ಜಾತಿ ಸಮೀಕ್ಷೆ: ಉಡುಪಿಯಲ್ಲಿ ಶಿಕ್ಷಕ ಅಮಾನತು

Udupi Cast Survey: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರಾಗಿ ನೇಮಕಗೊಂಡಿದ್ದ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶೆಟ್ಟಿಬೆಟ್ಟು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ವೆಂಕಟೇಶ್ ಪಿ.ಬಿ. ಅಮಾನತುಗೊಂಡ ಶಿಕ್ಷಕ. ವೆಂಕಟೇಶ್‌ ಅವರನ್ನು ಸಮೀಕ್ಷೆಗೆ ಗಣತಿದಾರರಾಗಿ ನೇಮಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

ಆದರೆ ಅವರಿಗೆ ನೇಮಕಾತಿ ಆದೇಶ ಬಂದಿರಲಿಲ್ಲ. ಹಲವಾರು ಬಾರಿ ದೂರವಾಣಿಯಲ್ಲಿ ಸಂಪರ್ಕಿಸಿದರೂ ನೇಮಕಾತಿ ಆದೇಶದ ಪ್ರತಿಯನ್ನು ಸ್ವೀಕರಿಸಲು ಅವರು ನಿರಾಕರಿಸಿದರು.

Also Read: ಉಡುಪಿ: ಇನ್‌ಸ್ಟಾಗ್ರಾಮ್‌ ವಂಚನೆ- ಆನ್‌ಲೈನ್ ಹೂಡಿಕೆ ಮಹಿಳೆಗೆ ₹4.20 ಲಕ್ಷ ದೋಖಾ

ಈ ಹಿನ್ನೆಲೆಯಲ್ಲಿ ಅವರಲ್ಲಿ ಕಾರಣ ಕೇಳಿ ನೋಟೀಸ್‌ ನೀಡಲಾಗಿತ್ತು. ಆದರೂ ವೆಂಕಟೇಶ್‌ ಅವರು ಯಾವುದೇ ಕಾರಣ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಪಿ.ಬಿ. ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಸರ್ವೇ ಕಾರ್ಯಕ್ಕೆ ನೇಮಕಗೊಂಡಿರುವ ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದರೆ, ಅಂತಹ ಶಿಕ್ಷಕರ ವಿರುದ್ದ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾತಿಗಣತಿಯ ಮೂಲಕ ಕರ್ನಾಟಕ ಸರಕಾರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಸೆಪ್ಟೆಂಬರ್‌ 22 2025 ರಂದು ಪ್ರಾರಂಭವಾದ ಸಮೀಕ್ಷೆಯು ಮತ್ತು ಅಕ್ಟೋಬರ್ 7, 2025ರ ವರೆಗೆ ನಡೆಯಲಿದೆ.

Also Read: ಅಮಾಸೆಬೈಲು: ಗಾಂಧಿ ಜಯಂತಿಯಂದು ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು

ಜಾತಿಗಣತಿ (Cast Census) ಕಾರ್ಯವು ರಾಜ್ಯದ ಸುಮಾರು 1.43 ಕೋಟಿ ಮನೆಗಳಲ್ಲಿ ಸುಮಾರು 7 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೆಎಸ್‌ಸಿಬಿಸಿಗೆ ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ ಮತ್ತು ಡಿಸೆಂಬರ್ 2025 ರೊಳಗೆ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories