Karnataka Congress: ಕರ್ನಾಟಕ ಕಾಂಗ್ರೆಸ್ ನಲ್ಲಿ ಯುವ ಅಲೆ: ರಾಜಕಾರಣಿ ಎಂದು ಶ್ರುತಪಡಿಸಿದ ನಿಕೇತ್, ಸ್ಥಾನ ಗಿಟ್ಟಿಸಿದ ಐಶ್ಚರ್ಯ !
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ (Karnataka Congress) ನಲ್ಲಿ ಈ ಬಾರಿ ನಿಗಮ ಮಂಡಳಿಗಳ ನೇಮಕದಲ್ಲಿ ಪ್ರತಿಭಾವಂತ, ಅರ್ಹ ಯುವಕರಿಗೆ ಸ್ಥಾನ ನೀಡಲಾಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿದೆ.
ಇದರಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು ನಿಕೇತ್ ರಾಜ್ ಮೌರ್ಯ. ಕಾಂಗ್ರೆಸಿಗೆ ಬಂದ ಅಲ್ಪಸಮಯದಲ್ಲಿ ನಿಕೇತ್ ಹಾಗೂ ಸುಧೀರ್ ಮರೂಳಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಯುವಕರಾಗಿ ಭಾಷಣಗಾರರಾಗಿ ಮಿಂಚಿದ್ದರು.
ಆದರೆ ಇಬ್ಬರನ್ನು ಭಾಷಣಕ್ಕೆ ಮಾತ್ರ ಸೀಮಿತಗೊಳಿಸುವ ಕೆಲಸ ಕಾರ್ಯಗಳು ನಡೆದಿತ್ತು ಎಂದು ಪಕ್ಷದ ಒಂದು ಮೂಲಗಳು ಹೇಳುತಿವೆ. ಆದರೆ ಲೋಕಸಭೆ ಚುನಾವಣೆಗೆ ಎಲ್ಲರೂ ಆಶ್ಚರ್ಯ ಪಡುವಂತೆ ನಿಕೇತ್ ತುಮಕೂರಿನ ಅಖಾಡಕ್ಕೆ ಇಳಿದು ಎಲ್ಲರಿಗೂ ಶಾಕ್ ನೀಡುವಂತೆ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದರು.
ಆದರೆ ಕೊನೆ ಗಳಿಗೆಯಲ್ಲಿ ಅವರಿಗೆ ಟಿಕೆಟ್ ತಪ್ಪಿ ಹೋಗಿತ್ತು. ಇದರಿಂದ ಪಕ್ಷ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ದಯಪಾಲಿಸಿತು. ನಂತರ ಎಂಎಲ್ಸಿ ಚುನಾವಣೆಯಲ್ಲಿ ಅವರ ಹೆಸರು ಎಲ್ಲರಿಗೂ ಶಾಕ್ ಆಗುವಂತೆ ಅಂತಿಮ ಪಟ್ಟಿಯಲ್ಲಿ ಸೇರಿತ್ತು.
ಇದನ್ನೂ ಓದಿ : ಹೊಸಪೇಟೆ : ಅಡುಗೆ ಸಿಲಿಂಡರ್ ಸ್ಫೋಟ, ಮನೆ ಧ್ವಂಸ – ಒಂದೇ ಕುಟುಂಬದ 8 ಜನರಿಗೆ ಗಾಯ
ಆದರೆ ಕೊನೆ ಗಳಿಗೆಯಲ್ಲಿ ಅದು ತಪ್ಪಿ ಹೋಗಿತ್ತು. ಆದರೂ ಭಾಷಣಗಾರರ ಮನಸ್ಥಿತಿಯಿಂದ ಬದಲಾದ ನಿಕೇತ್, ತಾನೊಬ್ಬ ರಾಜಕಾರಣಿ ಎಂಬುದನ್ನು ಪ್ರತಿಷ್ಠಿತ ಬಿಎಂಟಿಸಿ ಹುದ್ದೆಯನ್ನು ಗಿಟ್ಟಿಸುವ ಮೂಲಕ ಸಾಬೀತುಪಡಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಇಳಿಯುವ ಮೂಲಕ ಬದಲಾದ ನಿಕೇತ್ ತಂತ್ರಗಾರಿಕೆ, ಅವರನ್ನು ಹತ್ತಿರದಲ್ಲಿ ಬಲ್ಲವರು ಆಶ್ಚರ್ಯ ಪಡುವಂತೆ ಮಾಡಿದೆ.
ಕಡಿಮೆ ಸಮಯದಲ್ಲಿ ಕಾಂಗ್ರೆಸ್ಸಿನಂತ ವಿಶಾಲ ಪಕ್ಷದಲ್ಲಿ ಸಮರ್ಥ ಹುದ್ದೆಯನ್ನು ಗಿಟ್ಟಿಸಿಕೊಂಡದ್ದು ತನಗೆ ತಂತ್ರಗಾರಿಕೆ ಬರಲು ಬರುತ್ತಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇನ್ನೊಂದು ಕಡೆಯಲ್ಲಿ ನಿಕೇತ್ ಅವರೊಂದಿಗೆ ರಾಜ್ಯದಲ್ಲಿ ಭಾಷಣಗಾರರಾಗಿ ಮಿಂಚಿದ್ದ ಸುಧೀರ್ ಕುಮಾರ್ ಮಾರೊಳಿ ಎಲ್ಲೋ ತಂತ್ರಗಾರಿಕೆ ವಿಫಲತೆಯಿಂದ ಅವರಿಗೆ ಅರ್ಹತೆ ಇದ್ದರು ಸ್ಥಾನವನ್ನು ಗಳಿಸಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಸುಧೀರ್ ಕುಮಾರ್ ನನ್ನ ಪಕ್ಷ ಭವಿಷ್ಯದಲ್ಲಿ ಪರಿಗಣಿಸುತ್ತದೆ ಎಂಬ ದೃಢ ವಿಶ್ವಾಸದಲ್ಲಿದ್ದಾರೆ. ಆದರೆ ಕಾಂಗ್ರೆಸ್ ನಂತಹ ಪಕ್ಷದಲ್ಲಿ ಪಕ್ಷದ ಉನ್ನತ ಹುದ್ದೆಗಳಿಗೆ ಹೋಗಬೇಕಾದರೆ ತಂತ್ರಗಾರಿಕೆಯೂ ಅವಶ್ಯಕತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ..
ಇದನ್ನೂ ಓದಿ : 1 ತಿಂಗಳ ಮೊದಲು ಸಿಗುತ್ತಾ ಹೃದಯಾಘಾತದ ಮುನ್ಸೂಚನೆ ?
ಇನ್ನೊಬ್ಬ ಮಹಿಳಾ ಯುವ ನಾಯಕ ಐಶ್ವರ್ಯ ಮಹಾದೇವ್ ಸಹ ಕರ್ನಾಟಕ ರಾಜಕೀಯದಲ್ಲಿ ಎಲ್ಲರೂ ಆಶ್ಚರ್ಯ ಪಡುವಂತೆ ಉನ್ನತ ಹುದ್ದೆ ಗಿಟ್ಟಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಅವಕಾಶ ಪಡೆದ ಐಶ್ವರ್ಯ ಈಗ ಮತ್ತೊಂದು ನಿಗಮದ ಹುದ್ದೆಯನ್ನು ಗಿಟ್ಟಿಸುವ ಮೂಲಕ, ಕಾಂಗ್ರೆಸ್ ನಲ್ಲಿ ಯುವ ಪಡೆಗಳಿಗೆ ಅವಕಾಶ ಲಭ್ಯವಾಗುತ್ತದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಯುವಕರಿಗೆ ಅವಕಾಶ ನೀಡಿದ ಈ ಕ್ರಮಗಳು ಕಾಂಗ್ರೆಸ್ನ ಬದಲಾದ ರಾಜಕೀಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.



