊಳಕೆ ಕಟ್ಟಿದ ಹೆಸರು ಕಾಳನ್ನು ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್‌ ಮಾಡಿ.

– ತೊಳೆದಿಟ್ಟ ಅಕ್ಕಿ ಸೇರಿಸಿ ಒಂದು ನಿಮಿಷ ಹುರಿಯಿರಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಅರಿಶಿಣ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ.

– ನಂತರ ಹೆಚ್ಚಿಟ್ಟುಕೊಂಡ ಟೊಮೆಟೊ ಸೇರಿಸಿ ಒಮ್ಮೆ ಮಿಕ್ಸ್‌ ಮಾಡಿಕೊಳ್ಳಿ. ಈಗ ಅದಕ್ಕೆ 2 ಕಪ್‌ ನೀರು ಸೇರಿಸಿ.

– ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಇನ್ನೊಮ್ಮೆ ಎಲ್ಲವನ್ನು ಚೆನ್ನಾಗಿ ಮಿಕ್ಸ್‌ ಮಾಡಿ. ಕುಕ್ಕರ್‌ನ ಮುಚ್ಚಳ ಮುಚ್ಚಿ, 2 ವಿಸಲ್‌ ಹಾಕಿಸಿ.

– ಕುಕ್ಕರ್‌ನ ಬಿಸಿ ಆರಿದ ನಂತರ ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪು ಸೇರಿಸಿ ಎಲ್ಲವನ್ನು ಒಮ್ಮೆ ಮಿಕ್ಸ್‌ ಮಾಡಿಕೊಳ್ಳಿ.

– ಪ್ರೋಟೀನ್‌, ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿರುವ ಮೊಳಕೆ ಕಾಳಿನ ಪುಲಾವ್‌ ಸವಿಯಲು ಸಿದ್ಧ.

– ಇದನ್ನು ಮಕ್ಕಳ ಲಂಚ್‌ ಬಾಕ್ಸ್‌ಗೆ ಹಾಕಿ. ಜೊತೆಗೆ ಮೊಸರು ಬಜ್ಜಿ, ಒಣ ಹಣ್ಣಗಳನ್ನು ಪ್ಯಾಕ್‌ ಮಾಡಲು ಮರೆಯಬೇಡಿ.

ಇದನ್ನೂ ಓದಿ: Chinese Pakoda: ಫ್ರೀ ಟೈಂನಲ್ಲಿ ಮಾಡಿ ನೋಡಿ ಚೈನೀಸ್ ಪಕೋಡಾ

Food Lunch Box Recipes how to make Sprouts seed Pulao at home easily in kannada

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories