ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ಮದುವೆ ಯಾವಾಗ ?

Vijay Devarakonda-Rashmika Mandanna : ಖ್ಯಾತ ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೈದ್ರಬಾದ್ ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಒಂದಾಗಿದೆ. ಫೆಬ್ರವರಿ 26 ರಂದು ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ.
ತೆಲುಗು ಚಿತ್ರರಂಗದ ಖ್ಯಾತ ನಟರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಂಬಂಧದ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು. ಅಕ್ಟೋಬರ್ 3 ರಂದು ಖಾಸಗಿ ಸಮಾರಂಭದಲ್ಲಿ ದಂಪತಿಗಳು ಉಂಗುರ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಿಶ್ಚಿತಾರ್ಥದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕನ್ನಡದ ಖ್ಯಾತ ನಟ ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಸ್ವಲ್ಪ ಸಮಯದಲ್ಲಿಯೇ ರಶ್ಮಿತಾ ಬ್ರೇಕ್ ಅಪ್ ಮಾಡಿಕೊಂಡಿದ್ದರು.

2017ರಲ್ಲಿ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Vijay Devarakonda-Rashmika Mandanna) ಜೋಡಿ ಮೊದಲ ಬಾರಿಗೆ ಗೀತ ಗೋವಿಂದಂ ಸಿನಿಮಾದ ಸೆಟ್ನಲ್ಲಿ ಭೇಟಿಯಾಗಿತ್ತು. ‘ಡಿಯರ್ ಕಾಮ್ರೇಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದರು.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಲಿಪ್ಲಾಕ್ ಬಾರೀ ಸುದ್ದಿಯಾಗಿತ್ತು. ಅಲ್ಲಿಂದಲೇ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಯ ಬಗ್ಗೆ ಗಾಸಿಪ್ಗಳು ಹುಟ್ಟಿಕೊಂಡಿದ್ದವು.
ಇಬ್ಬರು ಕೂಡ ತಮ್ಮ ಕುಟುಂಬಸ್ಥರ ಜೊತೆಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರ ಮದುವೆ ಫೆಬ್ರವರಿ 2026 ರಂದು ನಡೆಯಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಕಾಂತಾರ 2 ಸಿನಿಮಾ ಹೇಗಿದೆ ? ಒಂದೇ ಗಂಟೆಯಲ್ಲಿ 30 ಸಾವಿರ ಟಿಕೆಟ್ ಸೇಲ್
ರಾಹುಲ್ ಸಂಕೃತ್ಯಾನ್ ನಿರ್ದೇಶನದ ಅವರ ಮುಂದಿನ ಚಿತ್ರದ ಬಿಡುಗಡೆ ಸದ್ಯದಲ್ಲಿಯೇ ನಡೆಯಲಿದೆ. ನಿಶ್ಚಿತಾರ್ಥದ ಬಗ್ಗೆ ರಶ್ಮಿಕಾ ಅಥವಾ ವಿಜಯ್ ಇಬ್ಬರೂ ಸಾರ್ವಜನಿಕವಾಗಿ ಹೇಳಿಕೆಯನ್ನು ನೀಡಿಲ್ಲ.
ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆಯನ್ನು ಮಾಡಿದ್ದರು. ಕಿರಿಕ್ ಪಾರ್ಟಿ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.
ಕಿರಿಕ್ ಪಾರ್ಟಿ ಸಿನಿಮಾ ಸಕ್ಸಸ್ ಬೆನ್ನಲ್ಲೇ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ ಕೆಲವೇ ಸಮಯದಲ್ಲಿಯೇ ಈ ಜೋಡಿ ಬ್ರೇಕಪ್ ಸುದ್ದಿ ಹೊರಬಿದ್ದಿತ್ತು.
ನಂತರ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ ಕಾಣಿಸಿಕೊಂಡಿಲ್ಲ. ರಕ್ಷಿತ್ ಶೆಟ್ಟಿ ಕನ್ನಡ ಸಿನಿಮಾರಂಗದಲ್ಲಿ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅವರ ಯಾವ ಸಿನಿಮಾ ಕೂಡ ತೆರೆಕಂಡಿಲ್ಲ.
ಇದನ್ನೂ ಓದಿ : ಹಾಸ್ಯನಟ ಚಿಕ್ಕಣ್ಣ ಕೈ ಹಿಡಿಯಲಿದ್ದಾರೆ ಉದ್ಯಮಿ ಪಾವನಾ
ಸದ್ಯ ರಶ್ಮಿಕಾ ಆಯುಷ್ಮಾನ್ ಖುರಾನಾ ಜೊತೆ ‘ತಮ್ಮಾ’ ಬಿಡುಗಡೆಗೆ ಸಜ್ಜಾಗಿದ್ದಾರೆ. ಸಿನಿಮಾ ಅಕ್ಟೋಬರ್ 21 ರಂದು ಬಿಡುಗಡೆಯಾಗಲಿದೆ. ಮತ್ತೊಂದೆಡೆಯಲ್ಲಿ ವಿಜಯ್ ದೇವರಕೊಂಡ ‘ಕಿಂಗ್ಡಮ್’ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಇಂಗ್ಲೀಷ್ ಸುದ್ದಿಗಾಗಿ News Next Live ಫಾಲೋ ಮಾಡಿ



