ಕಾರ್ಕಳದಲ್ಲಿ ಭೀಕರ ದುರಂತ: ನೀರಿನ ಟ್ಯಾಂಕ್ ಬಿದ್ದು ಕಾರ್ಮಿಕ ಸಾವು
Karkala News: ಕಾರ್ಕಳ: ಹಳೆಯ ನೀರಿನ ಟ್ಯಾಂಕ್ ಬಿದ್ದು ಕಾರ್ಮಿಕನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ(Karkala) ತಾಲೂಕಿನ ಬೈಲೂರು ಗ್ರಾಮದ ಜಾರ್ಕಳದಲ್ಲಿ ನಡೆದಿದೆ.
ಬೈಲೂರಿನ ಜಾರ್ಕಳದಲ್ಲಿ ಉಮೇಶ್ ಎಂಬುವವರಿಗೆ ಸೇರಿದ ತೋಟದಲ್ಲಿ ದಯಾನಂದ ಮತ್ತು ಮೇಸ್ತ್ರಿ ಆನಂದ ಎಂಬುವವರು ಹೊಲೋಬ್ಲಾಕ್‌ನಿಂದ ಹೊಸ ಶೇಡ್ ನಿರ್ಮಾಣ ಕಾರ್ಯ ನಡೆಸುತ್ತಿದ್ದರು.
ಈ ವೇಳೆಯಲ್ಲಿ ಹಳೆಯ ಕಬ್ಬಿಣದ ಸ್ಟ್ಯಾಂಡ್ ಮೇಲೆ ಇರಿಸಿದ್ದ 2 ಲೀಟರ್ ಸಾಮರ್ಥ್ಯದ ದೊಡ್ಡ ನೀರಿನ ಟ್ಯಾಂಕ್ ಒಮ್ಮಿಂದೊಮ್ಮಲೆ ಕುಸಿದು ಬಿದ್ದಿದೆ.
ಜಾಗದ ಮಾಲೀಕ ಉಮೇಶ್, ಕಾರ್ಮಿಕರಾದ ದಯಾನಂದ ಮತ್ತು ಆನಂದ ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Also Read: ಉಡುಪಿ: ರಾಘವೇಂದ್ರ ಸ್ವಾಮಿ ಮಠದಲ್ಲಿ ಕೈಮುಗಿಯುವ ವೇಳೆ ಕುಸಿದು ಬಿದ್ದು ಸಾವು
ಆದರೆ ಪರೀಕ್ಷಿಸಿದ್ದ ವೈದ್ಯರು ಮೇಸ್ತ್ರಿ ಆನಂದ ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಇನ್ನು ದಯಾನಂದ ಅವರ ಬಲಕಾಲಿನ ಮೂಳೆ ಮುರಿದಿದ್ರೆ, ಜಾಗದ ಮಾಲೀಕ ಉಮೇಶ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ.
ಜಾಗದ ಮಾಲೀಕ ಉಮೇಶ್ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ, ಹಳೆಯ ಮತ್ತು ಅಸುರಕ್ಷಿತ ಕಬ್ಬಿಣದ ಸ್ಟ್ಯಾಂಡ್ ಮೇಲೆ ಬೃಹತ್ ನೀರಿನ ಟ್ಯಾಂಕನ್ನು ನಿಲ್ಲಿಸಿ ನಿರ್ಲಕ್ಷ್ಯತನ ತೋರಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.
Also Read: ತೆಕ್ಕಟ್ಟೆ : ಸಾಲಬಾಧೆ ಪಂಚಾಯತ್ ಆವರಣದಲ್ಲೇ ಮಹಿಳೆ ಆತ್ಮಹತ್ಯೆ
ಕಾರ್ಮಿಕ ದಯಾನಂದ ಅವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.



