ನಿಮಗೆ ಅರಿಯದಂತೆ ಆರೋಗ್ಯ ಹಾಳು ಮಾಡುತ್ತಿವೆ ಮನೆಯಲ್ಲಿರುವ ಈ ಮೂರು ವಸ್ತುಗಳು
Lifestyle news: ಮನೆಯ ಅಲಂಕಾರಕ್ಕೆ ನಾವು ಅನೇಕ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಆದರೆ ನಾವು ಅಲಂಕಾರಕ್ಕೆಂದು ಬಳಸುವ ಕೆಲ ವಸ್ತುಗಳು ನಮಗೆ ಲಾಭಕ್ಕಿಂತ ಜಾಸ್ತಿ ನಷ್ಟವನ್ನೇ ತರಬಹುದು. ನಮಗೆ ಅರಿವಿಲ್ಲದಂತೆ ನಾವೇ ಹಣಕೊಟ್ಟು ಮನೆಗೆ ವಿಷವನ್ನು ತಂದಿಟ್ಟಿರಬಹುದು.
ಅಮೆರಿಕ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಎಂಬವರು ಡೇಂಜರ್ ಗೃಹೋಪಯೋಗಿ ವಸ್ತುಗಳನ್ನು ಪಟ್ಟಿ ಮಾಡಿದ್ದು ಇದರಲ್ಲಿ ಯಾವೆಲ್ಲ ವಸ್ತುಗಳು ಸ್ಥಾನ ಪಡೆದಿವೆ ಎಂಬುದನ್ನು ತಿಳಿದುಕೊಳ್ಳೋಣ.
ಈ ಪಟ್ಟಿಯಲ್ಲಿ ಸ್ಥಾನಪಡೆದಿರುವ ಪ್ರಮುಖ ಮೂರು ವಸ್ತುಗಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬಳಕೆಯಲ್ಲಿದೆ. ಇವುಗಳು ರಹಸ್ಯವಾಗಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದೆ ಎಂದು ಡಾ. ಸೌರಭ್ ಹೇಳಿದ್ದಾರೆ. ಹೀಗಾಗಿ ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಕೂಡಲೇ ಅವುಗಳನ್ನು ಕಸದ ಡಬ್ಬಿಗೆ ಹಾಕುವ ಸಲಹೆ ನೀಡಿದ್ದಾರೆ ಡಾ. ಸೌರಭ್.
ಈ ಮೂರು ವಸ್ತುಗಳನ್ನು ಎಂದಿಗೂ ನಿಮ್ಮ ಮನೆಗೆ ಖರೀದಿಸಿ ತರಬೇಡಿ
ಸುಗಂಧದ್ರವ್ಯಯುಕ್ತ ಮೇಣದಬತ್ತಿ
Lifestyle News: ಅನೇಕರು ಮನೆಯಲ್ಲಿ ಸಂಜೆ ಸಮಯದಲ್ಲಿ ಸುಗಂಧವನ್ನು ಸ್ರವಿಸುವ ಮೇಣದಬತ್ತಿಯನ್ನು ಹಚ್ಚುತ್ತಾರೆ. ಆದರೆ ಬಹುತೇಕ ಪರಿಮಳಯುಕ್ತ ಮೇಣದಬತ್ತಿಗಳು ಥಾಲೇಟ್ಗಳನ್ನು ಹೊಂದಿರುತ್ತದೆ.ಇವುಗಳು ನಮ್ಮ ದೇಹದಲ್ಲಿ ಹಾರ್ಮೋನ್ಗಳ ಕಾರ್ಯಕ್ಕೆ ಅಡ್ಡಿಪಡಿಸುತ್ತವೆ. ಅಲ್ಲದೇ ಇವುಗಳು ಶ್ವಾಸಕೋಶದ ಆರೋಗ್ಯಕ್ಕೂ ಸೂಕ್ತವಾದದ್ದಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಪ್ಲಾಸ್ಟಿಕ್ ಕಟ್ಟಿಂಗ್ ಬೋರ್ಡ್ಗಳು :
ಇದಂತೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕಾಣಸಿಗುತ್ತದೆ. ತರಕಾರಿ ಕತ್ತರಿಸಲು ಬಹುತೇಕರು ಇದನ್ನು ಬಳಕೆ ಮಾಡುತ್ತಾರೆ. ಆದರೆ ನಿಮ್ಮ ಮನೆಯಲ್ಲಿರುವ ಪ್ಲಾಸ್ಟಿಕ್ ಕಟ್ಟಿಂಗ್ ಬೋರ್ಡ್ಗಳ ಮೇಲಿರುವ ಚಾಕುವಿನ ಗುರುತುಗಳನ್ನೊಮ್ಮೆ ಗುರುತಿಸಿ.
ಇದರಲ್ಲಿ ಕತ್ತರಿಸಿದ ತರಕಾರಿಗಳ ಸೇವನೆಯಿಂದ ದೇಹದ ಒಳಗೆ ಮೈಕ್ರೋಪ್ಲಾಸ್ಟಿಕ್ಗಳು ಸೇರುತ್ತದೆ. ಕ್ರಮೇಣವಾಗಿ ಇದು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಇದರ ಬದಲು ಬಿದಿರಿನ ಅಥವಾ ಗಾಜಿನ ಬೋರ್ಡ್ಗಳನ್ನು ಬಳಕೆ ಮಾಡಬಹುದಾಗಿದೆ.
Also Read: ಕರ್ಪೂರದಲ್ಲಿದೆ ವಾಸ್ತು ದೋಷಕ್ಕೆ ಪರಿಹಾರ
ನಾನ್ಸ್ಟಿಕ್ ಪಾತ್ರೆಗಳು :
ನಾನ್ಸ್ಟಿಕ್ ಪಾತ್ರೆಗಳನ್ನು ಈಗ ಬಹುತೇಕರು ಬಳಕೆ ಮಾಡುತ್ತಾರೆ. ಆದರೆ ಇದರ ಮೇಲೆ ಬೀಳುವ ಒಂದೇ ಒಂದು ಗೀರು ಸಾಕಷ್ಟು ತೊಂದರೆಗಳಿಗೆ ಕಾರಣವಾಗಬಹುದು. PFOA ರಾಸಾಯನಿಕಗಳು ಇದು ಸಂತಾನೋತ್ಪತ್ತಿ ಮತ್ತು ಹಾರ್ಮೋನುಗಳ ಸಮಸ್ಯೆಗಳಿಗೆ ಸಂಬಂಧಿಸಿದ ರಾಸಾಯನಿಕವಾಗಿದೆ.
ಈಗ ಮಾರುಕಟ್ಟೆಗಳಲ್ಲಿ PFOA-ಮುಕ್ತವಾಗಿರುವ ಆಧುನಿಕ ನಾನ್-ಸ್ಟಿಕ್ ಪ್ಯಾನ್ಗಳು ಸಹ ಲಭ್ಯವಿದೆ. ಆದರೂ ಈ ಗೀರು ಬಿದ್ದಾಗ ಈ ಪಾತ್ರೆಗಳು ಸಹ ಸೂಕ್ಷ್ಮ ಲೇಪನ ಕಣಗಳನ್ನು ಬಿಡುಗಡೆ ಮಾಡಬಹುದು. ಕಾಲಾಂತರದಲ್ಲಿ ಈ ಪಾತ್ರೆಗಳನ್ನು ಬಿಸಿ ಮಾಡಿದಾಗ ವಿಷದಂಶ ಬಿಡುಗಡೆಯಾಗುತ್ತದೆ ಎಂದು ತಿಳಿದುಬಂದಿದೆ.
ಹೀಗಾಗಿ ಸ್ಟೇನ್ಲೆಸ್ ಸ್ಟೀಲ್ಗಳು, ಕಬ್ಬಿಣ, ಸೆರಾಮಿಕ್ ಕುಕ್ವೇರ್ಗಳನ್ನು ಬಳಕೆ ಮಾಡುವುದು ಆರೋಗ್ಯದ ದೃಷ್ಠಿಯಿಂದ ಉತ್ತಮ ಆಯ್ಕೆಯಾಗಿದೆ. ಇವುಗಳ ನಿರ್ವಹಣೆ ಕೊಂಚ ಕಷ್ಟವಾಗಿದ್ದರೂ ಸಹ ಆರೋಗ್ಯದ ಮೇಲೆ ಅಡ್ಡಪರಿಣಾಮ ಇರುವುದಿಲ್ಲ
Also Read: ದೀಪಾವಳಿ 2025 ಯಾವಾಗ? ದಿನಾಂಕ, ತಿಥಿ, ಪೂಜಾ ಸಮಯ ತಿಳಿಯಿರಿ



