ಮಣಿಪಾಲ: ಜುಗಾರಿ ಅಡ್ಡೆ ಮೇಲೆ ದಾಳಿ, ನಾಲ್ವರ ಬಂಧನ

Manipal News (ಮಣಿಪಾಲ) : ಅಕ್ರಮವಾಗಿ ಜುಗಾರಿ ಆಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಉಡುಪಿ(Udupi) ಜಿಲ್ಲೆಯ 80 ಬಡಗಬೆಟ್ಟುವಿನಲ್ಲಿ ನಡೆದಿದೆ. ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅನೀಲ್‌ ಕುಮಾರ್‌ ಬಿ ಎಂ ಅವರಿಗೆ ದೊರೆತ ಮಾಹಿತಿಯಂತೆ ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ರಾಜೀವ ನಗರದ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಮೈದಾನಕ್ಕೆ ದಾಳಿ ಮಾಡಿದ್ದಾರೆ.

Also Read: ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ರಂಪಾಟ, ಪ್ರಕರಣ ದಾಖಲು

ಈ ವೇಳೆಯಲ್ಲಿ ಹಣವನ್ನು ಪಣಕ್ಕೆ ಇಟ್ಟು ಅಂದರ್‌ ಬಾಹರ್‌ ಇಸ್ಪೀಟ್‌ ಆಡುತ್ತಿದ್ದ ಕುಂದಾಪುರದ ಜಯಂತ್‌ ( 37ವರ್ಷ), 80 ಬಡಗಬೆಟ್ಟಿನ ಶರಣಪ್ಪ (45 ವರ್ಷ), 80 ಬಡಗಬೆಟ್ಟಿನ ಈಶ (36 ವರ್ಷ), 80 ಬಡಗಬೆಟ್ಟಿನ ಹಾಲೇಶ (35 ವರ್ಷ) ಎಂಬವರೇ ಬಂಧಿತ ಆರೋಪಿಗಳು.

Also Read: ಜಾತಿ ಸಮೀಕ್ಷೆ: ಉಡುಪಿಯಲ್ಲಿ ಶಿಕ್ಷಕ ಅಮಾನತು

ಬಂಧಿತ ಆರೋಪಿಗಳಿಂದ ಆಟಕ್ಕೆ ಬಳಸಿದ್ದ 2,100 ನಗದು ಹಾಗೂ ಇಸ್ಪೀಟು ಎಲೆ ಮತ್ತು ಹಳೆಯ ದಿನಪತ್ರಿಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಣಿಪಾಲ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories