ಕುಂದಾಪುರ : ನವವಿವಾಹಿತೆಗೆ ವರದಕ್ಷಿಣೆ ಕಿರು*ಕುಳ, ಪ್ರಕರಣ ದಾಖಲು

ಕುಂದಾಪುರ : ನವವಿವಾಹಿತೆಗೆ ವರದಕ್ಷಿಣೆ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ಪತಿ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಕಸಬಾ ಗ್ರಾಮದ ನಿವಾಸಿ ಸುಷ್ಮಾ (26 ವರ್ಷ) ಎಂಬವರೇ ಪ್ರಕರಣ ದಾಖಲಿಸಿದವರು.ಸುಷ್ಮಾಅವರಿಗೆ ಮಂಗಳೂರು ಮೂಲದ ನಿತೀಶ್‌ ಎನ್‌. ಅವರ ನಿಶ್ಚಿತಾರ್ಥವು 2023ರ ಅಕ್ಟೋಬರ್ 16ರಂದು ನಡೆದಿತ್ತು.

2023ರ ಡಿಸೆಂಬರ್ 8ರಂದು ಕುಂದಾಪುರದ ವೇಣುಗೋಪಾಲ ಕೃಷ್ಣ ಸಭಾಭವನದಲ್ಲಿ ಇವರ ಮದುವೆಯಾಗಿದೆ. ಮದುವೆಯ ನಂತರ ಸುಷ್ಮಾ ಅವರು ಮಂಗಳೂರಿನ ಕುಲಶೇಖರದಲ್ಲಿರುವ ಪತಿಯ ಮನೆಗೆ ತೆರಳಿದ್ದರು.

ಮದುವೆಗೂ ಮುನ್ನ ನಿತೀಶ್‌ ತಾನು ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಮೆಕ್ಯಾನಿಕಲ್‌ ಮೇಂಟೆನೆನ್ಸ್‌ ಇಂಜಿನಿಯರ್‌ ಎಂದು ಸುಳ್ಳು ಹೇಳಿರುವುದು ಮದುವೆಯಾದ ಕೆಲವೇ ದಿನಗಳಲ್ಲಿ ಸುಷ್ಮಾಗೆ ತಿಳಿದಿತ್ತು.

ಮದುವೆಯಾದ ನಾಲ್ಕೈದು ದಿನಗಳಲ್ಲಿ ನಿತೀಶ್‌ ಅವರು ಸುಷ್ಮಾಗೆ ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದಾರೆ. ಅಲ್ಲದೆ, ನಿತೀಶ್‌ ಮತ್ತು ಅವರ ಕುಟುಂಬದ ಸದಸ್ಯರಾದ ನಾಗೇಶ್‌ ಕೆ, ವಿಮಲ, ಪಲ್ಲವಿ ಮತ್ತು ಪ್ರತೀಕ್‌ ಸೇರಿಕೊಂಡು ಸುಷ್ಮಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಹಿಂಸೆ ನೀಡಿದ್ದಾರೆ.

ಇದನ್ನೂ ಓದಿ : ಐಸಿಐಸಿಐ ಸೆಕ್ಯೂರಿಟೀಸ್‌ ಟ್ರೇಡಿಂಗ್‌ ಹೆಸರಲ್ಲಿ 50 ಲಕ್ಷ ರೂಪಾಯಿ ವಂಚನೆ

ಮನೆ ಕಟ್ಟಲು ಹಣದ ಸಹಾಯ ಮಾಡಬೇಕು, ಇಲ್ಲದಿದ್ದರೆ ನನ್ನ ಅಣ್ಣನಿಂದ ನಿನಗೆ ವಿಚ್ಛೇದನ ಕೊಡಿಸುತ್ತೇನೆ” ಎಂದು ಬೆದರಿಸಿದ್ದಾರೆ. “ನೀನು ಇಲ್ಲಿ ಇರಬೇಕಾದರೆ ನಿನ್ನ ತಂದೆತಾಯಿಯಿಂದ 60 ಲಕ್ಷ ರೂಪಾಯಿ ತೆಗೆದುಕೊಂಡು ಬಾ, ಇಲ್ಲವಾದರೆ ವಿಚ್ಛೇದನ ನೀಡು. ಇಲ್ಲವಾದರೆ ಇಲ್ಲವಾಗಿಸಿ ಬಿಡುತ್ತೇವೆ” ಎಂದೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2025ರ ಆಗಸ್ಟ್‌ 11ರಂದು ನಿತೀಶ್‌ ಅವರು ಸುಷ್ಮಾ ಅವರ ತವರು ಮನೆಗೆ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾರೆ. ಆ ಸಮಯದಲ್ಲಿ ಮಾಂಗಲ್ಯ ತೆಗೆಯಲು ಯತ್ನಿಸಿದ್ದು, ಸುಷ್ಮಾ ಅವರ ತಂದೆ ತಾಯಿ ತಡೆಯಲು ಬಂದಾಗ ಅವರನ್ನು ದೂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಗುಂಡಿ ಮುಚ್ಚಲು ಅನುದಾನ ಕೊಡಿ : ಸಚಿವೆ ಹೆಬ್ಬಾಳ್ಕರ್‌ಗೆ ಸುನಿಲ್‌ ಕುಮಾರ್‌ ಮನವಿ

ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 113/2025ರ ಅಡಿಯಲ್ಲಿ ಬಿಎನ್‌ಎಸ್‌ನ ಕಲಂ 85, 352, 351(2), 115(2) ಮತ್ತು 3(5)ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

kundapura police station : Newly weds harassed for dowry case registered

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories