ವಿಶ್ವದ ಅತಿ ಶ್ರೀಮಂತ ಈ ರಾಜಕುಮಾರಿಯ ಆದಾಯ ಕೇಳಿದ್ರೆ ತಲೆ ತಿರುಗುತ್ತೆ
Viral News: ದುಬೈ ರಾಜಕುಮಾರಿ ಶೇಖಾ ಮಗ್ರಾ ಕೇವಲ ತಮ್ಮ ರಾಜಮನೆತನದಿಂದ ಮಾತ್ರವಲ್ಲ, ಐಷಾರಾಮಿ ಜೀವನ ಹಾಗೂ ತಮ್ಮ ಫ್ಯಾಶನ್ ಸೆನ್ಸ್ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೋಟಿಗಟ್ಟಲೇ ಆಸ್ತಿ ಹೊಂದಿರುವ ಮಹ್ರಾ ತಮ್ಮ ಸ್ಟೈಲಿಶ್ ಲುಕ್, ದುಬಾರಿ ಆಭರಣಗಳು ಹಾಗೂ ಡಿವೋರ್ಸ್ ಎಂಬ ಸುಗಂಧ ದ್ರವ್ಯ ಬ್ರ್ಯಾಂಡ್ನಿಂದ ಸುದ್ದಿಯಲ್ಲಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಅವರು ರ್ಯಾಪರ್ ಫ್ರೆಂಚ್ ಮೊಂಟಾನಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಕೂಡ ಅವರು ಧರಿಸಿದ್ದ 9 ಕೋಟಿ ರೂಪಾಯಿ ಮೌಲ್ಯದ ವಜ್ರದ ಉಂಗುರ ಭಾರೀ ಸದ್ದು ಮಾಡಿತ್ತು.
ದುಬೈನ ಅತ್ಯಂತ ಪ್ರಸಿದ್ಧ ರಾಜಕುಮಾರಿ ಎನಿಸಿರುವ ಶೇಖಾ ಮಹ್ರಾ ಸಾಮಾಜಿಕ ಮಾಧ್ಯಮದಿಂದ ಹಿಡಿದು ಫ್ಯಾಶನ್ ಜಗತ್ತಿನವರೆಗೆ ಸದಾ ಚರ್ಚೆಯಲ್ಲಿರ್ತಾರೆ. ಇನ್ಸ್ಟಾಗ್ರಾಂನಲ್ಲಿ 1.1 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿರುವ ಈಕೆ ತಮ್ಮ ಐಷಾರಾಮಿ ಜೀವನ ಶೈಲಿಯನ್ನು ಪ್ರದರ್ಶಿಸುತ್ತಲೇ ಇರುತ್ತಾರೆ.
ಕೆಲವೊಮ್ಮೆ ದುಬಾರಿ ಆಭರಣ, ಧಿರಿಸು ಧರಿಸಿ ಕಂಗೊಳಿಸಿದರೆ ಇನ್ನೂ ಕೆಲವೊಮ್ಮೆ ಸರಳವಾದ ಸೊಗಸಾದ ಉಡುಪಿನಲ್ಲಿ ಮನಮೋಹಕವಾಗಿ ಕಾಣುತ್ತಾರೆ. ಈಕೆ ಧರಿಸುವ ಒಂದೊಂದು ಉಡುಪು ಕೋಟಿ ಮೌಲ್ಯ ಹೊಂದಿದೆ ಎನ್ನಲಾಗಿದೆ.
Also Read: ಧ್ವಂಸವಾಗಲಿದೆಯಾ ಪ್ಯಾರಿಸ್ನ ಐಕಾನಿಕ್ ಐಫೆಲ್ ಟವರ್ : ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತು
ಯಾರು ಈ ಶೇಖಾ ಮಹ್ರಾ ?
1994ರ ಫೆಬ್ರವರಿ 26ರಂದು ಜನಿಸಿದ ಶೇಖಾ ಮಹ್ರಾ ಬಿಂಟ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್, ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿ. ಅವರ 26 ಮಕ್ಕಳಲ್ಲಿ ಈಕೆಯೂ ಒಬ್ಬರು ಎಂದು ವರದಿಯಾಗಿದೆ. ಈಕೆಯ ತಾಯಿ ಜೊಯಿ ಗ್ರಿಗೊರಾಕೋಸ್ ಗ್ರೀಕ್ ಮೂಲದವರು ಎನ್ನಲಾಗಿದೆ.
ಶೇಖಾ ಅವರ ಮೂಲ ಹೆಸರು ಕ್ರಿಸ್ಟಿನಾ, ಕಾಲಾಂತರದಲ್ಲಿ ಈಕೆ ಅರೇಬಿಕ್ ಹೆಸರನ್ನು ಇಟ್ಟುಕೊಂಡಿದ್ದಾರೆ. ದುಬೈನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಶೇಖಾ ಪದವಿ ಶಿಕ್ಷಣವನ್ನು ಲಂಡನ್ನಲ್ಲಿ ಪೂರೈಸಿದ್ದಾರೆ.
ರಾಜಮನೆತನದ ಜೊತೆ ಈಕೆ ತನ್ನದೇ ಆದ ಛಾಪನ್ನು ಹೊಂದಿದ್ದಾರೆ. ಸಾಮಾಜಿಕವಾಗಿ ಉತ್ತಮ ಹೆಸರನ್ನು ಗಳಿಸಿದ್ದಾರೆ, ಉದ್ಯಮಿ ಕೂಡ ಆಗಿರುವ ಈಕೆ ಮಹಿಳಾ ಸಬಲೀಕರಣದೆಡೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ದಿವ್ಯಾಂಗ ಮಕ್ಕಳಿಗೆ ಸಾಕಷ್ಟು ಸೇವೆಗೈಯ್ದಿರುವ ಶೇಖಾ ಪರೋಪಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಉದ್ಯಮ ಹಾಗೂ ಆದಾಯ:
ಅಂದಹಾಗೆ ಈ ರಾಜಕುಮಾರಿಯ ಸಂಪತ್ತಿನ ನಿವ್ವಳ ಮೌಲ್ಯ 2,600 ಕೋಟಿ ರೂಪಾಯಿಗಳಿಂದ ಸುಮಾರು 13 ಸಾವಿರ ಕೋಟಿ ರೂಪಾಯಿಗಳವರೆಗೆ ಇದೆ ಎನ್ನಲಾಗಿದೆ. ಯಶಸ್ವಿ ಉದ್ಯಮ ಹಾಗೂ ಪಾರಂಪರಿಕವಾಗಿ ರಾಜಮನೆತನದಿಂದ ಬಂದ ಆಸ್ತಿಯೇ ಇವರ ಸಂಪತ್ತಿನ ಮೂಲವಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮಹ್ರಾ ತಮ್ಮ ಐಷಾರಾಮಿ ಸುಗಂಧ ದ್ರವ್ಯ ಬ್ರ್ಯಾಂಡ್ ಮಹ್ರಾ M1 ಅನ್ನು ಆರಂಭಿಸಿದ್ದಾರೆ. ಡಿವೋರ್ಸ್(Divorce) ಎಂಬ ಶೀರ್ಷಿಕೆಯನ್ನು ಹೊಂದಿರುವ ಅವರ ಸುಗಂಧ ದ್ರವ್ಯವು ಅವರ ವೈಯಕ್ತಿಕ ಜೀವನದ ಪ್ರೇರಣೆ ಹೊಂದಿದೆ .
2024 ರಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ಮೊದಲ ಪತಿ ಶೇಖ್ ಮನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್ ಅವರಿಂದ ವಿಚ್ಛೇದನವನ್ನು ಘೋಷಿಸಿದ್ದರು.
Also Read: Viral News: ಸಮೋಸಾ ತರಲಿಲ್ಲವೆಂದು ಪತಿ ಹಾಗೂ ಮಾವನಿಗೆ ಹೊಡೆದ ಮಹಿಳೆ
‘‘ಡಿವೋರ್ಸ್’’ ಸುಗಂಧ ದ್ರವ್ಯ
ಈ ವಿಚ್ಛೇದನದ ನಂತರ ಬಿಡುಗಡೆಯಾದ “ಡಿವೋರ್ಸ್” ಸುಗಂಧ ದ್ರವ್ಯದ ಬೆಲೆ $272 (ಸರಿಸುಮಾರು ರೂ. 23,000) ಮತ್ತು ಮಹಿಳಾ ಸಬಲೀಕರಣದ ಸಂಕೇತವಾಗಿದೆ.
ಐಷಾರಾಮಿ ಜೀವನ :
ಶೇಖಾ ಮಹ್ರಾ ರೋಲ್ಸ್ ರಾಯ್ಸ್, ಲಂಬೋರ್ಘಿನಿ ಮತ್ತು ಫೆರಾರಿಯಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಕೆಲವು ವರದಿಗಳ ಪ್ರಕಾರ, ಅವರ ಮಾಸಿಕ ಆದಾಯ ಸುಮಾರು $5 ಮಿಲಿಯನ್ (ರೂ. 41 ಕೋಟಿ) ಎಂದು ಅಂದಾಜಿಸಲಾಗಿದೆ. ಅವರಿಗೆ ಪ್ರಾಣಿಗಳೆಂದರೆ, ವಿಶೇಷವಾಗಿ ಕುದುರೆಗಳೆಂದರೆ ತುಂಬಾ ಇಷ್ಟವಂತೆ..!
ಕೋಟಿ ಮೌಲ್ಯದ ಎಂಗೆಂಜ್ಮೆಂಟ್ ಉಂಗುರ
ವಿಚ್ಛೇದನ ಪಡೆದ ಒಂದು ವರ್ಷಗಳ ಬಳಿಕ, ಶೇಖಾ ಮೆಹ್ರಾ ಅಮೇರಿಕನ್ ರ್ಯಾಪರ್ ಫ್ರೆಂಚ್ ಮಾಂಟಾನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆಗಸ್ಟ್ 2025 ರಲ್ಲಿ, ಅವರು ತಮ್ಮ 11 ಕ್ಯಾರೆಟ್ ವಜ್ರದ ನಿಶ್ಚಿತಾರ್ಥದ ಉಂಗುರವನ್ನು ಪ್ರದರ್ಶಿಸುವ ಮೂಲಕ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು. ಈ ಉಂಗುರವು $1.1 ಮಿಲಿಯನ್ (ಸುಮಾರು 9 ಕೋಟಿ ರೂ.) ಮೌಲ್ಯದ್ದಾಗಿದೆ.
ಈ ಉಂಗುರವನ್ನು ಖ್ಯಾತ ಆಭರಣ ವಿನ್ಯಾಸಕ ಎರಿಕ್ ಡಾ ಜ್ಯುವೆಲರ್ ರಚಿಸಿದ್ದಾರೆ. ಇದರ ಮಧ್ಯದಲ್ಲಿ ದೊಡ್ಡ ಪಚ್ಚೆ ವಜ್ರ ಮತ್ತು ಅದರ ಸುತ್ತಲೂ ಸಣ್ಣ ವಜ್ರಗಳಿವೆ. ಈ ಜೋಡಿ ಪ್ಯಾರಿಸ್ ಫ್ಯಾಷನ್ ವೀಕ್ 2025 ರ ಸಂದರ್ಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತು.
ರಾಜಮನೆತನ, ಐಷಾರಾಮಿ ಜೀವನ, ಫ್ಯಾಶನ್ ಇವೆಲ್ಲದರ ಸಂಯೋಜನೆಯೇ ಶೇಖಾ ಮಹ್ರಾ ಅವರ ಜೀವನವಾಗಿದೆ. ಶೇಖಾ ತಮ್ಮ ಪ್ರತಿಯೊಂದು ಉಡುಪಿನಲ್ಲಿಯೂ ರಾಜಮನೆತನದ ಸೊಬಗು ಪ್ರದರ್ಶಿಸುತ್ತಾರೆ. ಯಾವ ಖ್ಯಾತ ನಟಿಯರೂ ಇವರ ಫ್ಯಾಶನ್ ಸೆನ್ಸ್ ಮುಂದೆ ಮಂಡಿಯೂರಲೇಬೇಕು.



