ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ರಂಪಾಟ, ಪ್ರಕರಣ ದಾಖಲು

Kundapur News: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಾ, ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದ ವ್ಯಕ್ತಿಯೋರ್ವರ ವಿರುದ್ದ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಗ್ರಾಮದ ಕಟ್ಕೆರೆಯಲ್ಲಿ ಈ ಘಟನೆ ನಡೆದಿದೆ. ಕೋಟೇಶ್ವರ ಕಾಗೇರಿಯ ನಿವಾಸಿ ನಾಗರಾಜ್‌ (44 ವರ್ಷ) ಎಂಬವರೇ ಕುಡಿದು ರಾದ್ದಾಂತ ಮಾಡಿದವರು.

Also Read: ಜಾತಿ ಸಮೀಕ್ಷೆ: ಉಡುಪಿಯಲ್ಲಿ ಶಿಕ್ಷಕ ಅಮಾನತು

ಕುಂದಾಪುರ(Kundapur) ಪೊಲೀಸ್‌ ಠಾಣೆಯ ಉಪ ನಿರೀಕ್ಷಕರಾದ ನಂಜಾ ನಾಯ್ಕ್‌ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಸಾರ್ವಜನಿಕವಾಗಿ ನಾಗರಾಜ್‌ ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದೆ.

ಆರೋಪಿಯಿಂದ 650 ML UB EXPORT ಬೀರ್ ಬಾಟಲಿ-1 ಮತ್ತು ಒಂದು ಪ್ಲಾಸ್ಟಿಕ್ ಗ್ಲಾಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ನಿಯಮ ಉಲ್ಲಂಘನೆ ಮಾಡಿದ ನಾಗರಾಜ್ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read: ಉಡುಪಿ: ಇನ್‌ಸ್ಟಾಗ್ರಾಮ್‌ ವಂಚನೆ- ಆನ್‌ಲೈನ್ ಹೂಡಿಕೆ ಮಹಿಳೆಗೆ ₹4.20 ಲಕ್ಷ ದೋಖಾ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories